ಹೈದರಾಬಾದ್ : ಟೀಮ್ ಇಂಡಿಯಾ ಸದ್ಯ ದಕ್ಷಿಣ ಆಫ್ರಿಕ ಪ್ರವಾಸ ಕೈಗೊಂಡಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಲು ರೆಡಿಯಾಗಿದೆ. ಮೊದಲ ಟೆಸ್ಟ್ ಪಂದ್ಯ ಇದೇ ತಿಂಗಳು 26ರಿಂದ ಆರಂಭವಾಗಲಿದೆ.
ಇನ್ನು ಈ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ, ಭಾರತದ ಮಾಜಿ ಆಟಗಾರ ವಾಸಿಂ ಜಾಫರ್ ಎಚ್ಚರಿಕೆಯೊಂದನ್ನ ನೀಡಿದ್ದಾರೆ. ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡ ಮಾರಕವಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಈ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡ ಭಾರತ ತಂಡಕ್ಕೆ ಸವಾಲು ಎಸೆಯುವ ಬೌಲರ್ ಆಗಿದ್ದು, ಅವರು ತಂಡದ ಸ್ಕೋರ್ ಗಳಿಸಲು ಮಾರಕವಾಗಲಿದ್ದಾರೆ. ರಬಾಡ ಅವರನ್ನ ನಿಯಂತ್ರಿಸುವ ಮೂಲಕ ಪ್ರವಾಸದ ಸಮಯದಲ್ಲಿ ಪ್ರವಾಸಿಗರು ತಮ್ಮ ಸ್ಕೋರ್ "ಸಮಸ್ಯೆ" ಯನ್ನು ನಿವಾರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
"ದಕ್ಷಿಣ ಆಫ್ರಿಕಾ ಯೋಗ್ಯ ವೇಗದ ಬೌಲಿಂಗ್ ದಾಳಿಯನ್ನು ಹೊಂದಿದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ರಬಾಡ ಅತ್ಯುತ್ತಮ ಬೌಲರ್ಗಳಲ್ಲಿ ಒಬ್ಬರು. ಅವರು ಭಾರತೀಯ ಬ್ಯಾಟರ್‌ಗಳಿಗೆ ಸವಾಲಾಗಲಿದ್ದಾರೆ. ಅವರು ಸಾಕಷ್ಟು ಗುಣಮಟ್ಟವನ್ನೂ ಕೂಡಾ ಹೊಂದಿದ್ದಾರೆ. ಅವರ ವೇಗದ ಬೌಲಿಂಗ್ ಖಂಡಿತವಾಗಿಯೂ ಭಾರತಕ್ಕೆ ಸವಾಲಾಗಿ ಪರಿಣಮಿಸುತ್ತದೆ. ಆದರೆ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಮೊದಲಿನಂತೆ ಇಲ್ಲ ಎನ್ನುವುದು ಅಷ್ಟೇ ಮುಖ್ಯ. ಅದೇನೇ ಇದ್ದರೂ, ಭಾರತಕ್ಕೆ ಇದು ಸವಾಲಿನ ಪ್ರವಾಸವಾಗಿದೆ, ”ಎಂದು ಜಾಫರ್ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಮೊದಲ ಟೆಸ್ಟ್ ನಿರ್ಣಾಯಕವಾಗಿದೆ ಮತ್ತು ಭಾರತೀಯ ಬೌಲರ್‌ಗಳು, ವಿಶೇಷವಾಗಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ತಮ್ಮ ಅನುಭವದೊಂದಿಗೆ ಎದುರಾಳಿ ತಂಡವನ್ನು ಕಟ್ಟಿಹಾಕಬೇಕಿದೆ ಎಂದು ಜಾಫರ್ ಹೇಳಿದರು.
"ಭಾರತೀಯ ವೇಗದ ಬೌಲಿಂಗ್ ಘಟಕ ಈಗ ತುಂಬಾ ಅನುಭವಿಯಾಗಿದೆ. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರಿಗೆ ಸಾಕಷ್ಟು ಅನುಭವವಿದೆ. ಭಾರತವು ಅದ್ಭುತ ಆಲ್ರೌಂಡ್ರಗಳನ್ನ ಹೊಂದಿದೆ. ಭಾರತ 400 ಪ್ಲಸ್ ಗಳಿಸಿದರೆ, ಪಂದ್ಯಗಳನ್ನು ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಜಾಫರ್ ಅಭಿಪ್ರಾಯಪಟ್ಟಿದ್ದಾರೆ.