ಅಬುಧಾಬಿ: ಅಗ್ರಸ್ಥಾನಿಯಾಗಿ ಪ್ಲೇ ಆಫ್ ತಲುಪಿರುವ ಮಹೇಂದ್ರ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ಶನಿವಾರ ಕಣಕ್ಕಿಳಿಯಲಿದ್ದು, ಇದು ಸಾಮ್ಸನ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಮೂರು ಬಾರಿ ಐಪಿಎಲ್ ಚಾಂಪಿಯನ್ ಸಿಎಸ್ಕೆ ಆಡಿರುವ 11 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್ ಪ್ರವೇಶಿಸಿದೆ. ನಂತರದ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(16) ಇದೆ. ಒಂದು ವೇಳೆ ಈ ಪಂದ್ಯವನ್ನು ಗೆದ್ದರೆ ಚೆನ್ನೈ ತಂಡ ಅಗ್ರ ಎರಡು ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.
ಆದರೆ ರಾಜಸ್ಥಾನ್ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಅವರು 11 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಮತ್ತು 7ರಲ್ಲಿ ಸೋಲು ಕಂಡಿದ್ದು ಕೊನೆಯಿಂದ 2ನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದರೆ 10 ಅಂಕವನ್ನು ಗಳಿಸಿಕೊಳ್ಳಲಿದ್ದು, ಕೆಕೆಆರ್ ಮತ್ತು ಪಂಜಾಬ್ ತಂಡದೊಂದಿಗೆ ಪೈಪೋಟಿಗೆ ಬರಲಿದೆ. ಒಂದು ವೇಳೆ ಈ ಪಂದ್ಯವನ್ನು ರಾಜಸ್ಥಾನ್ ಗೆದ್ದರೆ 2021ರ ಲೀಗ್ ಕೊನೆಯ ಪಂದ್ಯದವರೆಗೂ ರೋಚಕವಾಗಿರಲಿದೆ.
ಆದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲುವುದು ಸ್ಯಾಮ್ಸನ್ ಪಡೆಗೆ ಅಷ್ಟು ಸುಲಭದ ಮಾತಲ್ಲ. ಈಗಾಗಲೇ ಮೊದಲ ಮುಖಾಮುಖಿಯಲ್ಲಿ 38 ರನ್ಗಳ ಸೋಲು ಕಂಡಿದೆ. ಅಲ್ಲದೆ ಕಳೆದ ಪಂದ್ಯದಲ್ಲಿ ಕೊನೆಯ ಸ್ಥಾನದಲ್ಲಿರುವ ರಾಜಸ್ಥಾನ್ ವಿರುದ್ಧವೂ 7 ವಿಕೆಟ್ಗಳ ಸೋಲು ಕಂಡಿರುವ ಅವರ ಆತ್ಮ ವಿಶ್ವಾಸ ಕೂಡ ಕ್ಷೀಣಿಸಿದೆ.
ಈ ಪಂದ್ಯದಲ್ಲಿ ಕಳಪೆ ಫಾರ್ಮ್ನಲ್ಲಿರುವ ಕ್ರಿಸ್ ಮೋರಿಸ್, ಪರಾಗ್, ತೆವಾಟಿಯಾರನ್ನು ತಂಡದಿಂದ ಕೈಬಿಟ್ಟು ಅವರ ಸ್ಥಾನಕ್ಕೆ ಬೇರೆ ಆಟಗಾರರನ್ನು ಬದಲಾಣೆ ಮಾಡಿಕೊಂಡು ಮಧ್ಯಮ ಕ್ರಮಾಂಕವನ್ನು ಬಲಿಷ್ಠ ಪಡಿಸಿಕೊಂಡರೆ ಸಿಎಸ್ಕೆ ಎದುರು ಪೈಪೋಟಿಯನ್ನಾದರು ನೀಡಬಹುದಾಗಿದೆ.
ಮುಖಾಮುಖಿ: ಎರಡು ತಂಡಗಳು 25 ಪಂದ್ಯಗಳಲ್ಲಿ ಮುಖಾಮುಖಿಯಾಗಲಿದ್ದು, ಸಿಎಸ್ಕೆ 15 ಮತ್ತು ರಾಯಲ್ಸ್ 10ರಲ್ಲಿ ಗೆಲುವು ಸಾಧಿಸಿದೆ.