ETV Bharat / sports

Rishi Sunak: ಅವರು ನನ್ನ ನೆಚ್ಚಿನ ಕ್ರಿಕೆಟಿಗ.. ಟೀಂ ಇಂಡಿಯಾದ ಮಾಜಿ ನಾಯಕನನ್ನು ಹೊಗಳಿದ ರಿಷಿ ಸುನಕ್

ಬ್ರಿಟನ್​ ಪ್ರಧಾನಿ ರಿಷಿ ಸುನಕ್ 2008 ರಲ್ಲಿ ಭಾರತದಲ್ಲಿ ಸಚಿನ್​ ತೆಂಡೂಲ್ಕರ್​ ಆಟವನ್ನು ನೋಡಿದ ಕ್ಷಣವನ್ನು ಬಿಸಿಸಿ ಟೀಮ್ಸ್​​ನೊಂದಿಗೆ ಹಂಚಿಕೊಂಡಿದ್ದಾರೆ.

sunak
Rishi Sunak
author img

By

Published : Jul 2, 2023, 7:10 PM IST

ಭಾರತದೊಂದಿಗೆ ನಂಟಿರುವ ಬ್ರಿಟನ್​ ಪ್ರಧಾನಿ ರಿಷಿ ಸುನಕ್ ಕ್ರೀಡಾ ಪ್ರೇಮಿ. ಅಲ್ಲದೇ ಅವರು ಕ್ರಿಕೆಟ್​ ಬಗ್ಗೆ ವಿಷೇಶ ಆಸಕ್ತಿ ಹೊಂದಿದ್ದಾರೆ ಎಂಬುದು ಹೆಚ್ಚಿನವರಿಗೆ ಗೊತ್ತೊರುವ ವಿಚಾರ. ಅವರು ಪ್ರಧಾನಿ ಆಗಿ ಅಧಿಕಾರ ಸ್ವಿಕರಿಸಿದ ನಂತರ ಒಮ್ಮೆ ಇಂಗ್ಲೆಂಡ್​ ಆಟಗಾರರ ಜೊತೆ ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಲ್ಲದೇ, ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಭಾರತದ ಅಳಿಯ ಸಂಬಂಧ ಮತ್ತು ಮೂರು ತಲೆಮಾರಿನ ಹಿಂದಿನ ನಂಟನ್ನು ಹೊಂದಿರುವ ಸುನಕ್​ ಭಾರತೀಯ ಕ್ರಿಕೆಟ್​ ಆಟಗಾರರ ಬಗ್ಗೆ ಮಾತನಾಡಿದ್ದಾರೆ. ಅವರು ಭಾರತದ ಮಾಜಿ ಆಟಗಾರರ ತಂತ್ರದ ಬಗ್ಗೆ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದಾರೆ. ಸುನಕ್​ ಹೇಳಿದ ತಂತ್ರ ಪ್ರಸ್ತುತ ನಡೆಯುತ್ತಿರುವ ಪಂದ್ಯಕ್ಕೆ ಇಂಗ್ಲೆಂಡ್​ ತಂಡಕ್ಕೆ ಸಲಹೆಯೂ ಆಗಬಹುದು.

ಕಳೆದ ವರ್ಷ ಯುಕೆ ಪ್ರಧಾನಿ ಪಟ್ಟ ಅಲಂಕರಿಸಿದ 43 ವರ್ಷದ ಸುನಕ್​, ಭಾರತದ ಮಾಜಿ ಆಟಗಾರ ರಾಹುಲ್​ ದ್ರಾವಿಡ್​ ಅವರ ವ್ಯಕ್ತಿತ್ವ, ತಂತ್ರ ಮತ್ತು ವರ್ತನೆಯನ್ನು ಹೆಚ್ಚು ಇಷ್ಟ ಪಡುತ್ತೇನೆ ಎಂದಿದ್ದಲ್ಲದೇ, 2008 ರಲ್ಲಿ ಸಚಿನ್​ ತೆಂಡೂಲ್ಕರ್​ ಅವರ ಬ್ಯಾಟಿಂಗ್​ನ್ನು ನೋಡಿರುವ ಕ್ಷಣಗಳನ್ನು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

ಸುನಕ್ ಅವರು ಬಿಸಿಸಿ ಟೀಮ್ಸ್​​ನ ಊಟದ ಸಮಯದಲ್ಲಿ ಅತಿಥಿಯಾಗಿದ್ದರು. ಆಗ ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿರುವ ದ್ರಾವಿಡ್ ಅವರ ಬ್ಯಾಟಿಂಗ್​ ತಂತ್ರವನ್ನು ನೆನೆದಿದ್ದಾರೆ. ಪ್ರಸ್ತುತ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ಆ್ಯಶಸ್​ 2023 ಸರಣಿ ಆಡುತ್ತಿದೆ. ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದ್ದು 1-0 ಯಿಂದ ಮುನ್ನಡೆಯಲ್ಲಿದೆ. ಎರಡನೇ ಟೆಸ್ಟ್​ ಲಾರ್ಡ್ಸ್​ನಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲೂ ಇಂಗ್ಲೆಂಡ್​ ಸಂಕಷ್ಟದಲ್ಲಿದೆ.

  • UK Prime Minister Rishi Sunak said, "Rahul Dravid is one of my favourites. I really loved his technique, his attitude and personality". pic.twitter.com/tmrN4xoTpi

    — Mufaddal Vohra (@mufaddal_vohra) July 2, 2023 " class="align-text-top noRightClick twitterSection" data=" ">

ಆಸ್ಟ್ರೇಲಿಯಾದ ಬೌನ್ಸರ್ ತಂತ್ರಕ್ಕೆ ಇಂಗ್ಲೆಂಡ್​ ವಿಕೆಟ್​ ಕಳೆದುಕೊಳ್ಳುತ್ತಿರುವ ಬಗ್ಗೆ ಚರ್ಚೆ ನಡೆದಾಗಿ ರಿಷಿ ಸುನಕ್ ರಾಹುಲ್​ ದ್ರಾವಿಡ್​ ಅವರ ಬ್ಯಾಟಿಂಗ್​ ತಂತ್ರದ ಬಗ್ಗೆ ನೆನೆದಿದ್ದಾರೆ. ಆಸಿಸ್​ ಬೌನ್ಸ್​ಗೆ ಅವರು ದ್ರಾವಿಡ್‌ನಂತೆ ಉಳಿಯಬೇಕೇ ಅಥವಾ ಡಕ್​ ಔಟ್​ ಆಗಬೇಕೆ? ಎಂಬ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ಸುನಕ್ "ರಾಹುಲ್ ದ್ರಾವಿಡ್ ನಿಜವಾಗಿಯೂ ನನ್ನ ನೆಚ್ಚಿನ ಆಟಗಾರರಲ್ಲಿ ಒಬ್ಬರು. ನಾನು ಅವರ ತಂತ್ರ, ಅವರ ವರ್ತನೆ ಮತ್ತು ವ್ಯಕ್ತಿತ್ವ ಇಷ್ಟಪಟ್ಟೆ" ಎಂದು ಹೇಳಿದರು.

ಸೌತಾಂಪ್ಟನ್‌ನಲ್ಲಿ ಜನಿಸಿದ ಕನ್ವರ್ಸೆಟಿವ್ ಪಕ್ಷದ ನಾಯಕ ನಂತರ 2008 ರಲ್ಲಿ ಭಾರತಕ್ಕೆ ಬಂದ ನೆನಪಿನ ಬಗ್ಗೆ ಮಾತನಾಡಿದರು. ಸಚಿನ್​ ತೆಂಡೂಲ್ಕರ್​ ಅವರ ಲೈವ್​ ಪಂದ್ಯ ವೀಕ್ಷಣೆ ಮಾಡಿದ್ದನ್ನು ಅವರು ನೆನೆದಿದ್ದಾರೆ. "2008 ರಲ್ಲಿ ಭಯೋತ್ಪಾದಕ ದಾಳಿ ನಡೆದಾಗ ನಾನು ಭಾರತದಲ್ಲಿದ್ದೆ. ಇಂಗ್ಲೆಂಡ್ ಕ್ರಿಕೆಟ್ ತಂಡ ಹೊರಟು ಹೋಗಿತ್ತು. ನಾನು ಸ್ನೇಹಿತನ ಮದುವೆಗೆ ಹೋಗಿದ್ದೆ. ಆದರೆ ಇಂಗ್ಲೆಂಡ್ ವಾಪಸ್​ ಬಂದು ಚೆನ್ನೈನಲ್ಲಿ ಟೆಸ್ಟ್ ಆಡಲು ನಿರ್ಧರಿಸಿತ್ತು. ನಾನು ಅಲ್ಲಿದ್ದೆ. ತೆಂಡೂಲ್ಕರ್ ಬೃಹತ್ ಮೊತ್ತ ಗಳಿಸಿದರು. ಆ ರನ್ ಚೇಸ್ ದುಃಖಕರವಾಗಿ, ನಾವು ಸೋತಿದ್ದವು. ಭಾರತ ಗೆದ್ದಿತ್ತು. ಸಚಿನ್​ ಬ್ಯಾಟ್ ಮಾಡಿದ್ದನ್ನು ನೋಡಿ ಸಂತೋಷವಾಗಿದೆ" ಎಂದರು.

ಅವರು ಭಾರತೀಯ ಅಭಿಮಾನಿಗಳಂತೆ ಕ್ರಿಕೆಟ್ ಬಗ್ಗೆ ಉತ್ಸಾಹವನ್ನು ಹೊಂದಿದ್ದಾರೆಯೇ ಎಂದು ಕೇಳಿದಾಗ, "ನಾನು ರಾಬಿನ್ ಸ್ಮಿತ್, ಹ್ಯಾಂಪ್‌ಶೈರ್ ಸ್ಟಾರ್, ಮಾಲ್ಕಮ್ ಮಾರ್ಷಲ್ ಅವರನ್ನು ನೋಡುತ್ತಾ ಬೆಳೆದಿದ್ದೇನೆ .. ಅವರೆಲ್ಲರನ್ನೂ ನೋಡುವ ಅದೃಷ್ಟ ನನಗೆ ಸಿಕ್ಕಿದೆ. ನಾನು ಪ್ರಧಾನಿ ಆದ ನಂತರ ಕ್ರೀಡೆಯನ್ನು ಹೆಚ್ಚು ನೋಡಲು ಅಗುತ್ತಿಲ್ಲ. ನಾನು ಇದಕ್ಕೂ ಮೊದಲು ಕ್ರೀಡೆಯನ್ನು ಹೆಚ್ಚು ಅನುಸರಿಸುತ್ತಿದ್ದೆ. ನಾನು ಉತ್ಸಾಹಭರಿತ ಕ್ರೀಡಾ ಅಭಿಮಾನಿ. ಇಂಗ್ಲೆಂಡ್ ಮೊದಲ ವಿಕೆಟ್ ಪಡೆದಾಗ ಲಾರ್ಡ್ಸ್‌ನಲ್ಲಿ ಎದ್ದುನಿಂತು, 'ದೇವರೇ' ಎಂದು ಕೈ ಮುಗಿಯುತ್ತಿದ್ದೆ" ಎಂದು ತಮ್ಮ ಕ್ರಿಕೆಟ್​ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: World Cup: ವಿಶ್ವಕಪ್​ ಆಯೋಜನೆ ತಪ್ಪಿದ ಮೈದಾನಕ್ಕೆ ಪರ್ಯಾಯ ಅವಕಾಶದ ಆಫರ್​ ಕೊಟ್ಟ ಜಯ್​​ ಶಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.