-
From setting the stage on fire & discussing tactics to sharing moments of laughter 🔥😎
— BCCI (@BCCI) February 20, 2023 " class="align-text-top noRightClick twitterSection" data="
The all-round duo of @imjadeja & @akshar2026 chats after #TeamIndia win the 2️⃣nd #INDvAUS Test 👍 👍 - By @RajalArora
FULL INTERVIEW 🎥 ⬇️https://t.co/YW7ZMWSBwX pic.twitter.com/gAqNvrvRHO
">From setting the stage on fire & discussing tactics to sharing moments of laughter 🔥😎
— BCCI (@BCCI) February 20, 2023
The all-round duo of @imjadeja & @akshar2026 chats after #TeamIndia win the 2️⃣nd #INDvAUS Test 👍 👍 - By @RajalArora
FULL INTERVIEW 🎥 ⬇️https://t.co/YW7ZMWSBwX pic.twitter.com/gAqNvrvRHOFrom setting the stage on fire & discussing tactics to sharing moments of laughter 🔥😎
— BCCI (@BCCI) February 20, 2023
The all-round duo of @imjadeja & @akshar2026 chats after #TeamIndia win the 2️⃣nd #INDvAUS Test 👍 👍 - By @RajalArora
FULL INTERVIEW 🎥 ⬇️https://t.co/YW7ZMWSBwX pic.twitter.com/gAqNvrvRHO
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ 2-0 ಅಂತರದ ಮುನ್ನಡೆ ಸಾಧಿಸಿದೆ. ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು 6 ವಿಕೆಟ್‌ಗಳಿಂದ ಬಗ್ಗುಬಡಿಯಿತು. ಈ ಗೆಲುವಿನಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ 10 ವಿಕೆಟ್ ಪಡೆದು ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಎರಡನೇ ಟೆಸ್ಟ್ನ ನಂತರ ಅಕ್ಷರ್ ಪಟೇಲ್ ರವೀಂದ್ರ ಜಡೇಜಾರನ್ನು ಸಂದರ್ಶಿಸಿದರು. ಈ ವೇಳೆ ತಮಗೆ ಬೌಲಿಂಗ್ಗೆ ಅವಕಾಶ ಸಿಗದಿರುವ ಬಗ್ಗೆ ತಮಾಷೆ ಮಾಡಿದರು. ನೀವು ಅಕ್ಷರ್ಗೆ ಬೌಲಿಂಗ್ ನೀಡುವುದು ಬೇಡ ಅಂತ ನಿರ್ಧಾರ ಮಾಡಿದ್ರಾ? ಎಂದು ಜಡೇಜಾರನ್ನು ಕಿಚಾಯಿಸಿದರು. ಪಟೇಲ್ ಮೊದಲ ಟೆಸ್ಟ್ನ ಪ್ರಥಮ ಇನ್ನಿಂಗ್ಸ್ನಲ್ಲಿ 10 ಓವರ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 3 ಓವರ್ ಮಾತ್ರ ಬೌಲ್ ಮಾಡಿದ್ದರು. ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 12 ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 1 ಓವರ್ ಮಾಡಿದ್ದಾರೆ.
ಗಾಯದ ಸಮಸ್ಯೆಯಿಂದ ಸುಮಾರು 6 ತಿಂಗಳು ತಂಡದಿಂದ ಹೊರಗಿದ್ದ ನೀವು (ಜಡೇಜಾ) ತಂಡ ಸೇರಿದ ಕೂಡಲೇ ಎಲ್ಲಾ ವಿಕೆಟ್‌ಗಳನ್ನು ಪಡೆಯುವ ಶಪಥ ಮಾಡಿದ್ರಾ? ವಿರಾಮದ ನಂತರ ಬಂದು ವೇಗವಾಗಿ ಬೌಲಿಂಗ್ ಮಾಡುತ್ತಿದ್ದೀರಿ ಎಂದು ಅಕ್ಷರ್ ಕೇಳಿದರು. ಇದಕ್ಕೆ ಜಡೇಜಾ, "ಹೌದು, ತುಂಬಾ ವೇಗವಾಗಿ ಬೌಲಿಂಗ್ ಮಾಡುತ್ತಿದ್ದೆ" ಎಂದರು.
ಜಡೇಜಾ ಪ್ರಶ್ನಿಸಿ, "ನೀವು (ಅಕ್ಷರ್) ಬ್ಯಾಟಿಂಗ್ ಮಾಡುವಾಗ, ಟರ್ನಿಂಗ್ ಟ್ರ್ಯಾಕ್‌ನಲ್ಲಿ ಕಡಿಮೆ ಬೌನ್ಸ್ ಪಿಚ್‌ನಲ್ಲಿ ನಾವು ಆಡುತ್ತಿದ್ದೇವೆ ಎಂದು ಅನ್ನಿಸಲಿಲ್ಲ. ಪಿಚ್ ಸಮತಟ್ಟಾದ ಮೇಲ್ಮೈ ಹೊಂದಿದೆ ಎಂದು ತೋರುತ್ತಿತ್ತು. ಬ್ಯಾಟಿಂಗ್ ವೇಳೆ ಆಸ್ಟ್ರೇಲಿಯಾದ ಬೌಲರ್‌ಗಳು ಸಾಮಾನ್ಯವಾಗಿ ಕಾಡಲು ಪ್ರಾರಂಭಿಸುತ್ತಾರೆ, ಆದರೆ ನಿಮ್ಮ ಬ್ಯಾಟಿಂಗ್ ರಹಸ್ಯ ಏನೆಂದು ಪ್ರಶ್ನಿಸಿದರು. ಇದಕ್ಕೆ ಅಕ್ಷರ್, "ನೀವು (ಜಡೇಜಾ) ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದೀರಿ ಮತ್ತು ನಾನದನ್ನು ಬ್ಯಾಟಿಂಗ್‌ನಲ್ಲಿ ಮಾಡುತ್ತಿದ್ದೇನೆ" ಎಂದು ನಕ್ಕರು. ನಂತರ ಮಾತನಾಡಿದ ಜಡೇಜಾ,"ನಾವು ತಂಡವಾಗಿ ಎಲ್ಲರೂ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿದ್ದೇವೆ ಮತ್ತು ಯಶಸ್ಸು ಗಳಿಸಿದ್ದೇವೆ. ಇದು ಟೀಂ ಎಫರ್ಟ್" ಎಂದು ಹೇಳಿದರು.
ಇದನ್ನೂ ಓದಿ: ಕೊನೆಯ ಎರಡು ಟೆಸ್ಟ್ಗೆ ತಂಡ ಪ್ರಕಟ: ರಾಹುಲ್ಗೆ ಉಪನಾಯಕ ಸ್ಥಾನ ಖೋತಾ