ಮುಂಬೈ : ಇಶಾನ್ ಕಿಶನ್, ತಿಲಕ್ ವರ್ಮಾರ ಅರ್ಧಶತಕದ ಹೊರತಾಗಿಯೂ ಮುಂಬೈ ಇಂಡಿಯನ್ಸ್ ತಂಡ ರಾಜಸ್ತಾನ ರಾಯಲ್ಸ್ ವಿರುದ್ಧ ಸೋಲು ಕಂಡಿದೆ. ರಾಯಲ್ಸ್ ನೀಡಿದ್ದ 194 ರನ್ಗಳಿಗೆ ಉತ್ತರವಾಗಿ ಮುಂಬೈ ತಂಡ 170 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಐಪಿಎಲ್ನ 2ನೇ ಪಂದ್ಯದಲ್ಲೂ 5 ಬಾರಿಯ ಚಾಂಪಿಯನ್ ಮುಂಬೈ ಸೋಲು ಕಂಡಿದೆ.
ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ದೊಡ್ಡ ಮೊತ್ತ ಚೇಸ್ ಮಾಡಲು ಭದ್ರ ಬುನಾದಿ ಹಾಕಿಕೊಡಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ನಾಯಕ ರೋಹಿತ್ ಶರ್ಮಾ(10) ಬೇಗನೇ ನಿರ್ಗಮಿಸಿ ನಿರಾಶೆ ಮೂಡಿಸಿದರು. ಬಳಿಕ ಬಂದ ಅನ್ಮೋಲ್ಪ್ರೀತ್ ಸಿಂಗ್(5) ಕೂಡ ಔಟಾದರು. ತಂಡದ ಸಂಕಷ್ಟದ ವೇಳೆ ಜೊತೆಯಾದ ಕಳೆದ ಪಂದ್ಯದ ಹೀರೋ ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ತನಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ದೊಡ್ಡ ಇನ್ನಿಂಗ್ಸ್ ಕಟ್ಟಿದರು.
-
That's that from Match 9. @rajasthanroyals win by 23 runs.
— IndianPremierLeague (@IPL) April 2, 2022 " class="align-text-top noRightClick twitterSection" data="
Scorecard - https://t.co/VsJIgyi126 #MIvRR #TATAIPL pic.twitter.com/vlgHbeqmjf
">That's that from Match 9. @rajasthanroyals win by 23 runs.
— IndianPremierLeague (@IPL) April 2, 2022
Scorecard - https://t.co/VsJIgyi126 #MIvRR #TATAIPL pic.twitter.com/vlgHbeqmjfThat's that from Match 9. @rajasthanroyals win by 23 runs.
— IndianPremierLeague (@IPL) April 2, 2022
Scorecard - https://t.co/VsJIgyi126 #MIvRR #TATAIPL pic.twitter.com/vlgHbeqmjf
ತಿಲಕ್ ವರ್ಮಾ 3 ಬೌಂಡರಿ 5 ಭರ್ಜರಿ ಸಿಕ್ಸರ್ ಒಳಗೊಂಡ ಮಹತ್ವದ 61 ರನ್ ಬಾರಿಸಿ ತಮ್ಮ ಶಕ್ತಿ ಪ್ರದರ್ಶಿಸಿದರು. ಇನ್ನೊಂದು ತುದಿಯಲ್ಲಿ ಇಶಾನ್ ಕಿಶನ್ ಕೂಡ ತಾವೇನೂ ಕಮ್ಮಿ ಇಲ್ಲ ಎಂಬಂತೆ ಬ್ಯಾಟ್ ಬೀಸಿ 5 ಬೌಂಡರಿ, 1 ಸಿಕ್ಸರ್ ಸಮೇತ 54 ರನ್ ಬಾರಿಸಿದರು. ಇವರಿಬ್ಬರು ಔಟಾದ ಬಳಿಕ ದಿಢೀರ್ ಕುಸಿತ ಕಂಡ ಮುಂಬೈ ತಂಡ ಮೇಲೇಳಲೇ ಇಲ್ಲ.
ಆಲ್ರೌಂಡರ್ ಕೀರನ್ ಪೋಲಾರ್ಡ್ 22 ರನ್ ಗಳಿಸಿದರೆ, ಉಳಿದ ಬ್ಯಾಟ್ಸಮನ್ಗಳು ಒಂದಂಕಿ ಕೂಡ ದಾಟಲಿಲ್ಲ. ಇದರಿಂದ ತಂಡ ಅಂತಿಮವಾಗಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 170 ರನ್ ಮಾಡಿ ಸೋಲೊಪ್ಪಿಕೊಂಡಿತು.
ಇನ್ನು ರಾಜಸ್ತಾನ ರಾಯಲ್ಸ್ ಪರವಾಗಿ ನವದೀಪ್ ಸೈನಿ 2, ಯಜುವೇಂದ್ರ ಚಹಲ್ 2 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್, ಪ್ರಸಿದ್ಧ ಕೃಷ್ಣ, ರವಿಚಂದ್ರನ್ ಅಶ್ವಿನ್ ತಲಾ ಒಂದು ವಿಕೆಟ್ ಪಡದರು.
-
Woke up and chose to HALLA BOL! 👊#RoyalsFamily | #दिलसेरॉयल | #IPL2022 | #MIvRR pic.twitter.com/XC3LCiCPQL
— Rajasthan Royals (@rajasthanroyals) April 2, 2022 " class="align-text-top noRightClick twitterSection" data="
">Woke up and chose to HALLA BOL! 👊#RoyalsFamily | #दिलसेरॉयल | #IPL2022 | #MIvRR pic.twitter.com/XC3LCiCPQL
— Rajasthan Royals (@rajasthanroyals) April 2, 2022Woke up and chose to HALLA BOL! 👊#RoyalsFamily | #दिलसेरॉयल | #IPL2022 | #MIvRR pic.twitter.com/XC3LCiCPQL
— Rajasthan Royals (@rajasthanroyals) April 2, 2022
ರಾಯಲ್ಸ್ ಶತಕದ 'ಜೋಶ್': ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ರಾಜಸ್ತಾನ ತಂಡ ಜೋಸ್ ಬಟ್ಲರ್ರ ಶತಕದಾಟದಿಂದ 194 ರನ್ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕ ಆಟಗಾರ ಜೋಸ್ ಬಟ್ಲರ್ ಐಪಿಎಲ್ನ 15ನೇ ಸೀಸನ್ನಲ್ಲಿ ಮೊದಲ ಶತಕ ಸಿಡಿಸಿದ ಸಾಧನೆ ಮಾಡಿದರು. 68 ಎಸೆತಗಳಲ್ಲಿ ಬರೋಬ್ಬರಿ 100 ರನ್ ಗಳಿಸಿದರು. ಬಟ್ಲರ್ ಇನಿಂಗ್ಸ್ಲ್ಲಿ 5 ಸಿಕ್ಸರ್, 11 ಬೌಂಡರಿ ಇದ್ದವು. ಇದಲ್ಲದೇ, ನಾಯಕ ಸಂಜು ಸ್ಯಾಮ್ಸನ್ (35), ಶಿಮ್ರಾನ್ ಹೆಟ್ಮಾಯಿರ್(35) ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾದರು.
ಬೂಮ್ರಾ ಮ್ಯಾಜಿಕ್ : ಮುಂಬೈ ಬೌಲರ್ಗಳು ಬಟ್ಲರ್ ಅಬ್ಬರಕ್ಕೆ ಸುಸ್ತಾದರೆ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬೂಮ್ರಾ 3 ಪ್ರಮುಖ ವಿಕೆಟ್ಗಳನ್ನು ಉರುಳಿಸಿದರು. ಅದರಲ್ಲೂ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಜೋಸ್ ಬಟ್ಲರ್ ವಿಕೆಟ್ ಪಡೆದು ಕಟ್ಟಿ ಹಾಕಿದರು.
ಓದಿ: ಜೋಸ್ ಬಟ್ಲರ್ ಶತಕ.. ಮುಂಬೈ ಇಂಡಿಯನ್ಸ್ಗೆ 194 ರನ್ಗಳ ಗುರಿ ನೀಡಿದ ರಾಜಸ್ತಾನ ರಾಯಲ್ಸ್