ETV Bharat / sports

ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ: ನಾಲ್ಕನೇ ಆರೋಪಿ ಬಂಧಿಸಿದ ಪೊಲೀಸರು

author img

By

Published : Feb 18, 2023, 9:38 PM IST

ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ- ಸೆಲ್ಫಿ ವಿಚಾರವಾಗಿ ಪೃಥ್ವಿ ಶಾ ಜೊತೆ ಕಿತ್ತಾಟ- ನಾಲ್ಕನೇ ಆರೋಪಿ ಬಂಧಿಸಿದ ಪೊಲೀಸರು- ಬೇಸ್​ ಬಾಲ್​ ಬ್ಯಾಟ್​ನಿಂದ ಕಾರಿನ ಮೇಲೆ ದಾಳಿ- ಸಾಮಾಜಿಕ ಮಾಧ್ಯಮ ಪ್ರಭಾವಿ ಸಪ್ತಾ ಗಿಲ್

ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ
ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ

ಮುಂಬೈ: ಸೆಲ್ಫಿ ವಿಚಾರವಾಗಿ ಭಾರತದ ಉದಯೋನ್ಮುಖ ಕ್ರಿಕೆಟಿಗ ಪೃಥ್ವಿ ಶಾ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ನಾಲ್ಕನೇ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈಚೆಗೆ ಇಲ್ಲಿನ ಸ್ಟಾರ್​ ಹೋಟೆಲ್​ ಮುಂಭಾಗ ಸೆಲ್ಫಿ ನಿರಾಕರಿಸಿದ ಶಾ ಮೇಲೆ ಸೋಷಿಯಲ್​ ಮೀಡಿಯಾ ಸ್ಟಾರ್​ ಸಪ್ನಾ ಗಿಲ್​ ಮತ್ತು ಆಕೆಯ ಸ್ನೇಹಿತರು ಹಲ್ಲೆ ಮಾಡಿದ್ದರು. ಅಲ್ಲದೇ, ಬೇಸ್​ ಬಾಲ್​ ಬ್ಯಾಟ್​ನಿಂದ ಕಾರಿನ ಮೇಲೆ ದಾಳಿ ಮಾಡಿದ ಘಟನೆ ನಡೆದಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಭಾವಿಯಾದ ಸಪ್ತಾ ಗಿಲ್​, ಆಕೆಯ ಸ್ನೇಹಿತ ಶೋಬಿತ್ ಠಾಕೂರ್​, ರುದ್ರ ಸೇರಿ ಮೂವರನ್ನು ಬಂಧಿಸಲಾಗಿತ್ತು. ಇಂದು ಸೋಬಿತ್ ಎಂಬಾತನನ್ನು ಬಂಧಿಸಲಾಗಿದ್ದು, ಸೆರೆಯಾದವರ ಸಂಖ್ಯೆ 4ಕ್ಕೆ ಏರಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ ನಡೆಸಿದ ಬಗ್ಗೆ ಸ್ನೇಹಿತ ಆಶಿಶ್ ಯಾದವ್ ಅವರು ದೂರು ದಾಖಲಿಸಿದ್ದರು. ಪೃಥ್ವಿ ಶಾನನ್ನು ಸಪ್ನಾ ಗಿಲ್ ಮತ್ತು ಠಾಕೂರ್ ಅವರು ಹೋಟೆಲ್‌ನಲ್ಲಿ ಸೆಲ್ಫಿಗಾಗಿ ಕೇಳಿದರು. ಶಾ ಮೊದಲು ಸೆಲ್ಫಿಗೆ ಒಪ್ಪಿದರು. ಆದರೆ, ಅವರು ತುಂಬಾ ಚಿತ್ರಗಳನ್ನು ಪಡೆಯಲು ಒತ್ತಾಯಿಸಿದಾಗ ಶಾ ಇದನ್ನು ತಿರಸ್ಕರಿಸಿದರು. ಇದರಿಂದ ಸಿಟ್ಟಾದ ಸಪ್ನಾ ಗಿಲ್ ಮತ್ತು ಅವರ ಸ್ನೇಹಿತರು ಕ್ರಿಕೆಟಿಗನೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು. ಇದನ್ನು ನೋಡಿದ ಹೋಟೆಲ್ ಮ್ಯಾನೇಜರ್ ಮಧ್ಯಪ್ರವೇಶಿಸಿ ಎಲ್ಲರನ್ನೂ ಹೋಟೆಲ್​ನಿಂದ ಹೊರ ಕಳುಹಿಸಿದರು.

ನಂತರ ಪೃಥ್ವಿ ಶಾ ಮತ್ತು ಆಶಿಶ್​ ಯಾದವ್ ಹೋಟೆಲ್‌ನಲ್ಲಿ ರಾತ್ರಿ ಊಟ ಮುಗಿಸಿಕೊಂಡು ಹೊರಬಂದಾಗ, ಠಾಕೂರ್ ಕೈಯಲ್ಲಿ ಬೇಸ್‌ಬಾಲ್ ಬ್ಯಾಟ್ ಹಿಡಿದು ನಿಂತಿದ್ದ. ಶಾ ಕಂಡ ತಕ್ಷಣ ಆರೋಪಿಗಳು ಆತನ ಕಾರಿನ ವಿಂಡ್‌ ಶೀಲ್ಡ್‌ ಮೇಲೆ ದಾಳಿ ಮಾಡಿದರು. ಇದೇ ವೇಳೆ ಶಾ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ನಾವು ಬೇರೊಂದು ಕಾರಿನಲ್ಲಿ ಮನೆಗೆ ತೆರಳಿದೆವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜಗಳವಾದ ಬಳಿಕ ತಕರಾರು ಬೆಳೆಸುವುದು ಬೇಡವೆಂದು ಪೃಥ್ವಿ ಶಾ ಅವರನ್ನು ಬೇರೆ ಕಾರಿನಲ್ಲಿ ಕಳುಹಿಸಿದೆವು. ಇಷ್ಟಾದರೂ ಬಿಡದ ಆರೋಪಿಗಳು ಶಾ ಕಾರನ್ನು ಹಿಂಬಾಲಿಸಿದ್ದಾರೆ. ನಂತರ ಜೋಗೇಶ್ವರಿಯ ಲೋಟಸ್ ಪೆಟ್ರೋಲ್ ಪಂಪ್ ಬಳಿ ಶಾ ಸ್ನೇಹಿತ ತನ್ನ ಕಾರನ್ನು ನಿಲ್ಲಿಸಿದ್ದರು. ಈ ವೇಳೆ ಕಾರಿನ ಬಳಿ ಬಂದ ಮಹಿಳೆ ಈ ವಿಷಯ ಇತ್ಯರ್ಥವಾಗಬೇಕಾದರೆ 50,000 ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದ್ದಾಳೆ. ಒಂದು ವೇಳೆ ಹಣ ನೀಡದಿದ್ದರೆ ಸುಳ್ಳು ಕೇಸ್ ಹಾಕುವುದಾಗಿ ಬೆದರಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಘಟನೆಯ ನಂತರ ಯಾದವ್ ಓಶಿವಾರ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದರು. ಹೋಟೆಲ್ ಸಿಬ್ಬಂದಿ ಶಾ ಜೊತೆ ಸೆಲ್ಫಿ ತೆಗೆದುಕೊಂಡವರ ಹೆಸರು ಮತ್ತು ಸಂಪರ್ಕ ಸಂಖ್ಯೆಗಳನ್ನು ಪೊಲೀಸರಿಗೆ ನೀಡಿದ್ದರು. ಇದಾದ ಬಳಿಕ ಮೂವರನ್ನು ಬಂಧಿಸಲಾಗಿತ್ತು. ಇಂದು ಮತತ್ತೊಬ್ಬನನ್ನು ಬಂಧಿಸಲಾಗಿದೆ.

ದೂರಿನ ಆಧಾರದ ಮೇಲೆ ಓಶಿವಾರಾ ಪೊಲೀಸರು ಸೆಕ್ಷನ್ 143 ಕಾನೂನುಬಾಹಿರ ಚಟುವಟಿಕೆ , 148 (ಗಲಭೆ), 384 (ಸುಲಿಗೆ), 506 (ಕ್ರಿಮಿನಲ್ ಬೆದರಿಕೆ) ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಇತರ ಕೆಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕುಡಿದ ಅಮಲಿನಲ್ಲಿ ಜಗಳ: ಘಟನೆಯ ವೇಳೆ ಸಪ್ನಾ ಗಿಲ್ ಮತ್ತು ಅವರ ಸ್ನೇಹಿತ ಠಾಕೂರ್ ಕುಡಿದ ಅಮಲಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಪ್ನಾ ಗಿಲ್​ರನ್ನು ಶುಕ್ರವಾರ ಅಂಧೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಫೆಬ್ರವರಿ 20 ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.

ಓದಿ: ಸೆಲ್ಫಿ ವಿಚಾರದಲ್ಲಿ ಗಲಾಟೆ: ಕ್ರಿಕೆಟಿಗ ಪೃಥ್ವಿ ಶಾ, ಸ್ನೇಹಿತನ ಕಾರಿನ ಮೇಲೆ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.