ಡೊಮಿನಿಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ 12 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಟೆಸ್ಟ್ ಪಂದ್ಯವೊಂದರಲ್ಲೇ ಅತಿಹೆಚ್ಚು ಬಾರಿ 10ಕ್ಕಿಂತ ಹೆಚ್ಚು ವಿಕೆಟ್ ಪಡೆದ ಮಾಜಿ ಬೌಲರ್ ಅನಿಲ್ ಕುಂಬ್ಳೆ ದಾಖಲೆಯನ್ನು ಸರಿಗಟ್ಟಿದ್ದಾರೆ.
ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ 141ರನ್ಗಳ ಗೆಲುವು ಸಾಧಿಸಿತು. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಅಶ್ವಿನ್, ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆದರು. ಈ ಮೂಲಕ 8 ಬಾರಿ ಟೆಸ್ಟ್ ಪಂದ್ಯವೊಂದರಲ್ಲೇ 10ಕ್ಕಿಂತ ಹೆಚ್ಚು ವಿಕೆಟ್ ಪಡೆದ ಅನಿಲ್ ಕುಂಬ್ಳೆ ದಾಖಲೆಯನ್ನು ಅಶ್ವಿನ್ ಮಾಡಿದ್ದಾರೆ. ಅಲ್ಲದೇ ಹಲವಾರು ದಾಖಲೆಗಳನ್ನೂ ಬರೆದಿದ್ದಾರೆ.
34ನೇ ಬಾರಿಗೆ ಇನ್ನಿಂಗ್ಸ್ ಒಂದರಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಇದು ವಿದೇಶಿ ನೆಲದ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಐದು ವಿಕೆಟ್‌ಗಳನ್ನು ಕಬಳಿಸಿದ್ದರು. ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ ಪಂದ್ಯದಲ್ಲಿ 131 ರನ್ ನೀಡಿ 12 ವಿಕೆಟ್ ಕಬಳಿಸಿದ್ದಾರೆ. ವಿದೇಶಿ ನೆಲದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಅಶ್ವಿನ್ ಅವರ ಅತ್ಯುತ್ತಮ ಪ್ರದರ್ಶನ ಇದಾಗಿದೆ. ಇದರೊಂದಿಗೆ ವಿದೇಶಿ ನೆಲದಲ್ಲಿ ಭಾರತೀಯ ಬೌಲರ್ನ ಮೂರನೇ ಅತ್ಯುತ್ತಮ ಪ್ರದರ್ಶನ ಇದಾಗಿದೆ.
ಟೆಸ್ಟ್ ಪಂದ್ಯವೊಂದರಲ್ಲೇ ಅತಿ ಹೆಚ್ಚುಬಾರಿ ಹತ್ತು ವಿಕೆಟ್ ಪಡೆದ ಭಾರತೀಯ ಬೌಲರ್
- ಅನಿಲ್ ಕುಂಬ್ಳೆ - 8
- ರವಿಚಂದ್ರನ್ ಅಶ್ವಿನ್ - 8
- ಹರ್ಭಜನ್ ಸಿಂಗ್ - 8
ಟೆಸ್ಟ್ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಅತಿ ಹೆಚ್ಚುಬಾರಿ ಐದು ವಿಕೆಟ್ ಪಡೆದ ಬೌಲರ್
- ಮುತ್ತಯ್ಯ ಮುರಳೀಧರನ್ - 11
- ರಂಗನಾ ಹೆರಾತ್ - 8
- ಸಿಡ್ನಿ ಬಾರ್ನ್ಸ್ - 6
- ರವಿಚಂದ್ರನ್ ಅಶ್ವಿನ್ - 6
ಭಾರತ-ವೆಸ್ಟ್ ಇಂಡೀಸ್ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್
- ಕಪಿಲ್ ದೇವ್ - 89
- ಮಾಲ್ಕಮ್ ಮಾರ್ಷಲ್ - 76
- ಅನಿಲ್ ಕುಂಬ್ಳೆ - 74
- ಆರ್ ಅಶ್ವಿನ್ - 72
- ಶ್ರೀನಿವಾಸ್ ವೆಂಕಟರಾಘವನ್ - 68
ಭಾರತ-ವೆಸ್ಟ್ ಇಂಡೀಸ್ ಟೆಸ್ಟ್‌ನಲ್ಲಿ ಅತಿ ಹೆಚ್ಚುಬಾರಿ ಐದು ವಿಕೆಟ್ ಪಡೆದ ಬೌಲರ್
- ಮಾಲ್ಕಮ್ ಮಾರ್ಷಲ್ - 6
- ರವಿಚಂದ್ರನ್ ಅಶ್ವಿನ್ - 6
- ಹರ್ಭಜನ್ ಸಿಂಗ್ - 5
ಭಾರತ-ವೆಸ್ಟ್ ಇಂಡೀಸ್ ಟೆಸ್ಟ್‌ನಲ್ಲಿ ಹೆಚ್ಚಿನ ವಿಕೆಟ್ ಪಡೆದ ಬೌಲರ್ಗಳು
- 11/126- ವೆಸ್ ಹಾಲ್ (ವೆಸ್ಟ್ ಇಂಡೀಸ್) - ಕಾನ್ಪುರ್, 1958
- 12/121 - ಆಂಡಿ ರಾಬರ್ಟ್ಸ್ (ವೆಸ್ಟ್ ಇಂಡೀಸ್) - ಚೆನ್ನೈ, 1975
- 16/136 - ನರೇಂದ್ರ ಹಿರ್ವಾನಿ (ಭಾರತ) - ಚೆನ್ನೈ, 1988
- 11/89 - ಮಾಲ್ಕಮ್ ಮಾರ್ಷಲ್ (ವೆಸ್ಟ್ ಇಂಡೀಸ್) ಪೋರ್ಟ್ ಆಫ್ ಎಸ್, 1989
- 12/131 - ರವಿಚಂದ್ರನ್ ಅಶ್ವಿನ್ (ಭಾರತ) - ರೋಸೋ, 2023