ಮುಂಬೈ: ಭಾರತದ ವಿರುದ್ಧ ವಾಂಖೆಡೆಯಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 372 ರನ್ಗಳಿಂದ ಸೋಲು ಕಂಡರೂ, ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡದ ಎಲ್ಲ 10 ವಿಕೆಟ್ ಪಡೆದ ಅಜಾಜ್ ಪಟೇಲ್ಗೆ ಭಾರತೀಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿಶೇಷ ಜರ್ಸಿ ಉಡುಗೊರೆಯಾಗಿ ನೀಡಲಿದ್ದಾರೆ.
ಭಾರತೀಯ ಮೂಲದ ಅಜಾಜ್ ಪಟೇಲ್ 2ನೇ ಟೆಸ್ಟ್ನಲ್ಲಿ 119 ರನ್ ನೀಡಿ 10 ವಿಕೆಟ್ ಬಾಚಿಕೊಂಡಿದ್ದರು. ಈ ಮೂಲಕ ಜಿಮ್ ಲೇಕರ್ ಮತ್ತು ಭಾರತದ ಅನಿಲ್ ಕುಂಬ್ಳೆ ಬಳಿಕ ಈ ಸಾಧನೆ ಮಾಡಿದ ವಿಶ್ವದ 3ನೇ ಬೌಲರ್ ಹಾಗೂ ವಿದೇಶಿ ಟೆಸ್ಟ್ನಲ್ಲಿ ಮೊದಲ ಬೌಲರ್ ಎನಿಸಿಕೊಂಡಿದ್ದರು.
-
Special Mumbai connect 👍
— BCCI (@BCCI) December 6, 2021 " class="align-text-top noRightClick twitterSection" data="
Secret behind 10-wicket haul 😎
A memorable #TeamIndia souvenir ☺️
🎤 @ashwinravi99 interviews Mr Perfect 10 @AjazP at the Wankhede 🎤 #INDvNZ @Paytm
Watch this special by @28anand 🎥 🔽https://t.co/8fBpJ27xqj pic.twitter.com/gyrLLBcCBM
">Special Mumbai connect 👍
— BCCI (@BCCI) December 6, 2021
Secret behind 10-wicket haul 😎
A memorable #TeamIndia souvenir ☺️
🎤 @ashwinravi99 interviews Mr Perfect 10 @AjazP at the Wankhede 🎤 #INDvNZ @Paytm
Watch this special by @28anand 🎥 🔽https://t.co/8fBpJ27xqj pic.twitter.com/gyrLLBcCBMSpecial Mumbai connect 👍
— BCCI (@BCCI) December 6, 2021
Secret behind 10-wicket haul 😎
A memorable #TeamIndia souvenir ☺️
🎤 @ashwinravi99 interviews Mr Perfect 10 @AjazP at the Wankhede 🎤 #INDvNZ @Paytm
Watch this special by @28anand 🎥 🔽https://t.co/8fBpJ27xqj pic.twitter.com/gyrLLBcCBM
ಈ ಪಂದ್ಯದ ಬಳಿಕ ಅಜಾಜ್ ಪಟೇಲ್ಗೆ ಅಭಿನಂದನೆ ಸಲ್ಲಿಸಿದ ಅಶ್ವಿನ್, ಭಾರತದ ಎಲ್ಲ 15 ಆಟಗಾರರ ಆಟೋಗ್ರಾಫ್ ಮಾಡಿರುವ ತಮ್ಮ ಟೆಸ್ಟ್ ಜರ್ಸಿ ಉಡುಗೊರೆಯಾಗಿ ನೀಡಿದರು.
ವಾಂಖೆಡೆಯಲ್ಲಿ ಆಡುವುದು ನನ್ನ ಕನಸಾಗಿತ್ತು ಮತ್ತು ನನ್ನ ತವರಿನ ನೆಲದಲ್ಲಿ ಇಂತಹ ಸಾಧನೆ ಮಾಡಿರುವುದು ತುಂಬಾ ವಿಶೇಷ ಎನಿಸುತ್ತಿದೆ. ನನಗೆ ಮಾತ್ರವಲ್ಲ ನನ್ನ ಕುಟುಂಬಕ್ಕೂ ಇದು ವಿಶೇಷವಾಗಿದೆ ಎಂದು ಅಶ್ವಿನ್ ನಡೆಸಿ ಸಂದರ್ಶನದಲ್ಲಿ ಅಜಾಜ್ ಪಟೇಲ್ ಹೇಳಿದ್ದಾರೆ.
ಇದನ್ನೂ ಓದಿ:'2 ವರ್ಷಗಳೇ ಬೇಕಾಯ್ತು'; ಭಾರತ ತಂಡದ ಕೋಚ್ ಆಗಲು ದ್ರಾವಿಡ್ರನ್ನು ಒಪ್ಪಿಸಿದ ಬಗೆಯನ್ನು ವಿವರಿಸಿದ ದಾದಾ