ETV Bharat / sports

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: ಅಗ್ರ ಶ್ರೇಯಾಂಕಕ್ಕೇರಿದ ರವಿಚಂದ್ರನ್​ ಅಶ್ವಿನ್ - ETV Bharath Kannada news

ನವೀಕರಣಗೊಂಡ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ ಪಟ್ಟಿ - ಬೌಲಿಂಗ್​ ಅಗ್ರ ಶ್ರೇಯಾಂಕಕ್ಕೇರಿದ ಅಶ್ವಿನ್​ - ಆಲ್​ ರೌಂಡರ್​ ಪಟ್ಟಿಯಲ್ಲಿ ಜಡೇಜಾ ಸ್ಥಾನ ಮುಂದುವರಿಕೆ

r ashwin
ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌
author img

By

Published : Mar 1, 2023, 5:15 PM IST

ದುಬೈ: ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಇತ್ತೀಚಿನ ಎಂಆರ್‌ಎಫ್ ಟೈರ್ಸ್ ಐಸಿಸಿ ಪುರುಷರ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ತಲುಪಿದ್ದಾರೆ. ಎರಡನೇ ಸ್ಥಾನದಲ್ಲಿದ್ದ ಅಶ್ವಿನ್​ ಅಗ್ರ ಪಟ್ಟದಲ್ಲಿದ್ದ ಜೇಮ್ಸ್ ಆಂಡರ್ಸನ್ ಕೆಳಗಿಳಿಸಿ ನಂ.1 ಆಗಿ ಹೊರ ಹೊಮ್ಮಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 6 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅಶ್ವಿನ್ ಅವರ ಆಟಕ್ಕೆ ಈ ಪಟ್ಟ ಮತ್ತೆ ಒಲಿದಿದೆ.

r ashwin number one bowler in icc test bowler rankings
ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ ಪಟ್ಟಿ

2015ರಲ್ಲಿ 36 ವರ್ಷದ ಆರ್​ ಅಶ್ವಿನ್ ಟೆಸ್ಟ್‌ನಲ್ಲಿ ನಂಬರ್ 1 ಬೌಲರ್ ಆಗಿದ್ದರು. ಇದಾದ ನಂತರವೂ ಹಲವು ಬಾರಿ ಈ ಪಟ್ಟ ಅಲಂಕರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ - ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಆರ್ ಅಶ್ವಿನ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅಶ್ವಿನ್ 864 ರೇಟಿಂಗ್‌ಗಳೊಂದಿಗೆ ಟೆಸ್ಟ್‌ನಲ್ಲಿ ನಂಬರ್ 1 ಸ್ಥಾನಕ್ಕೆ ತಲುಪಿದ್ದಾರೆ.

ಜೇಮ್ಸ್ ಆಂಡರ್ಸನ್ 859 ರೇಟಿಂಗ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಆಸಿಸ್​ನ ನಾಯಕ ಪ್ಯಾಟ್​ ಕಮಿನ್ಸ್​ 858 ಅಂಕಗಳಿಂದ ಮೂರನೇ ಸ್ಥಾನದಲ್ಲಿದ್ದಾರೆ. ಬಹಳ ತಿಂಗಳಿಂದ ಗಾಯದ ಸಮಸ್ಯೆ ಕಾರಣ ತಂಡದಿಂದ ಹೊರಗುಳಿದಿರುವ ಬೂಮ್ರಾ 4ನೇ ಶ್ರೇಯಾಂಕದಲ್ಲಿದ್ದಾರೆ. ಇದಲ್ಲದೇ ಆಲ್ ರೌಂಡರ್‌ಗಳ ಪಟ್ಟಿಯಲ್ಲಿ ಆರ್ ಅಶ್ವಿನ್ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.

ರವೀಂದ್ರ ಜಡೇಜಾ ಆಲ್​ ರೌಂಡರ್​ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಬೌಲಿಂಗ್​ ವಿಭಾಗದಲ್ಲಿ 8ನೇ ಸ್ಥಾನದಲ್ಲಿದ್ದಾರೆ. ದೆಹಲಿಯ ಪಂದ್ಯದಲ್ಲಿ ಜಡ್ಡು 10 ವಿಕೆಟ್​ ಪಡೆದು ಮಿಂಚಿದ್ದರು. ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಮೊದಲ ಮತ್ತು ಎರಡನೇ ಪಂದ್ಯದಲ್ಲಿ ಭರ್ಜರಿ ಬ್ಯಾಟ್​ ಬೀಸಿದ ಅಕ್ಷರ್​ ಪಟೇಲ್​ 283 ಅಂಕಗಳಿಂದ ಆಲ್​ರೌಂಡರ್​ ಪಟ್ಟಿಯಲ್ಲಿ 5ನೇ ಶ್ರೇಯಾಂಕದಲ್ಲಿದ್ದಾರೆ. ಶಕಿಬ್​ ಅಲ್​ ಹಸನ್​ ಮತ್ತು ಬೆನ್​ ಸ್ಟೋಕ್ಸ್​ ಕ್ರಮವಾಗಿ 3 ಮತ್ತು 4 ನೇ ಸ್ಥಾನದಲ್ಲಿದ್ದಾರೆ.

ಆರ್​. ಅಶ್ವಿನ್ ಭಾರತ ತಂಡದ ಪರ ಇದುವರೆಗೆ 90 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 170 ಇನ್ನಿಂಗ್ಸ್‌ಗಳಲ್ಲಿ 463 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ವೇಳೆ, ಅವರು 23,693 ಎಸೆತಗಳನ್ನು ಎಸೆದಿದ್ದಾರೆ. ಇದಲ್ಲದೇ, ಅಶ್ವಿನ್ 113 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 151 ವಿಕೆಟ್‌ಗಳನ್ನು ಪಡೆದಿದ್ದಾರೆ. 65 ಟಿ20 ಪಂದ್ಯಗಳಲ್ಲಿ 72 ವಿಕೆಟ್​ ಪಡೆದಿದ್ದಾರೆ.

ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಗೊಂದಲ: ಕೆಲದಿನಗಳ ಹಿಂದೆ ಐಸಿಸಿ ರ‍್ಯಾಂಕಿಂಗ್‌ ಪಟ್ಟಿ ಗೊಂದಲ ಉಂಟಾಗಿತ್ತು. ದೆಹಲಿಯ ಎರಡನೇ ಟೆಸ್ಟ್​ ಪಂದ್ಯ ಮುಗಿದ ಬೆನ್ನಲ್ಲೇ ತಂಡ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಬದಲಾವಣೆ ಕಂಡು ಬಂದಿತ್ತು. ಶ್ರೇಯಾಂಕದಲ್ಲಿ ಅಗ್ರ ಪಟ್ಟದಲ್ಲಿದ್ದ ಆಸ್ಟ್ರೇಲಿಯಾವನ್ನು ಭಾರತ ಕೆಳಕ್ಕೆ ತಳ್ಳಿ ಮೊದಲ ಸ್ಥಾನ ಅಂಕರಿಸಿತ್ತು. ಇದು ತಾಂತ್ರಿಕ ದೋಷದಿಂದ ಈ ರೀತಿ ಆಗಿದೆ ಎಂದು ಐಸಿಸಿ ತಿಳಿಸಿತ್ತು. ಸುಮಾರು 8 ಗಂಟೆಗೂ ಹೆಚ್ಚು ಭಾರತ ಅಗ್ರ ಸ್ಥಾನದಲ್ಲಿತ್ತು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಕಂಡು ಐಸಿಸಿ ಸ್ಪಷ್ಟನೆ ನೀಡಿತ್ತು.

ಇದನ್ನೂ ಓದಿ: IND Vs AUS 3rd Test: ಆಸೀಸ್​ ಸ್ಪಿನ್ನರ್​ಗಳೆದುರು ಎಡವಿಡ ಭಾರತ, 109ಕ್ಕೆ ಸರ್ವ ಪತನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.