ETV Bharat / sports

ರೈಲ್ವೇಸ್​-ಕರ್ನಾಟಕ ಪಂದ್ಯ ಡ್ರಾ : ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿ 3 ಅಂಕ ಪಡೆದ ಮನೀಶ್ ಪಡೆ - ರಣಜಿ ಟ್ರೋಫಿ 2022

2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 63.7 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 223 ರನ್​ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತು. ಮಯಾಂಕ್ ಅಗರ್ವಾಲ್ 56, ರವಿಕುಮಾರ್ ಸಮರ್ಥ್​ 83, ಸಿದ್ಧಾರ್ಥ್​ 39, ಮನೀಶ್ ಅಜೇಯ 24 ರನ್​ಗಳಿಸಿದ್ದರು. ಉಳಿದ ಬ್ಯಾಟರ್​ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು..

karnataka vs railways Ranji match ended with dr
ಕರ್ನಾಟಕ ರೈಲ್ವೇಸ್​ ಪಂದ್ಯ ಡ್ರಾ
author img

By

Published : Feb 20, 2022, 6:59 PM IST

ಚೆನ್ನೈ : ಕರ್ನಾಟಕ ಮತ್ತು ರೈಲ್ವೇಸ್ ನಡುವಿನ ರಣಜಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಮನೀಶ್ ಪಾಂಡೆ ಪಡೆ 3 ಅಂಕ ಪಡೆದರೆ, ರೈಲ್ವೇಸ್ ಒಂದು ಅಂಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಕರ್ನಾಟಕ ಮೊದಲ ಇನ್ನಿಂಗ್ಸ್​​ನಲ್ಲಿ ಸಿದ್ಧಾರ್ಥ್​ ಕೆವಿ(146) ಮತ್ತು ಮನೀಶ್ ಪಾಂಡೆ(156) ಅವರ ಶತಕದ ನೆರವಿನಿಂದ 481 ರನ್​ಗಳಿಸಿದರೆ, ನಂತರ ಕರ್ನಾಟಕ ತಂಡದ ಬೌಲರ್​ಗಳು ರೈಲ್ವೇಸ್ ತಂಡವನ್ನು​ 426ರನ್​ಗಳಿಗೆ ಆಲೌಟ್​ ಮಾಡುವ ಮೂಲಕ 55 ರನ್​ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ತಂದುಕೊಟ್ಟಿದ್ದರು. ಕೃಷ್ಣಪ್ಪ ಗೌತಮ್ 127ಕ್ಕೆ 4, ರೋನಿತ್ ಮೋರೆ 67ಕ್ಕೆ 3, ವಿದ್ಯಾಧರ್ ಪಾಟಿಲ್​ 77ಕ್ಕೆ2 ವಿಕೆಟ್​ ಪಡೆದಿದ್ದರು.

2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 63.7 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 223 ರನ್​ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತು. ಮಯಾಂಕ್ ಅಗರ್ವಾಲ್ 56, ರವಿಕುಮಾರ್ ಸಮರ್ಥ್​ 83, ಸಿದ್ಧಾರ್ಥ್​ 39, ಮನೀಶ್ ಅಜೇಯ 24 ರನ್​ಗಳಿಸಿದ್ದರು. ಉಳಿದ ಬ್ಯಾಟರ್​ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

ರೈಲ್ವೇಸ್​ 69ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ವೈಶಾಕ್ ವಿಜಯ್​ಕುಮಾರ್​ 16ಕ್ಕೆ2, ಕೆ.ಗೌತಮ್ 23ಕ್ಕೆ 1, ಸಮರ್ಥ್​ ಸೊನ್ನೆಗೆ 1 ವಿಕೆಟ್ ಪಡೆದರು. ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಫೆಬ್ರವರಿ 24ರಿಂದ ಆಡಲಿದೆ.

ಇದನ್ನೂ ಓದಿ:ರಣಜಿ ಟ್ರೋಫಿ : ಪದಾರ್ಪಣೆ ಪಂದ್ಯದಲ್ಲೇ 2 ಶತಕ ಸಿಡಿಸಿ ದಾಖಲೆ ಬರೆದ ಯಶ್​ ಧುಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.