ETV Bharat / sports

ಶಿಖರ್​ ಧವನ್​ ಕಮ್​ಬ್ಯಾಕ್ ಬಲ​, ಸರಣಿ ವೈಟ್​ವಾಷ್​ ಮಾಡುವತ್ತ ಕಣ್ಣಿಟ್ಟ ಭಾರತ - ಶಿಖರ್ ಧವನ್​

ಮೊದಲ ಎರಡು ಪಂದ್ಯಗಳಲ್ಲಿ ಎಲ್ಲ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿ ಸುಲಭವಾಗಿ ಗೆದ್ದ ನಂತರ, ಭಾರತ ತಂಡ ಕೊನೆಯ ಪಂದ್ಯದತ್ತ ಮುಖ ಮಾಡಿದೆ. ಕೋವಿಡ್​ 19 ಕಾರಣದಿಂದ ಮೊದಲೆರಡು ಪಂದ್ಯಗಳನ್ನು ಕಳೆದುಕೊಂಡಿದ್ದ ಶಿಖರ್​ ಧವನ್​ ಸೇರಿದಂತೆ ಇತರ ನಾಲ್ಕು ಆಟಗಾರರು ಕೊನೆಯ ಪಂದ್ಯಕ್ಕೆ ಲಭ್ಯರಾಗಲಿದ್ದು, ಕೊನೆಯ ಪಂದ್ಯದಲ್ಲಿ ರೋಹಿತ್ ಅನಿವಾರ್ಯವಾಗಿ ಕೆಲವು ಬದಲಾವಣೆಗಳನ್ನು ಮಾಡಬೇಕಿದೆ.

ndia eye whitewash as Dhawan returns to add more firepower
ಭಾರತ ಮತ್ತು ವೆಸ್ಟ್​ ಇಂಡೀಸ್ 3ನೇ ಏಕದಿನ ಪಂದ್ಯ
author img

By

Published : Feb 10, 2022, 3:38 PM IST

ಅಹ್ಮದಾಬಾದ್​: ಅನುಭವಿ ಆರಂಭಿಕ ಬ್ಯಾಟರ್​ ಶಿಖರ್ ಧವನ್​ ಭಾರತ ತಂಡಕ್ಕೆ ಸೇರಿಕೊಂಡಿರುವುದರಿಂದ ಬ್ಯಾಟಿಂಗ್​ ವಿಭಾಗದ ಬಲ ಹೆಚ್ಚಿಸಿದ್ದು, ವೆಸ್ಟ್​ ಇಂಡೀಸ್​ ವಿರುದ್ಧದ 3ನೇ ಏಕದಿನ ಪಂದ್ಯವನ್ನು ಗೆದ್ದ ಸರಣಿಯನ್ನು ವೈಟ್​ವಾಷ್​ ಮಾಡಿಕೊಳ್ಳಲು ಭಾರತ ಸಿದ್ಧವಾಗಿದೆ.

ಮೊದಲ ಎರಡು ಪಂದ್ಯಗಳಲ್ಲಿ ಎಲ್ಲ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿ ಸುಲಭವಾಗಿ ಗೆದ್ದ ನಂತರ, ಭಾರತ ತಂಡ ಕೊನೆಯ ಪಂದ್ಯದತ್ತ ಮುಖ ಮಾಡಿದೆ. ಕೋವಿಡ್​ 19 ಕಾರಣದಿಂದ ಮೊದಲೆರಡು ಪಂದ್ಯಗಳನ್ನು ಕಳೆದುಕೊಂಡಿದ್ದ ಶಿಖರ್​ ಧವನ್​ ಸೇರಿದಂತೆ ಇತರ ನಾಲ್ಕು ಆಟಗಾರರು ಕೊನೆಯ ಪಂದ್ಯಕ್ಕೆ ಲಭ್ಯರಾಗಲಿದ್ದು, ಕೊನೆಯ ಪಂದ್ಯದಲ್ಲಿ ರೋಹಿತ್ ಅನಿವಾರ್ಯವಾಗಿ ಕೆಲವು ಬದಲಾವಣೆಗಳನ್ನು ಮಾಡಬೇಕಿದೆ.

ಧವನ್​ ಅನುಪಸ್ಥಿತಿಯಲ್ಲಿ ಧವನ್​ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್​ ಆರಂಭಿಕನಾಗಿ ಕಣಕ್ಕಿಳಿದರೆ, ಎರಡನೇ ಪಂದ್ಯದಲ್ಲಿ ರಿಷಭ್ ಪಂತ್ ಇನ್ನಿಂಗ್ಸ್​ ಆರಂಭಿಸಿದ್ದರು. ಆದರೆ, ಇಬ್ಬರೂ ವೈಫಲ್ಯ ಅನುಭವಿಸಿದ್ದರು. ಎರಡನೇ ಪಂದ್ಯದಲ್ಲಿ ಭಾರತ ತಂಡ 44ರನ್​ಗಳ ಜಯ ಸಾಧಿಸಿದ ನಂತರ ರೋಹಿತ್ ಕೊನೆಯ ಪಂದ್ಯಕ್ಕೆ ಧವನ್​ ಲಭ್ಯರಿರುತ್ತಾರೆ ಎಂದು ಖಚಿತಪಡಿಸಿದ್ದಾರೆ.

ಧವನ್​ ಆರಂಭಿಕನಾಗುವುದು ಖಚಿತವಾಗಿರುವುದರಿಂದ ಉಪನಾಯಕ ಕೆಎಲ್​ ರಾಹುಲ್​ ತಮ್ಮ 71ನೇ ಶತಕಕ್ಕಾಗಿ ಕಾಯುತ್ತಿರುವ ಮಾಜಿ ನಾಯಕ ವಿರಾಟ್​ ಕೊಹ್ಲಿ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಮುಂದುವರಿಯಬೇಕಾಗಿದೆ. ಪಂತ್​ ಕೂಡ ಸೂರ್ಯಕುಮಾರ್​ ನಂತರದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ. ಧವನ್ ಆಗಮನದಿಂದ ಆಲ್​ರೌಂಡರ್​ ದೀಪಕ್​ ಹೂಡಾ ಕೊನೆಯ ಪಂದ್ಯದಿಂದ ಹೊರಬೀಳಲಿದ್ದಾರೆ.

ಬೆಂಚ್​ ಕಾಯುತ್ತಿರುವವರಿಗೆ ಅವಕಾಶ: ಇನ್ನು ವಿಂಡೀಸ್​ ತಂಡವನ್ನು 176 ಮತ್ತು 193ಕ್ಕೆ ನಿಯಂತ್ರಿಸುವಲ್ಲಿ ಬೌಲರ್​ಗಳು ಸಫಲರಾಗಿದ್ದಾರೆ. ಬೆಂಚ್​ ಕಾಯುತ್ತಿರುವ ಕುಲ್ದೀಪ್​ ಯಾದವ್​,ಯುವ ಬೌಲರ್​ ರವಿ ಬಿಷ್ಣೋಯ್​ಗೆ ಒಂದು ಅವಕಾಶ ನೀಡಬೇಕೆಂದು ಮ್ಯಾನೇಜ್​ಮೆಂಟ್​ ಬಯಸಿದರೆ ವಾಷಿಂಗ್ಟನ್​ ಸುಂದರ್ ಅಥವಾ ಯುಜ್ವೇಂದ್ರ ಚಹಲ್​ ಹೊರಗುಳಿಯಬಹುದು.

ವೇಗಿ ಆವೇಶ್​ ಖಾನ್​ಗೆ ಅವಕಾಶ ನೀಡಬೇಕೆಂದರೆ ಮೊಹಮ್ಮದ್ ಸಿರಾಜ್​ ಅವರಿಗೆ ವಿಶ್ರಾಂತಿ ನೀಡಬೇಕಾಗುತ್ತದೆ, ಏಕೆಂದರೆ ಪ್ರಸಿಧ್​ ಮತ್ತು ಶಾರ್ದುಲ್​ ಎರಡೂ ಪಂದ್ಯಗಳಲ್ಲಿ ವಿಕೆಟ್ ಪಡೆದಿರುವುದರಿಂದ ಅವರನ್ನು ಹೊರಗುಳಿಸುವ ಸಾಧ್ಯತೆ ಕಡಿಮೆಯಿದೆ.

ಇನ್ನು ಈಗಾಗಲೆ ಸರಣಿ ಕಳೆದುಕೊಂಡಿರುವ ವೆಸ್ಟ್ ಇಂಡೀಸ್​ ತಮ್ಮ ಆಟವನ್ನು ಸುಧಾರಿಸಿಕೊಳ್ಳುವ ದೃಷ್ಟಿಯಿಂದ ಕಣಕ್ಕಿಳಿಯಬೇಕಿದೆ. ವಿಂಡೀಸ್​ ಕಳೆದ 17 ಪಂದ್ಯಗಳಲ್ಲಿ 11ರಲ್ಲಿ 50 ಓವರ್​ಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಹಾಗಾಗಿ ನಾಯಕ ಕೀರನ್​ ಪೊಲಾರ್ಡ್​ ಸೇರಿದಂತೆ ಬ್ಯಾಟರ್​ಗಳು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಂತು ದೊಡ್ಡ ಮೊತ್ತಗಳಿಸಲು ತಂಡಕ್ಕೆ ನೆರವಾಗಬೇಕಿದೆ. ಆದರೆ ಬೌಲರ್​ಗಳ ಪ್ರದರ್ಶನ ಉತ್ತಮವಾಗಿದೆ. ಬಲಿಷ್ಠ ಭಾರತ ತಂಡವನ್ನು 2ನೇ ಏಕದಿನ ಪಂದ್ಯದಲ್ಲ 237ಕ್ಕೆ ನಿಯಂತ್ರಿಸುವಲ್ಲಿ ವಿಂಡೀಸ್​ ಬೌಲರ್​ಗಳು ಸಫಲರಾಗಿದ್ದರು.

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಮಯಾಂಕ್ ಅಗರ್ವಾಲ್, ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್-ಕೀಪರ್), ದೀಪಕ್ ಹೂಡಾ , ರಿಷಬ್ ಪಂತ್ (ವಿಕೆಟ್-ಕೀಪರ್), ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಶಾರುಖ್ ಖಾನ್.

ವೆಸ್ಟ್ ಇಂಡೀಸ್: ಕೀರನ್ ಪೊಲಾರ್ಡ್ (ನಾಯಕ), ಫ್ಯಾಬಿಯನ್ ಅಲೆನ್, ಎನ್‌ಕ್ರುಮಾ ಬೋನರ್, ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೀಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರೆಂಡನ್ ಕಿಂಗ್, ನಿಕೋಲಸ್ ಪೂರನ್, ಕೆಮರ್ ರೋಚ್, ರೊಮಾರಿಯೊ ಶೆಪರ್ಡ್, ಒಡಿಯನ್ ಸ್ಮಿತ್, ಹೇಡನ್ ವಾಲ್ಶ್ ಜೂನಿಯರ್

ಇದನ್ನೂ ಓದಿ:ತಂಡ ಜಯ ಸಾಧಿಸಿದ್ದಕ್ಕೆ ನಾಯಕ ರೋಹಿತ್​ ಶರ್ಮಾ ಶ್ಲಾಘನೆ; ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಬೆನ್ನುತಟ್ಟಿದ ಟೀಂ ಇಂಡಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.