ETV Bharat / sports

ಧೋನಿ ನಾಯಕತ್ವ ತ್ಯಜಿಸಿದ್ದರೂ ಫೀಲ್ಡ್​ ಸೆಟ್ಟಿಂಗ್ ಮಾಡುವುದೇಕೆ?: ಟೀಕಾಕಾರರ ಬಾಯಿ ಮುಚ್ಚಿಸಿದ ಜಡ್ಡು

ಜಡೇಜಾರನ್ನು ನಾಯಕನಾಗಿ ನೇಮಿಸಿದ ನಂತರವೂ ಧೋನಿ ಫೀಲ್ಡ್​ ಸೆಟ್ಟಿಂಗ್, ಬೌಲಿಂಗ್ ಬದಲಾವಣೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದನ್ನು ಹರ್ಭಜನ್ ಸಿಂಗ್ ಮತ್ತು ಅಜಯ್ ಜಡೇಜಾ ಟೀಕಿಸಿದ್ದರು. ಆದರೆ ಧೋನಿ ಅಂದು ಏಕೆ ಆ ಕೆಲಸಗಳನ್ನು ನಿರ್ವಹಿಸಿದ್ದರೆಂಬುದನ್ನು ಜಡೇಜಾ ಬಹಿರಂಗಪಡಿಸಿದ್ದಾರೆ.

Ravindra Jadeja reveal why MS Dhoni is still setting the  filed for CSK during IPL 2022
ಜಡೇಜಾ -ಎಂಎಸ್ ಧೋನಿ
author img

By

Published : Apr 6, 2022, 8:17 PM IST

ಮುಂಬೈ: 2022ರ ಐಪಿಎಲ್​ಗೆ ಕೆಲವು ದಿನಗಳಿರುವಾಗ ಎಂ.ಎಸ್.ಧೋನಿ ನಾಯಕತ್ವದಿಂದ ಕೆಳಗಿಳಿದು, ಆ ಜಾಗಕ್ಕೆ ಆಲ್​ರೌಂಡರ್​ ರವೀಂದ್ರ ಜಡೇಜಾರನ್ನು ಆಯ್ಕೆ ಮಾಡಿದ್ದರು. ಇದೀಗ ಅವರು ಕೇವಲ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಪಂದ್ಯದ ವೇಳೆ ಕೆಲವು ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಿರುವುದಕ್ಕೆ ಹಲವು ಮಾಜಿ ಕ್ರಿಕೆಟಿಗರು ಟೀಕೆ ವ್ಯಕ್ತಪಡಿಸಿದ್ದರು.

ಜಡೇಜಾರನ್ನು ನಾಯಕನಾಗಿ ನೇಮಿಸಿದ ನಂತರವೂ ಧೋನಿ ಫೀಲ್ಡ್​ ಸೆಟ್ಟಿಂಗ್, ಬೌಲಿಂಗ್ ಬದಲಾವಣೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದನ್ನು ಹರ್ಭಜನ್ ಸಿಂಗ್ ಮತ್ತು ಅಜಯ್ ಜಡೇಜಾ ಟೀಕಿಸಿದ್ದರು. ಜಡೇಜಾ ತಮ್ಮ ನಾಯಕತ್ವದ ಹೊರೆಯನ್ನು ಧೋನಿ ಮೇಲೆ ಹೇರುತ್ತಿದ್ದಾರೆ, ನನಗೆ ಈಗಲೂ ಅವರೇ ನಾಯಕ ಎನ್ನಿಸುತ್ತಿದೆ ಎಂದರೆ, ಅಜಯ್ ಜಡೇಜಾ, ಧೋನಿ ಸಂಪೂರ್ಣ ಪಂದ್ಯವನ್ನು ಮುನ್ನಡೆಸುತ್ತಾರೆ, ಜಡೇಜಾ ಎಲ್ಲೋ ಫೀಲ್ಡ್ ಮಾಡುತ್ತಿರುತ್ತಾರೆ. ಇದು ನೋಡಲು ನನ್ನ ಪ್ರಕಾರ ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಆದರೆ, ಪಂಜಾಬ್ ವಿರುದ್ಧದ ಪಂದ್ಯದ ನಂತರ ಮಾತನಾಡಿದ್ದ ಜಡೇಜಾ, "ಕೊನೆಯ ಪಂದ್ಯ(ಲಖನೌ ಸೂಪರ್ ಜೈಂಟ್ಸ್) ಹೈ ಸ್ಕೋರಿಂಗ್ ಪಂದ್ಯವಾಗಿತ್ತು. ಹಾಗಾಗಿ ಡೀಪ್​ ಮಿಡ್​ ವಿಕೆಟ್​​ನಲ್ಲಿ ಕ್ಯಾಚ್​​ಗಳು ಹೆಚ್ಚಾಗಿ ಬರುವ ಸಾಧ್ಯತೆಯಿತ್ತು. ಆ ಜಾಗದಲ್ಲಿ ಅತ್ಯುತ್ತಮ ಫೀಲ್ಡರ್​ಗಳಿರಬೇಕೆಂದು ನಾವು ಚಿಂತಿಸಿದೆವು. ನಾನು ಅಲ್ಲಿ ಫೀಲ್ಡ್ ಮಾಡುವಾಗ ಬೌಲರ್​ಗಳೊಂದಿಗೆ ಮಾತನಾಡುವುದಕ್ಕೆ ಆಗುತ್ತಿರಲಿಲ್ಲ.

ಈ ಕಾರಣದಿಂದ ಮಹಿಭಾಯ್​ ಬೌಲರ್​ಗಳಿಗೆ ಸಲಹೆ ಮತ್ತು ಫಿಲ್ಡ್​ ಸೆಟ್ಟಿಂಗ್ ಮಾಡುತ್ತಿದ್ದರು. ಇದು ಒಳ್ಳೆಯದೇ. ಏಕೆಂದರೆ, ಅವರಿಗೆ ತುಂಬಾ ಅನುಭವವಿದೆ. ಸಲಹೆಗಳಿಗಾಗಿ ನಾವು ಬೇರೆ ಯಾರ ಬಳಿಯೂ ಹೋಗಬೇಕಾಗಿಲ್ಲ. ಅವರೊಬ್ಬ ದಂತಕತೆ ಮತ್ತು ಹಲವಾರು ವರ್ಷಗಳ ಕಾಲ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅನುಭವವಿದೆ. ಅವರಂತಹ ಆಟಗಾರ ನಮ್ಮ ಡ್ರೆಸಿಂಗ್ ರೂಮ್​ನಲ್ಲಿರುವುದು ನಮ್ಮ ಅದೃಷ್ಠ ಎಂದು ಸಿಎಸ್​ಕೆ ನಾಯಕ ಟೀಕಿಗಳಿಗೆ ಪ್ರತ್ಯುತ್ತರ ನೀಡಿದ್ದಾರೆ.

ಆದಾಗ್ಯೂ, ಈ ಆವೃತ್ತಿಯಲ್ಲಿ 4 ಬಾರಿಯ ಚಾಂಪಿಯನ್​ ಸಿಎಸ್​ಕೆ ಆಡಿದ ಮೂರು ಪಂದ್ಯಗಳಲ್ಲೂ ಸೋಲು ಕಂಡು ನಿರಾಶೆಯನುಭವಿಸಿದೆ. ಸಿಎಸ್​ಕೆ ಏಪ್ರಿಲ್ 9ರಂದು ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಕಣಕ್ಕಿಳಿಯಲಿದೆ.

ಇದನ್ನೂ ಓದಿ:ಮುಂಬೈ ತಂಡ ಸೇರಿದ ಹೊಸದರಲ್ಲಿ ಪಾಂಡ್ಯ ಬ್ರದರ್ಸ್​​ ನೀಡಿದ ನೆರವು ಮರೆಯಲಾಗಲ್ಲ: ಇಶಾನ್ ಕಿಶನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.