ETV Bharat / sports

ICC T20 rankings: 4ನೇ ಸ್ಥಾನಕ್ಕೇರಿದ ರಾಹುಲ್​, 10ನೇ ಸ್ಥಾನ ಉಳಿಸಿಕೊಂಡ ಕೊಹ್ಲಿ - ಐಸಿಸಿ ಟಿ20 ರ್ಯಾಂಕಿಂಗ್

ಟಿ20 ಶ್ರೇಯಾಂಕದಲ್ಲಿ ವೇಗಿ ಭುವನೇಶ್ವರ್​ ಕುಮಾರ್​ 20ನೇ ಸ್ಥಾನದಲ್ಲಿದ್ದು, ಭಾರತ ಅಗ್ರ ರ‍್ಯಾಂಕಿಂಗ್​​ನಲ್ಲಿರುವ ಬೌಲರ್ ಆಗಿದ್ದಾರೆ. ಇನ್ನು ಜಸ್ಪ್ರೀತ್ ಬುಮ್ರಾ 2 ಸ್ಥಾನ ಕುಸಿದು 26ನೇ ಶ್ರೇಯಾಂಕದಲ್ಲಿದ್ದಾರೆ. ಇತ್ತೀಚಿಗೆ ಭಾರತ ಹೆಚ್ಚು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡದಿರುವುದರಿಂದ ಬೌಲಿಂಗ್ ಮತ್ತು ಆಲ್​ರೌಂಡರ್​ ಶ್ರೇಯಾಂಕದಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ..

ICC T20 rankings
ICC T20 rankings
author img

By

Published : Feb 2, 2022, 7:43 PM IST

ದುಬೈ : ಭಾರತ ತಂಡದ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್​ ಐಸಿಸಿ ಟಿ20 ರ‍್ಯಾಂಕಿಂಗ್​​ನಲ್ಲಿ ಒಂದು ಸ್ಥಾನ ಏರಿಕೆ ಕಂಡಿದ್ದು, 4ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಮತ್ತು ನೂತನ ನಾಯಕ ಕ್ರಮವಾಗಿ 10 ಮತ್ತು 11ನೇ ಶ್ರೇಯಾಂಕದಲ್ಲಿ ಮುಂದುವರಿದಿದ್ದಾರೆ.

ಟಿ20 ಶ್ರೇಯಾಂಕದಲ್ಲಿ ವೇಗಿ ಭುವನೇಶ್ವರ್​ ಕುಮಾರ್​ 20ನೇ ಸ್ಥಾನದಲ್ಲಿದ್ದು, ಭಾರತ ಅಗ್ರ ರ‍್ಯಾಂಕಿಂಗ್​​ನಲ್ಲಿರುವ ಬೌಲರ್ ಆಗಿದ್ದಾರೆ. ಇನ್ನು ಜಸ್ಪ್ರೀತ್ ಬುಮ್ರಾ 2 ಸ್ಥಾನ ಕುಸಿದು 26ನೇ ಶ್ರೇಯಾಂಕದಲ್ಲಿದ್ದಾರೆ.

ಇತ್ತೀಚಿಗೆ ಭಾರತ ಹೆಚ್ಚು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡದಿರುವುದರಿಂದ ಬೌಲಿಂಗ್ ಮತ್ತು ಆಲ್​ರೌಂಡರ್​ ಶ್ರೇಯಾಂಕದಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ತೋರಿದ್ದ ವೆಸ್ಟ್​ ಇಂಡೀಸ್ ಎಡಗೈ ಸ್ಪಿನ್ನರ್​ ಅಕೀಲ್ ಹೊಸೈನ್​ ಮತ್ತು ಜೇಸನ್ ಹೋಲ್ಡರ್​ ಬೌಲಿಂಗ್ ರ‍್ಯಾಂಕಿಂಗ್​ನಲ್ಲಿ ಗಮನಾರ್ಹ ಏರಿಕೆ ಕಂಡಿದ್ದಾರೆ. ಹೊಸೈನ್ 15 ಸ್ಥಾನ ಬಡ್ತಿ ಪಡೆದು 18ಕ್ಕೆ ಏರಿಕೆ ಕಂಡರೆ, ಕೊನೆಯ ಪಂದ್ಯದಲ್ಲಿ ಡಬಲ್​ ಹ್ಯಾಟ್ರಿಕ್ ಪಡೆದಿದ್ದ ಜೇಸನ್​ ಹೋಲ್ಡರ್​ 3 ಸ್ಥಾನ ಏರಿಕೆ ಕಂಡು 23ರಲ್ಲಿದ್ದಾರೆ.

ಶೆಲ್ಡಾನ್ ಕಾಟ್ರೆಲ್​ 41ರಿಂದ 31ಕ್ಕೆ, ಇಂಗ್ಲೆಂಡ್​ನ ಮೊಯೀನ್ ಅಲಿ 35ರಿಂದ 32, ಲಿವಿಂಗ್​ಸ್ಟೋನ್​ 33 ಸ್ಥಾನ ಏರಿಕೆ ಕಂಡು 68ಕ್ಕೆ ಬಡ್ತಿ ಪಡೆದುಕೊಂಡಿದ್ದಾರೆ. ಶ್ರೀಲಂಕಾದ ವನಿಡು ಹಸರಂಗ ಮತ್ತು ದಕ್ಷಿಣ ಆಫ್ರಿಕಾದ ತಬ್ರೈಜ್ ಶಮ್ಸಿ ಮೊದಲೆರಡು ಸ್ಥಾನದಲ್ಲಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ಆಂಗ್ಲರ ವಿರುದ್ಧ 113 ರನ್​ಗಳಿಸಿದ ನಿಕೋಲಸ್​ ಪೂರನ್​ 26ರಿಂದ 18, ಬ್ರೆಂಡನ್​ ಕಿಂಗ್​ 83ರಿಂದ 58, ಕೀರನ್ ಪೊಲಾರ್ಡ್​ 75ರಿಂದ 60ಕ್ಕೆ ಬಡ್ತಿ ಪಡೆದಿದ್ದಾರೆ. ಆಲ್​ರೌಂಡರ್​ ವಿಭಾಗದಲ್ಲಿ ಇಂಗ್ಲೆಂಡ್ ತಂಡದ ಆಲ್​ರೌಂಡರ್​ ಮೊಯೀನ್​ ಅಲಿ ಮ್ಯಾಕ್ಸ್​ವೆಲ್ ಮತ್ತು ಹಸರಂಗರನ್ನು ಹಿಂದಿಕ್ಕಿ 3ನೇ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನ ಬಾಬರ್​ ಅಜಮ್​(805) ಮತ್ತು ಮೊಹಮ್ಮದ್​ ರಿಜ್ವಾನ್ ಮೊದಲೆರಡು ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಮಾರ್ಕ್ರಮ್​(796) 3ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಆತ 2022ರ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರನಾಗಲಿದ್ದಾರೆ, ಆರ್​ಸಿಬಿಗೆ ಒಳ್ಳೆಯ ನಾಯಕ ಕೂಡ : ಆಕಾಶ್ ಚೋಪ್ರಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.