ಮುಂಬೈ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಇತಿಹಾಸದಲ್ಲಿ 100ನೇ ಜಯ ಸಾಧಿಸಿದ 4ನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಂಗಳವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ 4 ವಿಕೆಟ್ಗಳ ಜಯ ಸಾಧಿಸುತ್ತಿದ್ದಂತೆ ಈ ದಾಖಲೆಗೆ ಪಾತ್ರವಾಯಿತು.
ಆರ್ಸಿಬಿ 214 ಪಂದ್ಯಗಳನ್ನಾಡಿ 100ನೇ ಜಯ ಸಾಧಿಸಿತು. ಇದೇ ಆರ್ಸಿಬಿ ತಂಡ ಐಪಿಎಲ್ನಲ್ಲಿ ಅತಿ ಹೆಚ್ಚು ಸೋಲುಂಡಿರುವ 3ನೇ ತಂಡ ಎಂಬ ಬೇಡದ ದಾಖಲೆಗೂ ಪಾತ್ರವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್(112) ಮತ್ತು 2ನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್(110) ಅತಿ ಹೆಚ್ಚು ಸೋಲುಂಡ ಮೊದಲೆರಡು ತಂಡಗಳಾಗಿವೆ.
-
A century of wins. Countless unforgettable memories. 💯🥳#PlayBold #WeAreChallengers #IPL2022 #Mission2022 #RCB #ನಮ್ಮRCB pic.twitter.com/jvWNOW8mIq
— Royal Challengers Bangalore (@RCBTweets) April 6, 2022 " class="align-text-top noRightClick twitterSection" data="
">A century of wins. Countless unforgettable memories. 💯🥳#PlayBold #WeAreChallengers #IPL2022 #Mission2022 #RCB #ನಮ್ಮRCB pic.twitter.com/jvWNOW8mIq
— Royal Challengers Bangalore (@RCBTweets) April 6, 2022A century of wins. Countless unforgettable memories. 💯🥳#PlayBold #WeAreChallengers #IPL2022 #Mission2022 #RCB #ನಮ್ಮRCB pic.twitter.com/jvWNOW8mIq
— Royal Challengers Bangalore (@RCBTweets) April 6, 2022
ಆರ್ಸಿಬಿಗೂ ಮುನ್ನ ಮುಂಬೈ ಇಂಡಿಯನ್ಸ್ 125(219 ಪಂದ್ಯ), ಚೆನ್ನೈ ಸೂಪರ್ ಕಿಂಗ್ಸ್ 117(198 ಪಂದ್ಯ), ಕೋಲ್ಕತ್ತಾ ನೈಟ್ ರೈಡರ್ಸ್ 109(212 ಪಂದ್ಯ) ಜಯ ಸಾಧಿಸಿವೆ. ಇನ್ನು ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 170 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು. ಆರ್ಸಿಬಿ ಆರಂಭಿಕ ಆಘಾತದ ನಡುವೆಯೂ ದಿನೇಶ್ ಕಾರ್ತಿಕ್(44) ಮತ್ತು ಮೊಹಮ್ಮದ್ ಶಹ್ಬಾಜ್ ಅಹಮ್ದ್(45) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇನ್ನು 5 ಎಸೆತಗಳಿರುವಂತೆ ಜಯ ಸಾಧಿಸಿತು.
ಇದನ್ನೂ ಓದಿ:IPL 2022: ಕೆಕೆಆರ್ ವಿರುದ್ಧ ಚೊಚ್ಚಲ ಜಯದ ನಿರೀಕ್ಷೆಯಲ್ಲಿ ಮುಂಬೈ ಇಂಡಿಯನ್ಸ್