ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾ ಆಗುವಂತೆ ಮಾಡಿದ್ದ ಮಳೆ ಇಂದಿನಿಂದ ಆರಂಭವಾಗಿರುವ 2ನೇ ಟೆಸ್ಟ್ಗೂ ಅಡಚಣೆಯನ್ನುಂಟು ಮಾಡಿದೆ.
ಕ್ರಿಕೆಟ್ ಕಾಶಿ ಎಂದೇ ಖ್ಯಾತಿ ಪಡೆದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂದಿನಿಂದ 2ನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ಭಾರತಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿದೆ. ಆದರೆ, ಕೇವಲ 18.4 ಓವರ್ಗಳ ಆಟ ಮಾತ್ರ ನಡೆದಿದ್ದು, ನಿರೀಕ್ಷೆಯಂತೆ ಮಳೆ ಆರಂಭವಾದ ಕಾರಣ ನಿಗದಿತ ಸಮಯಕ್ಕೂ ಮೊದಲೇ ಭೋಜನ ವಿರಾಮ ತೆಗೆದುಕೊಳ್ಳಲಾಗಿದೆ.
ಭಾರತ ತಂಡ 18.4 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 46 ರನ್ಗಳಿಸಿದೆ. ರೋಹಿತ್ ಶರ್ಮಾ 66 ಎಸೆತಗಳಲ್ಲಿ 6 ಬೌಂಡರಿ ಸಹಿತ 35 ರನ್ಗಳಿಸಿದ್ದರೆ, ಕನ್ನಡಿಗ ಕೆಎಲ್ ರಾಹುಲ್ ಅಜೇಯ 10 ರನ್ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
-
Rain stops play at Lord's 🌧️
— ICC (@ICC) August 12, 2021 " class="align-text-top noRightClick twitterSection" data="
India are 46/0 with Rohit Sharma unbeaten on 35* and KL Rahul keeping him company on 10*.
#WTC23 | #ENGvIND | https://t.co/rhWT86mZ0z pic.twitter.com/BBWrTtMDRq
">Rain stops play at Lord's 🌧️
— ICC (@ICC) August 12, 2021
India are 46/0 with Rohit Sharma unbeaten on 35* and KL Rahul keeping him company on 10*.
#WTC23 | #ENGvIND | https://t.co/rhWT86mZ0z pic.twitter.com/BBWrTtMDRqRain stops play at Lord's 🌧️
— ICC (@ICC) August 12, 2021
India are 46/0 with Rohit Sharma unbeaten on 35* and KL Rahul keeping him company on 10*.
#WTC23 | #ENGvIND | https://t.co/rhWT86mZ0z pic.twitter.com/BBWrTtMDRq
ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಜ್ಯಾಕ್ ಕ್ರಾಲಿ ಬದಲಿಗೆ ಹಸೀಮ್ ಹಮೀದ್ , ಲಾರೆನ್ಸ್ ಬದಲಿಗೆ ಮೊಯೀನ್ ಅಲಿ ಮತ್ತು ಗಾಯಾಳು ಸ್ಟುವರ್ಟ್ ಬದಲಿಗೆ ಮಾರ್ಕ್ವುಡ್ ಇಂಗ್ಲೆಂಡ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಭಾರತ ಕೂಡ ಒಂದು ಬದಲಾವಣೆ ಮಾಡಿಕೊಂಡಿದೆ. ಗಾಯಾಳು ಶಾರ್ದೂಲ್ ಠಾಕೂರ್ ಬದಲಿಗೆ ಅನುಭವಿ ಇಶಾಂತ್ ಶರ್ಮಾ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಇಂಗ್ಲೆಂಡ್
ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್ (ನಾಯಕ), ಜಾನಿ ಬೈರ್‌ಸ್ಟೋವ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಸ್ಯಾಮ್ ಕರ್ರನ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್
ಭಾರತ
ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್