ಮುಂಬೈ: ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಆಸ್ಟ್ರೇಲಿಯಾ ವೇಗದ ಬೌಲರ್ ನೇಥನ್ ಕೌಲ್ಟರ್ ನೈಲ್ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರಬಿದ್ದಿದ್ದಾರೆ.
ರಾಜಸ್ಥಾನದ ಆವೃತ್ತಿಯ ಮೊದಲ ಪಂದ್ಯದಲ್ಲೇ ಕೌಲ್ಟರ್ ನೈಲ್ ಸೈಡ್ ಸ್ಟ್ರೈನ್ನಿಂದ ಬಳಲಿ ಮೈದಾನ ತೊರೆದಿದ್ದರು. ಅವರು ಪಂದ್ಯದಲ್ಲಿ ತಮ್ಮ 4 ಓವರ್ ಕೋಟಾವನ್ನು ಪೂರ್ಣಗೊಳಿಸಿರಲಿಲ್ಲ. ಅವರು ಕೇವಲ 3 ಓವರ್ ಎಸೆದಿದ್ದರು. ನಂತರದ 2 ಪಂದ್ಯಗಳಲ್ಲಿ ಅವರ ಬದಲಿಗೆ ಭಾರತದ ವೇಗಿ ನವದೀಪ್ ಸೈನಿ ತಂಡ ಸೇರಿಕೊಂಡಿದ್ದರು.
-
Until we meet again, NCN. 💗
— Rajasthan Royals (@rajasthanroyals) April 6, 2022 " class="align-text-top noRightClick twitterSection" data="
Speedy recovery. 🤗#RoyalsFamily | #HallaBol | @coulta13 pic.twitter.com/XlcFUcTg5L
">Until we meet again, NCN. 💗
— Rajasthan Royals (@rajasthanroyals) April 6, 2022
Speedy recovery. 🤗#RoyalsFamily | #HallaBol | @coulta13 pic.twitter.com/XlcFUcTg5LUntil we meet again, NCN. 💗
— Rajasthan Royals (@rajasthanroyals) April 6, 2022
Speedy recovery. 🤗#RoyalsFamily | #HallaBol | @coulta13 pic.twitter.com/XlcFUcTg5L
ಈ ಕುರಿತು ಫ್ರಾಂಚೈಸಿ ತನ್ನ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಪೋಸ್ಟ್ ಮಾಡಿ ನೇಥನ್ ಕೌಲ್ಟರ್ ನೈಲ್ಗೆ ಬೀಳ್ಕೊಡುಗೆ ನೀಡಿದ್ದಾರೆ. ಹಾಗಾಗಿ ಅವರು ಈ ಆವೃತ್ತಿಯಲ್ಲಿ ತಂಡಕ್ಕೆ ಅಲಭ್ಯರಾಗಲಿದ್ದಾರೆ ಎನ್ನುವುದು ಖಚಿತವಾಗಿದೆ. ಇನ್ನು ಕೌಲ್ಟರ್ ನೈಲ್ ಬದಲಿಗೆ ಆಸ್ಟ್ರೇಲಿಯಾದ ಆಲ್ರೌಂಡರ್ ಬೆನ್ ಕಟಿಂಗ್, ನಮೀಬಿಯಾದ ಡೇವಿಡ್ ವೀಸ್ ಅಥವಾ ಶ್ರೀಲಂಕಾ ತಂಡದ ನಾಯಕ ದಾಸುನ್ ಶನಕ ರಾಯಲ್ಸ್ ಬಳಗ ಸೇರಿಕೊಳ್ಳಬಹುದು ಎನ್ನಲಾಗುತ್ತಿದೆ.
ರಾಜಸ್ಥಾನ್ ರಾಯಲ್ಸ್ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ ನಿನ್ನೆ ನಡೆದ ಆರ್ಸಿಬಿ ವಿರುದ್ಧ ಪಂದ್ಯದಲ್ಲಿ 4 ವಿಕೆಟ್ಗಳ ರೋಚಕ ಜಯ ಸೋಲು ಕಂಡಿತು.
ಇದನ್ನೂ ಓದಿ: ಧೋನಿ ನಾಯಕತ್ವ ತ್ಯಜಿಸಿದ್ದರೂ ಫೀಲ್ಡ್ ಸೆಟ್ಟಿಂಗ್ ಮಾಡುವುದೇಕೆ?: ಟೀಕಾಕಾರರ ಬಾಯಿ ಮುಚ್ಚಿಸಿದ ಜಡ್ಡು