ETV Bharat / sports

ನಮ್ಮಿಬ್ಬರನ್ನು ಡೆಲ್ಲಿ ಕ್ಯಾಪಿಟಲ್ಸ್ ರೀಟೈನ್ ಮಾಡಿಕೊಳ್ಳುವ ಚಾನ್ಸ್​ ಕಡಿಮೆ: ಆರ್​.ಅಶ್ವಿನ್​ - ರಿಷಭ್ ಪಂತ್

2022ರ ಐಪಿಎಲ್​ಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಇದಕ್ಕೂ ಮುನ್ನ ಎಲ್ಲಾ ಫ್ರಾಂಚೈಸಿಗಳು 4 ಆಟಗಾರರನ್ನು ರೀಟೈನ್ ಮಾಡಿಕೊಳ್ಳುವುದಕ್ಕೆ ಬಿಸಿಸಿಐ ಸೂಚನೆ ಮಾಡಿದೆ. ಅದು ತಲಾ ಇಬ್ಬರು ವಿದೇಶಿ ಆಟಗಾರರಾಗಿರಬಹುದು ಅಥವಾ 3 ಭಾರತೀಯರು ಮತ್ತು ಒಬ್ಬ ವಿದೇಶಿಗನನ್ನು ಉಳಿಸಿಕೊಳ್ಳಬಹುದೆಂದು ನಿಯಮದಲ್ಲಿ ತಿಳಿಸಿದೆ.

R Ashwin Confirm he and shreyas iyer not to be retained by DC
ರವಿಚಂದ್ರನ್ ಆಶ್ವಿನ್
author img

By

Published : Nov 22, 2021, 8:57 PM IST

ನವದೆಹಲಿ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​ಗೂ ಮುನ್ನ ಶ್ರೇಯಸ್​ ಅಯ್ಯರ್ ಮತ್ತು ನನ್ನನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಸ್ವತಃ ಅಶ್ವಿನ್​ ಯೂಟ್ಯೂಬ್​ ಚಾನೆಲ್​ ಸಂಭಾಷಣೆ ವೇಳೆ ತಿಳಿಸಿದ್ದಾರೆ.

2022ರ ಐಪಿಎಲ್​ಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಇದಕ್ಕೂ ಮುನ್ನ ಎಲ್ಲಾ ಫ್ರಾಂಚೈಸಿಗಳು 4 ಆಟಗಾರರನ್ನು ರೀಟೈನ್ ಮಾಡಿಕೊಳ್ಳುವುದಕ್ಕೆ ಬಿಸಿಸಿಐ ತಿಳಿಸಿದೆ. ಅದು ತಲಾ ಇಬ್ಬರು ವಿದೇಶಿ ಆಟಗಾರರಾಗಿರಬಹುದು ಅಥವಾ 3 ಭಾರತೀಯರು ಮತ್ತು ಒಬ್ಬ ವಿದೇಶಿಗನನ್ನು ಉಳಿಸಿಕೊಳ್ಳಬಹುದೆಂದು ನಿಯಮದಲ್ಲಿ ತಿಳಿಸಿದೆ.

ಇನ್ನು ಹೊಸದಾಗಿ ಐಪಿಎಲ್​ಗೆ ಸೇರಿರುವ ಅಹ್ಮದಾಬಾದ್​ ಮತ್ತು ಲಖನೌ ಫ್ರಾಂಚೈಸಿಗಳು ಮಾತ್ರ ಹಳೆಯ ತಂಡಗಳು ರೀಟೈನ್ ಘೋಷಿಸಿದ ನಂತರ ತಲಾ ಮೂರು ಆಟಗಾರರನ್ನು ಉಳಿಸಿಕೊಳ್ಳಲು ತಿಳಿಸಿದೆ.

ಇನ್ನು ಯೂಟ್ಯೂಬ್ ಚಾನಲ್​ನಲ್ಲಿ ಗೌರವ್​ ಸುಂದರಾಮನ್​ ಜೊತೆಗಿನ ಸಂಭಾಷಣೆ ವೇಳೆ ಅಶ್ವಿನ್ ನಾನು ಮತ್ತು ಶ್ರೇಯಸ್​ ಡೆಲ್ಲಿ ಕ್ಯಾಪಿಟಲ್ಸ್ ಪರ ದೀರ್ಘಕಾಲ ಉಳಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ರಿಷಭ್ ಪಂತ್​, ಕಗಿಸೋ ರಬಾಡ, ಎನ್ರಿಚ್ ನಾಕಿಯಾರನ್ನು ಭಾಗಶಃ ರೀಟೈನ್ ಮಾಡಿಕೊಳ್ಳುವುದು ಖಚಿತ. ಇನ್ನು ನಾಯಕತ್ವವನ್ನು ಕಳೆದುಕೊಂಡಿರುವ ಶ್ರೇಯಸ್​ ಅಯ್ಯರ್ ತಾವಾಗಿಯೇ ಫ್ರಾಂಚೈಸಿಯಿಂದ ಹೊರಬರಲು ಮುಂದಾಗಿದ್ದಾರೆ. ಅವರು ಹೊಸ 2 ಫ್ರಾಂಚೈಸಿಯಲ್ಲಿ ನಾಯಕತ್ವವನ್ನು ಬಯಸುತ್ತಿರುವ ಪ್ರಮುಖರ ಲಿಸ್ಟ್​ನಲ್ಲಿದ್ದಾರೆ. ಹಾಗಾಗಿ ಫೃಥ್ವಿ ಶಾ, ಶಿಖರ್ ಧವನ್​ ಅಕ್ಷರ್ ಪಟೇಲ್ ಸೇರಿದಂತೆ ಇನ್ನು ಕೆಲವು ಉಳಿದ ಒಂದು ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

ಇದೇ ಕಾರಣದಿಂದ ಅಶ್ವಿನ್​ ತಮ್ಮನ್ನು ಡೆಲ್ಲಿ ಕ್ಯಾಪಿಟಲ್ಸ್ ರೀಟೈನ್ ಮಾಡಿಕೊಳ್ಳುವ ಸಾಧ್ಯತೆಯಿಲ್ಲ ಎಂದಿರಬಹುದು ಎಂದು ಊಹಿಸಬಹುದಾಗಿದೆ. ಇದರ ಜೊತೆಗೆ ಐಪಿಎಲ್​ನಲ್ಲಿನ ಅನುಭವವನ್ನು ಪರಿಗಣಿಸಿ ನೋಡುವುದಾದರೆ ಅಶ್ವಿನ್ ಕೂಡ 2022ರ ಆವೃತ್ತಿಯಲ್ಲಿ ಯಾವುದಾದರೂ ತಂಡದ ನಾಯಕನಾಗಿ ಆಫರ್​ ಬಂದಿದ್ದರೂ ಅಚ್ಚರಿಯಿಲ್ಲ. ಈಗಾಗಲೇ ಕೆ.ಎಲ್.ರಾಹುಲ್ ಪಂಜಾಬ್​ ತಂಡದಿಂದ ಹೊರಬರಲು ಬಯಸಿದ್ದು, ಹೊಸ ತಂಡದ ನಾಯಕತ್ವದ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ:ಆರಂಭಿಕ ಸ್ಥಾನ​ದಿಂದ ಶುಬ್ಮನ್ ಗಿಲ್​ಗೆ ಹಿಂಬಡ್ತಿ, ಹೊಸ ಜವಾಬ್ದಾರಿ ನೀಡಿದ ಮ್ಯಾನೇಜ್​ಮೆಂಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.