ETV Bharat / sports

ಐಪಿಎಲ್ ಮಾಜಿ​ ಆಟಗಾರ​​, ನೇಪಾಳ ಕ್ರಿಕೆಟ್​​ ಕ್ಯಾಪ್ಟನ್ ವಿರುದ್ಧ ಅತ್ಯಾಚಾರ ಆರೋಪ

ನೇಪಾಳ ಕ್ರಿಕೆಟ್ ತಂಡದ ಕ್ಯಾಪ್ಟನ್​​ ಸಂದೀಪ್​​ ಲಮಿಚಾನೆ ವಿರುದ್ಧ ಅತ್ಯಾಚಾರದ ಗಂಭೀರ ಆರೋಪ ಕೇಳಿ ಬಂದಿದೆ.

cricketer Sandeep Lamichhane
cricketer Sandeep Lamichhane
author img

By

Published : Sep 7, 2022, 11:28 AM IST

ಕಠ್ಮಂಡು: ನೇಪಾಳ ಕ್ರಿಕೆಟ್​ ತಂಡದ ಕ್ಯಾಪ್ಟನ್​​, ಐಪಿಎಲ್​​ ಆಟಗಾರ ಸಂದೀಪ್​ ಲಮಿಚಾನೆ ವಿರುದ್ಧ ಅತ್ಯಾಚಾರದ ಗಂಭೀರ ಆರೋಪ ಕೇಳಿ ಬಂದಿದೆ. 17 ವರ್ಷದ ಅಪ್ರಾಪ್ತೆಯೋರ್ವರು ಕ್ರಿಕೆಟಿಗನ ವಿರುದ್ಧ ದೂರು ದಾಖಲು ಮಾಡಿದ್ದಾಗಿ ನೇಪಾಳ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾಗಿ ಮಾಹಿತಿ ನೀಡಿದ್ದಾರೆ. ಲಾಮಿಚಾನೆ ಪ್ರಸ್ತುತ ಕೆರಿಬಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಆಡುತ್ತಿದ್ದಾರೆ. ಈ ಹಿಂದೆ ಇವರು 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ಫ್ರಾಂಚೈಸಿ ಪರ ಪದಾರ್ಪಣೆ ಮಾಡಿದ್ದರು. ಈ ಮೂಲಕ ಇಂಡಿಯನ್​ ಪ್ರೀಮಿಯರ್ ಲೀಗ್​​ ಆಡುವ ನೇಪಾಳದ ಮೊದಲ ಕ್ರಿಕೆಟಿಗನಾಗಿ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ: ನೇಪಾಳಿ ಕ್ರಿಕೆಟರ್ ಸಂದೀಪ್ ಲಮಿಚಾನೆಗೆ ಕೊರೊನಾ ಸೋಂಕು

ಲೆಗ್​​​​ ಸ್ಪಿನ್ನರ್​ ಸಂದೀಪ್​ 2016ರ ಅಂಡರ್​​ 19 ವಿಶ್ವಕಪ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ, 2018ರ ಐಪಿಎಲ್​​ನಲ್ಲಿ ಅವರಿಗೆ ಮಣೆ ಹಾಕಲಾಗಿತ್ತು. ಮೂಲ ಬೆಲೆ 20 ಲಕ್ಷ ರೂ. ನೀಡಿ ಖರೀದಿ ಮಾಡಲಾಗಿತ್ತು.

ಸಂದೀಪ್​​​, ನೇಪಾಳ ತಂಡದ ಪರ 30 ಏಕದಿನ ಪಂದ್ಯ ಆಡಿದ್ದು 69 ವಿಕೆಟ್ ಪಡೆದುಕೊಂಡಿದ್ದಾರೆ. 44 ಟಿ20 ಕ್ರಿಕೆಟ್ ಪಂದ್ಯ ಆಡಿ 85 ವಿಕೆಟ್ ಕಬಳಿಸಿದ್ದಾರೆ. ಐಪಿಎಲ್​​ನಲ್ಲೂ 13 ವಿಕೆಟ್ ಪಡೆದುಕೊಂಡಿದ್ದಾರೆ. ವಿದೇಶಿ ಲೀಗ್​​​​ಗಳಲ್ಲಿ 136 ಟಿ20 ಪಂದ್ಯಗಳ ಮೂಲಕ 193 ವಿಕೆಟ್​​ ಸಾಧನೆ ತೋರಿದ್ದಾರೆ. ಮುಖ್ಯವಾಗಿ ಬಿಗ್​ಬ್ಯಾಷ್​, ಕೆರೆಬಿಯನ್ ಪ್ರೀಮಿಯರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್​ ಲೀಗ್, ಪಾಕಿಸ್ತಾನ ಪ್ರೀಮಿಯರ್​ ಲೀಗ್​ನಲ್ಲಿ ಸಂದೀಪ್ ಮಿಂಚಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.