ಅಹಮದಾಬಾದ್ (ಗುಜರಾತ್): ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತದ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಅಶ್ವಿನ್ ಈ ಮೈಲಿಗಲ್ಲನ್ನು ಸಾಧಿಸಿದ್ದಾರೆ.
-
𝗦𝗽𝗲𝗰𝗶𝗮𝗹 𝗳𝗲𝗮𝘁!
— BCCI (@BCCI) March 10, 2023 " class="align-text-top noRightClick twitterSection" data="
Congratulations to @ashwinravi99 who now is the leading-wicket taker among Indian bowlers against Australia and also the joint-leading wicket-taker in the Border-Gavaskar Trophy with 113 wickets.#INDvAUS #TeamIndia pic.twitter.com/MRwLWEnP4v
">𝗦𝗽𝗲𝗰𝗶𝗮𝗹 𝗳𝗲𝗮𝘁!
— BCCI (@BCCI) March 10, 2023
Congratulations to @ashwinravi99 who now is the leading-wicket taker among Indian bowlers against Australia and also the joint-leading wicket-taker in the Border-Gavaskar Trophy with 113 wickets.#INDvAUS #TeamIndia pic.twitter.com/MRwLWEnP4v𝗦𝗽𝗲𝗰𝗶𝗮𝗹 𝗳𝗲𝗮𝘁!
— BCCI (@BCCI) March 10, 2023
Congratulations to @ashwinravi99 who now is the leading-wicket taker among Indian bowlers against Australia and also the joint-leading wicket-taker in the Border-Gavaskar Trophy with 113 wickets.#INDvAUS #TeamIndia pic.twitter.com/MRwLWEnP4v
ಮೊದಲ ಇನ್ನಿಂಗ್ಸ್‌ನಲ್ಲಿ, ಸ್ಪಿನ್ನರ್‌ಗಳಿಗೆ ನಿಜವಾಗಿಯೂ ಹೆಚ್ಚಿನ ಸಹಾಯವನ್ನು ನೀಡದ ಪಿಚ್‌ನಲ್ಲಿ ಅಶ್ವಿನ್ ಮತ್ತೊಮ್ಮೆ ತಮ್ಮ ಮ್ಯಾಜಿಕ್ ಮಾಡಿದರು. 47.2 ಓವರ್ ಮಾಡಿದ ಅಶ್ವಿನ್ 91 ರನ್ ಬಿಟ್ಟುಕೊಟ್ಟು 6 ವಿಕೆಟ್ ಗಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಟ್ರಾವಿಸ್ ಹೆಡ್ (32), ಕ್ಯಾಮೆರಾನ್ ಗ್ರೀನ್ (114), ಅಲೆಕ್ಸ್ ಕ್ಯಾರಿ (0), ಮಿಚೆಲ್ ಸ್ಟಾರ್ಕ್ (6), ನಾಥನ್ ಲಿಯಾನ್ (34) ಮತ್ತು ಟಾಡ್ ಮರ್ಫಿ (41) ಅವರ ಪ್ರಮುಖ ವಿಕೆಟ್‌ಗಳನ್ನು ಪಡೆದಿದ್ದಾರೆ. 22 ಪಂದ್ಯಗಳಲ್ಲಿ ಅಶ್ವಿನ್ 28.10 ರ ಸರಾಸರಿಯಲ್ಲಿ 2.71 ರ ಎಕಾನಮಿ ರೇಟ್‌ನಲ್ಲಿ 113 ವಿಕೆಟ್‌ಗಳನ್ನು ಪಡೆದಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 103ಕ್ಕೆ 7 ವಿಕೆಟ್ ಕಿತ್ತದ್ದು ಅವರ ಅತ್ಯುತ್ತಮ ಸಾಧನೆಯಾಗಿದೆ.
ಆಸಿಸ್ನ ನಾಥನ್ ಲಿಯಾನ್ ಕೂಡಾ 113 ವಿಕೆಟ್ ಪಡೆದಿದ್ದಾರೆ. ಅಶ್ವಿನ್ ಅವರು ಲಿಯಾನ್ ದಾಖಲೆ ಸರಿಗಟ್ಟಿದ್ದಾರೆ. ಆದರೆ, ಲಿಯಾನ್ 113 ವಿಕೆಟ್ ಪಡೆಯಲು 26 ಪಂದ್ಯಗಳನ್ನು ತೆಗೆದುಕೊಂಡಿರುವ ಕಾರಣ ಎರಡನೇ ಸ್ಥಾನದಲ್ಲಿದ್ದಾರೆ. ಲಿಯಾನ್ 31.92 ಸರಾಸರಿಯಲ್ಲಿ 3.09 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 8/50 ಅವರ ಅತ್ಯುತ್ತಮ ಸಾಧನೆಯಾಗಿದೆ. ಅಶ್ವಿನ್ ಮತ್ತು ಲಿಯಾನ್ ನಂತರದ ಸ್ಥಾನದಲ್ಲಿ ಭಾರತದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ (111) ಮತ್ತು ಹರ್ಭಜನ್ ಸಿಂಗ್ (95) ಇದ್ದಾರೆ. ರವೀಂದ್ರ ಜಡೇಜಾ 85 ವಿಕೆಟ್‌ಗಳೊಂದಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.
ಭಾರತದಲ್ಲಿ 26ನೇ ಬಾರಿ ಪಂಚ ಸಾಧನೆ: ಅಶ್ವಿನ್ ತವರು ನೆಲದಲ್ಲಿ 26 ನೇ ಐದು ವಿಕೆಟ್ ಪಡೆದುಕೊಂಡಿದ್ದಾರೆ. ಇದು ಭಾರತದ ಬೌಲರ್‌ಗಳ ಪಟ್ಟಿಯಕಲ್ಲಿ ಅತೀ ಹೆಚ್ಚಿನ ಸಾಧನೆಯಾಗಿದೆ. ಒಟ್ಟಾರೆಯಾಗಿ ಅಶ್ವಿನ್ 32 ಬಾರಿ ಐದು - ವಿಕೆಟ್‌ಗಳನ್ನು ಗಳಿಸಿದ್ದಾರೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಐದನೇ ಅತಿ ಹೆಚ್ಚು ಪಂಚ ವಿಕೆಟ್ ಸಾಧನೆ. ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟ್ನಲ್ಲಿ 67 ಬಾರಿ 5 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ.
2023ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅಶ್ವಿನ್ ಅತೀ ಹೆಚ್ಚು ವಿಕೆಟ್ ಟೇಕರ್ ಆಗಿದ್ದಾರೆ. ನಾಲ್ಕು ಪಂದ್ಯಗಳಿಂದ ಅಶ್ವಿನ್ ಒಟ್ಟು 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅದರಲ್ಲಿ ಇಂದಿನ 91 ಬಿಟ್ಟುಕೊಟ್ಟು 6 ವಿಕೆಟ್ ಪಡೆದಿರುವುದು ಅತ್ಯುತ್ತಮ ಬೌಲಿಂಗ್ ಆಗಿದೆ.
ಆಸಿಸ್ ಉತ್ತಮ ಬ್ಯಾಟಿಂಗ್: ಪಂದ್ಯದಲ್ಲಿ ಆಸಿಸ್ ಆಟಗಾರರು ಉತ್ತಮ ಬ್ಯಾಟಿಂಗ್ ಮಾಡಿದ್ದು ಎರಡನೇ ದಿನದ ಕೊನೆಯ ಸೆಷನ್ನಲ್ಲಿ ಆಲ್ಔಟ್ ಆಗಿದ್ದಾರೆ. ಭಾರತಕ್ಕೆ ಮೊದಲ ಇನ್ನಿಂಗ್ಸ್ಗೆ 480 ರನ್ಗಳ ಗುರಿಯನ್ನು ನೀಡಿದೆ. ಇದರಲ್ಲಿ ಉಸ್ಮಾನ್ ಖವಾಜಾ ಅವರ 180 ಮತ್ತು ಗ್ರೀನ್ ಅವರ 114 ರನ್ ಕೊಡುಗೆ ಪ್ರಮುಖವಾಗಿದೆ. ಭಾರತ ಬ್ಯಾಟಿಂಗ್ ಆರಂಭಿಸಿದ್ದು, ರೋಹಿತ್ ಶರ್ಮಾ 17 ಮತ್ತು ಶುಭಮನ್ ಗಿಲ್ 18 ರನ್ ಗಳಿಸಿ ಆಡುತ್ತಿದ್ದಾರೆ. ಭಾರತ 444 ರನ್ನ ಹಿನ್ನಡೆ ಹೊಂದಿದೆ.
ಇದನ್ನೂ ಓದಿ: ಅಹಮದಾಬಾದ್ ಟೆಸ್ಟ್: 480ಕ್ಕೆ ಆಸಿಸ್ ಆಲ್ ಔಟ್, ಅಶ್ವಿನ್ಗೆ 6 ವಿಕೆಟ್