ETV Bharat / sports

’ತೂಕ ಕಡಿಮೆ ಮಾಡ್ಕೊಂಡು ಪಂತ್​ ರೀತಿ ಟೀಮ್​ ಇಂಡಿಯಾಗೆ ಹಿಂತಿರುಗಿ’ : ಪೃಥ್ವಿ ಶಾಗೆ ಬಿಸಿಸಿಐ ಸಲಹೆ! - Rishabh Pant

ವಿಜಯ್ ಹಜಾರೆಯಲ್ಲಿ 800+ ರನ್ ಮತ್ತು ಐಪಿಎಲ್​ ಕೂಡ ಅದ್ಭುತ ಪ್ರದರ್ಶನ ತೋರಿದ್ದರು. ಆದರೆ ಟೆಸ್ಟ್​ ತಂಡಕ್ಕೆ ಪ್ರಕಟಿಸಿದ 20 ಸದಸ್ಯರ ತಂಡದಲ್ಲಿ ಮಾತ್ರ ಅವರನ್ನು ಕಡೆಗಣಿಸಲಾಗಿದೆ. ಅಲ್ಲದೇ ಹೆಚ್ಚುವರಿ ಆಟಗಾರರ ಪಟ್ಟಿಯಲ್ಲೂ ಅವಕಾಶ ನೀಡಿಲ್ಲದಿರುವುದು ಅಚ್ಚರಿಯ ವಿಚಾರವಾಗಿದೆ.

ಟೆಸ್ಟ್​ ತಂಡಕ್ಕೆ ಶಾ ಕಮ್​ಬ್ಯಾಕ್
ಪೃಥ್ವಿ ಶಾ
author img

By

Published : May 8, 2021, 3:15 PM IST

ನವದೆಹಲಿ: ನ್ಯೂಜಿಲ್ಯಾಂಡ್​ ವಿರುದ್ಧ ಇಂಗ್ಲೆಂಡ್​ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಮತ್ತು ಇಂಗ್ಲೆಂಡ್​ ಸರಣಿಗೆ ಶುಕ್ರವಾರ ಭಾರತ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಅದ್ಭುತ ಫಾರ್ಮ್​ನಲ್ಲಿರುವ ಪೃಥ್ವಿ ಶಾಗೆ ಕೊಕ್​ ನೀಡಲಾಗಿದೆ.

ವಿಜಯ್ ಹಜಾರೆಯಲ್ಲಿ 800+ ರನ್ ಮತ್ತು ಐಪಿಎಲ್​ ಕೂಡ ಅದ್ಭುತ ಪ್ರದರ್ಶನ ತೋರಿದ್ದರು. ಆದರೆ, ಟೆಸ್ಟ್​ ತಂಡಕ್ಕೆ ಪ್ರಕಟಿಸಿದ 20 ಸದಸ್ಯರ ತಂಡದಲ್ಲಿ ಮಾತ್ರ ಅವರನ್ನು ಕಡೆಗಣಿಸಲಾಗಿದೆ. ಅಲ್ಲದೇ ಹೆಚ್ಚುವರಿ ಆಟಗಾರರ ಪಟ್ಟಿಯಲ್ಲೂ ಅವಕಾಶ ನೀಡಿಲ್ಲದಿರುವುದು ಅಚ್ಚರಿಯ ವಿಚಾರವಾಗಿದೆ.

" 21 ವರ್ಷದ ಪೃಥ್ವಿ ಮೈದಾನದಲ್ಲಿ ತುಂಬಾ ನಿಧಾನವಾಗಿ ಓಡಾಡುತ್ತಾರೆ. ಅವರು ಒಂದಷ್ಟು ಕೆಜಿ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು. ಆಸ್ಟ್ರೇಲಿಯಾದಲ್ಲಿ ಫೀಲ್ಡಿಂಗ್‌ ಮಾಡುವಾಗ ಏಕಾಗ್ರತೆ ಕೊರತೆ ಅನುಭವಿಸಿದ್ದರು. ಶಾ ಅವರು ಆಸ್ಟ್ರೇಲಿಯಾದಿಂದ ಹಿಂದಿರುಗಿದಾಗಿನಿಂದಲೂ ಶ್ರಮಿಸುತ್ತಿದ್ದಾರೆ. ಅವರು ರಿಷಭ್ ಪಂತ್​ ಅವರನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಕೆಲವು ತಿಂಗಳ ಹಿಂದೆ ಪಂತ್‌ ಕಮ್‌ಬ್ಯಾಕ್‌ ಮಾಡಿದ್ದಾರೆ, ಇದೀಗ ಪೃಥ್ವಿ ಕೂಡ ಮಾಡಬಹುದು" ಎಂದು ಬಿಸಿಸಿಐ ಮೂಲ ತಿಳಿಸಿದೆ.

ಆಟಗಾರರು ಈ ರೀತಿಯ ಸಲಹೆ ಪಡೆಯುತ್ತಿರುವುದು ಇದೇ ಮೊದಲೇನಲ್ಲ, ಕೆಲವು ತಿಂಗಳ ಹಿಂದೆ ರಿಷಭ್ ಪಂತ್ ಕೂಡ ಇದೇ ಸಮಸ್ಯೆಯಿಂದ ಟೀಕೆಗೆ ಗುರಿಯಾಗಿದ್ದರು. ನಂತರ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್ ಸಾಕಷ್ಟು ಶ್ರಮಿಸಿದ್ದರು. ಎಲ್ಲ ಮಾದರಿಯ ಕ್ರಿಕೆಟ್​ನಿಂದ ಡ್ರಾಪ್ ಆಗುವ ಹಂತಕ್ಕೆ ತಲುಪಿದ್ದ ಪಂತ್, ಅದ್ಭುತವಾಗಿ ತಿರುಗಿಬಿದ್ದು, ಇದೀಗ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಪ್ರಧಾನ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್ ಆಗಿ ಮಿಂಚುತ್ತಿದ್ದಾರೆ. ಪೃಥ್ವಿ ಖಂಡಿತಾ ಪಂತ್ ಹಾದಿಯನ್ನು ಅನುಸರಿಸಿದರೆ ಭವಿಷ್ಯದಲ್ಲಿ ತಂಡದಲ್ಲಿ ಕಾಣಿಸಿಕೊಳ್ಳಬಹುದಾಗಿದೆ.

ಇದನ್ನು ಓದಿ:ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​: 20 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಬಿಸಿಸಿಐ, ಯಾರಿಗೆಲ್ಲ ಚಾನ್ಸ್​?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.