ಮುಂಬೈ : ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಅವರು ನೀಡಿರುವ ಹೇಳಿಕೆ ನೋಡಿದರೆ 2022ರ ಲೀಗ್ನಲ್ಲಿ ತಮ್ಮ ತವರು ಫ್ರಾಂಚೈಸಿ ಸೇರುವುದು ಖಚಿತವೆನಿಸುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಜೊತೆ ನನಗೆ ಅವಿನಾಭಾವ ಸಂಬಂಧವಿದೆ. ಚೆನ್ನೈ ತಂಡ ನನಗೆ ಮೊದಲ ಶಾಲೆಯಿದ್ದಂತೆ. ನಾನು ಅಲ್ಲಿ ಕ್ರಿಕೆಟ್ ವರ್ಣಮಾಲೆ ಕಲಿತಿದ್ದೇನೆ. ಎಲ್ಕೆಜಿ,ಯುಕೆಜಿಯಿಂದ 10ನೇ ತರಗತಿಯವರೆಗೆ ನಾನು ಇಲ್ಲೇ ಓದಿದ್ದೇನೆ. ನಂತರ ಉನ್ನತ ವ್ಯಾಸಂಗಕ್ಕೆ ಬೇರೆ ಹೊರಗಡೆ ಹೋಗಿದ್ದೆ.
ಓದಿದ್ದೆಲ್ಲಾ ಮುಗಿದ ಮೇಲೆ ಯಾರೇ ಆದರೂ ಮತ್ತೆ ಮನೆಗೆ ಬರಲೇಬೇಕು. ನಾನು ಕೂಡ ನನ್ನ ಸ್ವಂತ ಮನೆಗೆ(ಚೆನ್ನೈ)ಬರಬೇಕೆಂದುಕೊಂಡಿದ್ದೇನೆ. ಆದರೆ, ಇದೆಲ್ಲಾ ಶೀಘ್ರದಲ್ಲಿ ನಡೆಯುವ ಐಪಿಎಲ್ ಹರಾಜಿನ ಮೇಲೆ ಆಧಾರವಾಗಿದೆ. ಅಲ್ಲಿ ಏನಾಗುತ್ತದೆ ಎಂಬುದರ ಪರಿಣಾಮಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.
ಐಪಿಎಲ್ನ 10 ತಂಡಗಳು ಹತ್ತಾರೂ ಯೋಜನೆಗಳೊಂದಿಗೆ ಇವೆ. ನನ್ನನ್ನು ಯಾವ ತಂಡ ದಕ್ಕಿಸಿಕೊಳ್ಳಲಿದೆಯೋ ಗೊತ್ತಿಲ್ಲ. ಆದರೆ, ನಾನು ವೃತ್ತಿಪರ ಆಟಗಾರನಾಗಿ ಮಿಂಚಲು ಪ್ರಯತ್ನಿಸುತ್ತೇನೆ. ಫ್ರಾಂಚೈಸಿ ನಮ್ಮನ್ನು ನಂಬಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತದೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳಲು ನಾನು ಕೈಲಾದದಷ್ಟು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
ಅಶ್ವಿನ್ 2008ರಲ್ಲಿ ಭಾರತ ತಂಡಕ್ಕೆ ಬರುವ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 2015ರಲ್ಲಿ ಬೆಟ್ಟಿಂಗ್ ಪ್ರಕರಣದಲ್ಲಿ ಚೆನ್ನೈ 2 ವರ್ಷ ಬ್ಯಾನ್ ಆದ ನಂತರ 2016-2017ರಲ್ಲಿ ರೈಸಿಂಗ್ ಪುಣೆ ಸೂಪರ್ ಜೇಂಟ್ಸ್ ಮತ್ತು 2018-19ರಲ್ಲಿ ಪಂಜಾಬ್, 2020-21ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು.
ಇದನ್ನೂ ಓದಿ:ಕೊಹ್ಲಿಗೆ ಅಸಮಾಧಾನಗೊಂಡಿಲ್ಲ, ಆಯ್ಕೆ ಸಮಿತಿ ನಡೆಸಿಕೊಂಡ ರೀತಿಗೆ ನೊಂದಿದ್ದಾರೆ : ಕೀರ್ತಿ ಆಜಾದ್