ನಾರ್ಥಾಂಪ್ಟನ್ (ಲಂಡನ್): ಇಂಗ್ಲೆಂಡ್‌ನ ದೇಶೀಯ ಕ್ರಿಕೆಟ್ನಲ್ಲಿ ಮುಂಬೈ ಆಟಗಾರ ದಾಖಲೆಯ ಆಟ ಆಡಿದ್ದಾರೆ. ಫಾರ್ಮ್ ಕಂಡುಕೊಳ್ಳಲು ಇಂಗ್ಲೆಂಡ್‌ಗೆ ಪ್ರವಾಸ ಮಾಡಿ ಅಲ್ಲಿನ ದೇಶೀ ಕ್ರಿಕೆಟ್ನಲ್ಲಿ ಆಡುತ್ತಿರುವ ಪೃಥ್ವಿ ಶಾ 244 ರನ್ ಗಳಿಸಿದ್ದಾರೆ. ಇಂಗ್ಲೆಂಡ್‌ನ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ದ್ವಿಶತಕ ಗಳಿಸಿದ ವಿಶ್ವದ 3ನೇ ಕ್ರಿಕೆಟಿಗ ಎಂದ ದಾಖಲೆಯನ್ನೂ ಶಾ ಬರೆದರು. ಅಲ್ಲದೇ ದೇಶೀಯ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿಯೂ ಹೊರಹೊಮ್ಮಿದ್ದಾರೆ.
ಭಾರತದ ದೇಶೀ ಕ್ರಿಕೆಟ್ನಲ್ಲಿ ಮಿಂಚಿ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದ ಶಾ, ಇತ್ತೀಚಿನ ವರ್ಷಗಳಲ್ಲಿ ಉತ್ತಮ ಫಾರ್ಮ್ ತೋರುವಲ್ಲಿ ವಿಫಲರಾಗಿದ್ದರು. ಈ ವರ್ಷದ ಐಪಿಎಲ್ನಲ್ಲೂ ಅತ್ಯಂತ ಕಳೆಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇದರಿಂದಾಗಿ ರಾಷ್ಟ್ರೀಯ ತಂಡದ ಆಯ್ಕೆ ಅವರಿಗೆ ಗಗನ ಕುಸುಮವಾಗಿತ್ತು. ಹೀಗಾಗಿ ಹಿರಿಯ ಆಟಗಾರರಾದ ಪೂಜಾರ ಮತ್ತು ರಹಾನೆ ಮಾರ್ಗ ಹಿಡಿದ ಶಾ ಇಂಗ್ಲೆಂಡ್‌ನ ದೇಶೀ ತಂಡ ಸೇರಿಕೊಂಡಿದ್ದಾರೆ. ಲಂಡನ್ನಲ್ಲಿ ನಾರ್ಥಾಂಪ್ಟನ್‌ಶೈರ್ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ.
-
🚨 PRITHVI SHAW HAS 200! 🚨#MBODC23 pic.twitter.com/GeVYVD3o6z
— Metro Bank One Day Cup (@onedaycup) August 9, 2023 " class="align-text-top noRightClick twitterSection" data="
">🚨 PRITHVI SHAW HAS 200! 🚨#MBODC23 pic.twitter.com/GeVYVD3o6z
— Metro Bank One Day Cup (@onedaycup) August 9, 2023🚨 PRITHVI SHAW HAS 200! 🚨#MBODC23 pic.twitter.com/GeVYVD3o6z
— Metro Bank One Day Cup (@onedaycup) August 9, 2023
ಇಂದು ಸೋಮರ್‌ಸೆಟ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ನಾರ್ಥಾಂಪ್ಟನ್‌ಶೈರ್ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಪಂದ್ಯದಲ್ಲಿ ಶಾ ಭರ್ಜರಿ ಬ್ಯಾಟ್ ಬೀಸಿದ್ದಾರೆ. 153 ಎಸೆತಗಳನ್ನು ಎದುರಿಸಿ 28 ಬೌಂಡರಿ ಮತ್ತು 11 ಸಿಕ್ಸ್ ಸಹಾಯದಿಂದ 244 ರನ್ ಗಳಿಸಿದರು. ಶಾ ದ್ವಿಶತಕದ ನೆರವಿನಿಂದ ನಾರ್ಥಾಂಪ್ಟನ್‌ಶೈರ್ ತಂಡ 50 ಓವರ್ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡ 415 ರನ್ ಬೃಹತ್ ಗುರಿ ನೀಡಿತು.
ಗರಿಷ್ಠ ರನ್ ದಾಖಲೆ ಮುರಿದ ಶಾ: ಇಂಗ್ಲೆಂಡ್‌ನ ದೇಶೀ ಕ್ರಿಕೆಟ್ನಲ್ಲಿ ಇದು ಮೂರನೇ ದ್ವಿಶತಕ ಎಂಬ ದಾಖಲೆಯಾಯಿತು. ಅಷ್ಟೇ ಅಲ್ಲ, ಟೂರ್ನಿಯಲ್ಲಿ ಈವರೆಗೆ 206 ರನ್ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು. 207 ರನ್ ಗಳಿಸುತ್ತಿದ್ದಂತೆ ಶಾ ಈ ದಾಖಲೆಯನ್ನೂ ಮುರಿದರು. ಅಂತಿಮವಾಗಿ 244 ರನ್ ಗಳಿಸಿ ಔಟಾದರು. ಇದರಿಂದ ಲಂಡನ್ ದೇಶೀ ಕ್ರಿಕೆಟ್ನಲ್ಲಿ ಇದು ಒಬ್ಬ ಬ್ಯಾಟರ್ ಗಳಿಸಿದ ಬೃಹತ್ ಮೊತ್ತವಾಯಿತು.
ಲಿಸ್ಟ್ ಎ ಕ್ರಿಕೆಟ್ನಲ್ಲಿ ಹೆಚ್ಚಿನ ದ್ವಿಶತಕ: ಲಿಸ್ಟ್ ಎ ಕ್ರಿಕೆಟ್ನಲ್ಲಿ ಹೆಚ್ಚು ದ್ವಿಶತಕ ಗಳಿಸಿದ ಭಾರತದ ಎರಡನೇ ಆಟಗಾರನಾಗಿದ್ದಾರೆ ಪೃಥ್ವಿ ಶಾ. ಪ್ರಸ್ತುತ ಭಾರತದ ನಾಯಕ ರೋಹಿತ್ ಶರ್ಮಾ ಲಿಸ್ಟ್ ಎ ಕ್ರಿಕೆಟ್ನಲ್ಲಿ ಮೂರು ಬಾರಿ ದ್ವಿಶತಕಗಳಿಸಿದ್ದಾರೆ. ಶಾ ಅವರದ್ದು ಎರಡನೇ ಡಬಲ್ ಹಂಡ್ರೆಡ್ ಇದಾಗಿದೆ.
ಈ ವರ್ಷ ಕೌಂಟಿ ಕ್ರಿಕೆಟ್ ಆಡಿದ ಐದನೇ ಆಟಗಾರ ಶಾ. ಇವರಿಗೂ ಮುನ್ನ ಚೇತೇಶ್ವರ ಪೂಜಾರ (ಸಸೆಕ್ಸ್), ಅಜಿಂಕ್ಯ ರಹಾನೆ (ಲೀಸೆಸ್ಟರ್‌ಶೈರ್) ಅರ್ಷ್‌ದೀಪ್ ಸಿಂಗ್ (ಕೆಂಟ್) ಮತ್ತು ನವದೀಪ್ ಸೈನಿ (ವೋರ್ಸೆಸ್ಟರ್‌ಶೈರ್) ಪರ ಆಡಿದ್ದರು.
ಇದನ್ನೂ ಓದಿ: ICC ODI Rankings: ಗಿಲ್, ಕಿಶನ್‌ಗೆ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಸಿಹಿ ಸುದ್ದಿ!