ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ಗೆ ದಿನಗಣನೆ ಶುರುವಾಗಿದೆ. ಮಾರ್ಚ್ 26 ರಂದು ಹಾಲಿ ಚಾಂಪಿಯನ್ ಸಿಎಸ್ಕೆ ಮತ್ತು ಕೆಕೆಆರ್ ಉದ್ಘಾಟನಾ ಪಂದ್ಯದಲ್ಲಿ ಆಡಲಿವೆ. ಐಪಿಎಲ್ ಎಂದೊಡನೆ ಬೌಂಡರಿ ಸಿಕ್ಸರ್ಗಳ ಸುರಿಮಳೆ, ದಾಖಲೆಗಳು ನೆನಪಾಗುತ್ತವೆ. 14 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿರುವ ಶ್ರೀಮಂತ ಲೀಗ್ನಲ್ಲಿ ಹೆಚ್ಚು ಶತಕ ಸಿಡಿಸಿದ ತಂಡಗಳ ಬಗ್ಗೆ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.
ಐಪಿಎಲ್ ಇತಿಹಾಸದಲ್ಲಿ ಜನಪ್ರಿಯ ತಂಡಗಳಲ್ಲಿ ಒಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರು ಬಾರಿ ಫೈನಲ್ ತಲುಪಿದರೂ ಒಮ್ಮೆಯೂ ಚಾಂಪಿಯನ್ ಪಟ್ಟ ಅಲಂಕರಿಸಿಲ್ಲ. ಆದರೆ, ಹಲವಾರು ಬ್ಯಾಟಿಂಗ್ ದಾಖಲೆಗಳನ್ನು ತನ್ನ ಹೆಸರಿನಲ್ಲಿ ಬರೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 14 ಆವೃತ್ತಿಗಳಲ್ಲಿ ಆರ್ಸಿಬಿ ಬ್ಯಾಟರ್ಗಳು 14 ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಇದು ಐಪಿಎಲ್ನಲ್ಲಿ ತಂಡವೊಂದು ಸಿಡಿಸಿರುವ ಗರಿಷ್ಠ ಶತಕಗಳಾಗಿವೆ. ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ಗೇಲ್ 5, ವಿರಾಟ್ ಕೊಹ್ಲಿ 5, ಎಬಿ ಡಿ ವಿಲಿಯರ್ಸ್ 2, ಮನೀಶ್ ಪಾಂಡೆ , ದೇವದತ್ ಪಡಿಕ್ಕಲ್ ತಲಾ ಒಂದು ಶತಕ ದಾಖಲಿಸಿದ್ದಾರೆ.
ಇನ್ನು ಎರಡನೇ ಸ್ಥಾನದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಇನ್ನೂ ಕಾಯುತ್ತಿರುವ 2014ರ ರನ್ನರ್ ಆಪ್ ಪಂಜಾಬ್ ಕಿಂಗ್ಸ್ 13 ಶತಕಗಳನ್ನು ಒಳಗೊಂಡು 2ನೇ ಸ್ಥಾನದಲ್ಲಿದೆ.
ಐಪಿಎಲ್ನಲ್ಲಿ ಹೆಚ್ಚು ಶತಕ ಸಿಡಿಸಿದ ತಂಡಗಳು ವಿವರ
- ರಾಯಲ್ ಚಾಲೆಂಜರ್ಸ್ ಬೆಂಗಳೂರು-14 ಶತಕ
- ಪಂಜಾಬ್ ಕಿಂಗ್ಸ್- 13 ಶತಕ
- ಡೆಲ್ಲಿ ಕ್ಯಾಪಿಟಲ್ಸ್- 10 ಶತಕ
- ಚೆನ್ನೈ ಸೂಪರ್ ಕಿಂಗ್ಸ್- 9 ಶತಕ
- ರಾಜಸ್ಥಾನ್ ರಾಯಲ್ಸ್- 9 ಶತಕ
- ಮುಂಬೈ ಇಂಡಿಯನ್ಸ್ - 4 ಶತಕ
- ಸನ್ರೈಸರ್ಸ್ ಹೈದರಾಬಾದ್- 3 ಶತಕ
- ಕೋಲ್ಕತ್ತಾ ನೈಟ್ ರೈಡರ್ಸ್- ಒಂದು ಶತಕ(ಐಪಿಎಲ್ ಶುರವಾದ ಮೊದಲ ಪಂದ್ಯದಲ್ಲಿ ದಾಖಲಿಸಿದ್ದೆ ಫಸ್ಟ್ ಅಂಡ್ ಲಾಸ್ಟ್)
ಇದನ್ನೂ ಓದಿ:ಐಪಿಎಲ್ 'ಚೆಂಡು'ಮಾರುತ: ಬೌಲರ್‌ಗಳ ಬೆವರಿಳಿಸಿ ರನ್‌ಶಿಖರ ಕಟ್ಟಿದ ಸರದಾರರು!