ETV Bharat / sports

ಮಿಂಚಿದ ಬೌಲರ್ಸ್: ರಾಜಸ್ಥಾನ ತಂಡವನ್ನು 158ಕ್ಕೆ ನಿಯಂತ್ರಿಸಿದ ಮುಂಬೈ ಇಂಡಿಯನ್ಸ್

author img

By

Published : Apr 30, 2022, 7:16 PM IST

Updated : Apr 30, 2022, 9:37 PM IST

ಸತತ 8 ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಮೊದಲ ಗೆಲುವಿಗಾಗಿ ಹಾತೊರೆಯುತ್ತಿದ್ದಿ, ಇಂದು 2 ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಟಿಮ್​ ಡೇವಿಡ್​ ಹಾಗೂ ಬದಲೀ ಆಟಗಾರನಾಗಿ ತಂಡಕ್ಕೆ ಸೇರಿಕೊಂಡಿರುವ ಕುಮಾರ್ ಕಾರ್ತಿಕೇಯನ್​ ಅವರಿಗೆ ಅವಕಾಶ ನೀಡಿದೆ. ಇವರಿಗೆ ಬ್ರೇವಿಸ್ ಮತ್ತು ಉನಾದ್ಕಟ್​ ಜಾಗ ಬಿಟ್ಟುಕೊಟ್ಟಿದ್ದಾರೆ.

ರಾಜಸ್ಥಾನ ತಂಡವನ್ನು 158ಕ್ಕೆ ನಿಯಂತ್ರಿಸಿದ ಮುಂಬೈ

ಮುಂಬೈ: ಮುಂಬೈ: ಐಪಿಎಲ್​​ 15ನೇ ಆವೃತ್ತಿಯಲ್ಲಿ ಚೊಚ್ಚಲ ನಿರೀಕ್ಷೆಯಲ್ಲಿರುವ ಮುಂಬೈ ಇಂಡಿಯನ್ಸ್ ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದು, 158 ರನ್​ಗಳ ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಸಫಲವಾಗಿದೆ.

ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ ರಾಯಲ್ಸ್ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಅತ್ಯುತ್ತಮ ಫಾರ್ಮ್​ನಲ್ಲಿದ್ದ ಜಾಸ್​ ಬಟ್ಲರ್​ ಪವರ್​ ಪ್ಲೇ ನಲ್ಲಿ ಅಬ್ಬರಿಸಲು ಇಂದು ವಿಫಲರಾದರು. ಅವರು 15ನೇ ಓವರ್​ವರೆಗೆ 46 ಎಸೆತಗಳಲ್ಲಿ ಕೇವಲ 43 ರನ್​ಗಳನ್ನು ಮಾತ್ರ ಸಿಡಿಸಿದ್ದರು. ಆದರೆ 16ನೇ ಓವರ್​ನಲ್ಲಿ ಸತತ 4 ಸಿಕ್ಸರ್​ ಸಿಡಿಸಿ ತಮ್ಮ ಮೊತ್ತವನ್ನು 67​ಕ್ಕೆ ಏರಿಸಿಕೊಂಡು ಅದೇಶ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು.

ಮುಂಬೈ ತಂಡ ಬಟ್ಲರ್​ ನಿಯಂತ್ರಿಸಿದ್ದಲ್ಲದೆ, ಉಳಿದ ಬ್ಯಾಟರ್​ಗಳ ವಿಕೆಟ್​ಗಳ ಪಡೆಯುವಲ್ಲಿಯೂ ಸಫಲವಾಯಿತು. ಒಂದು ಬಟ್ಲರ್​ ರನ್​ಗಳಿಸಲು ಪರದಾಡುತ್ತಿದ್ದರೆ, ಅವರ ಇನ್ನಿಂಗ್ಸ್ ಆರಂಭಿಸಿದ ಪಡಿಕ್ಕಲ್ 15 ಸಂಜು ಸಾಮ್ಸನ್​ 16 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಡೇರಿಲ್ ಮಿಚೆಲ್ 20 ಎಸೆತಗಳಲ್ಲಿ 17 ರನ್​ಗಳಿಸಿ ಇಂದೂ ಕೂಡ ವಿಫಲರಾದರೆ, ಕಳೆದ ಪಂದ್ಯದ ಹೀರೋ ಪರಾಗ್ 3 ರನ್​ಗಳಿಸಿ ಪೆವಿಲಿಯನ್​ಗೆ ವಾಪಾಸಾದರು.

ರವಿಚಂದ್ರನ್​ ಚುರುಕಿನ ಬ್ಯಾಟಿಂಗ್ ಮೂಲಕ 9 ಎಸೆತಗಳಲ್ಲಿ 21 ರನ್​ಗಳಿಸಿದ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು. ಆದರೆ ಹೆಟ್ಮಾಯರ್ 14 ಎಸೆತಗಳಲ್ಲಿ ಗಳನ್ನೆದುರಿಸಿ ಕೇವಲ 6 ರನ್​ ಮಾತ್ರಗಳಿಸಿದರು.

ಮುಂಬೈ ಪರ ರಿಲೆ ಮೆರಿಡಿತ್​​ 19ಕ್ಕೆ 1, ಹೃತಿಕ್ ಶೊಕೀನ್ 47ಕ್ಕೆ2, ಡೇನಿಯಲ್ ಸ್ಯಾಮ್​ 32ಕ್ಕೆ1, ಕುಮಾರ ಕಾರ್ತಿಕೇಯನ್ 19ಕ್ಕೆ1 ವಿಕೆಟ್ ಪಡೆದರು.

ಟೀಮ್​ ಅಪ್​ಡೇಟ್: ಸತತ 8 ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಮೊದಲ ಗೆಲುವಿಗಾಗಿ ಹಾತೊರೆಯುತ್ತಿದ್ದಿ, ಇಂದು 2 ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಟಿಮ್​ ಡೇವಿಡ್​ ಹಾಗೂ ಬದಲೀ ಆಟಗಾರನಾಗಿ ತಂಡಕ್ಕೆ ಸೇರಿಕೊಂಡಿರುವ ಕುಮಾರ್ ಕಾರ್ತಿಕೇಯನ್​ ಅವರಿಗೆ ಅವಕಾಶ ನೀಡಿದೆ. ಇವರಿಗೆ ಬ್ರೇವಿಸ್ ಮತ್ತು ಉನಾದ್ಕಟ್​ ಜಾಗ ಬಿಟ್ಟುಕೊಟ್ಟಿದ್ದಾರೆ.

ಮತ್ತೆ ಅಗ್ರಸ್ಥಾನಕ್ಕೇರುವ ಉತ್ಸಾಹದಲ್ಲಿರುವ ರಾಜಸ್ಥಾನ್ ರಾಯಲ್ಸ್ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯುತ್ತಿದೆ. ರಾಯಲ್ಸ್​ ಆಡಿರುವ 8 ಪಂದ್ಯಗಳಲ್ಲಿ 12 ಗೆಲುವು ಮತ್ತು 2 ಸೋಲು ಕಂಡು 2ನೇ ಸ್ಥಾನದಲ್ಲಿದೆ.

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್(ನಾಯಕ/ವಿಕೀ), ಡೆರಿಲ್ ಮಿಚೆಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ಕುಲದೀಪ್ ಸೇನ್

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಇಶಾನ್ ಕಿಶನ್ (ವಿಕೀ), ರೋಹಿತ್ ಶರ್ಮಾ (ನಾಯಕ), ಟಿಮ್ ಡೇವಿಡ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಹೃತಿಕ್ ಶೊಕೀನ್, ಡೇನಿಯಲ್ ಸಾಮ್ಸ್, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ರಿಲೆ ಮೆರೆಡಿತ್

ಇದನ್ನೂ ಓದಿ:ಕ್ಯಾಪ್ಟನ್​ ರೋಹಿತ್ ಶರ್ಮಾಗೆ ಜನ್ಮದಿನದ ಸಂಭ್ರಮ.. ಹಿಟ್​ಮ್ಯಾನ್​ ಹೆಸರಿನಲ್ಲಿರುವ ಟಾಪ್ 5 ವಿಶ್ವದಾಖಲೆಗಳಿವು

Last Updated : Apr 30, 2022, 9:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.