ಹೈದರಾಬಾದ್: ಸದಾ ಒಂದಿಲ್ಲೊಂದು ವಿವಾದಿತ ನಡೆ ನುಡಿಗಳಿಂದಲೇ ಸದ್ದು ಮಾಡುವ ನಟಿ ಹಾಗು ಮಾಡೆಲ್ ಪೂನಂ ಪಾಂಡೆ ಮತ್ತೆ ಇಂಥದ್ದೇ ಹೇಳಿಕೆ ನೀಡಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಲು ಅಣಿಯಾಗಿದ್ದಾಳೆ.
ಬೋಲ್ಡ್ ಮತ್ತು ಮಾದಕತೆ ತುಂಬಿದ ನಟನೆಯಿಂದಲೇ ಗುರುತಿಸಿಕೊಂಡಿರುವ ನಟಿ, ಕೆಲವು ಹೇಳಿಕೆಗಳಿಂದ ಜನರನ್ನು ತನ್ನತ್ತ ಆಕರ್ಷಿಸುತ್ತಿದ್ದಾಳೆ. 2011ರಲ್ಲಿ ಮೊಟ್ಟ ಮೊದಲ ಬಾರಿ ಪೂನಂ ಪಾಂಡೆ ಎಂಬ ಹೆಸರು ಕುತೂಹಲ ಸೃಷ್ಟಿಸಿತ್ತು. ಇದಕ್ಕೆ ಕಾರಣ ಈಕೆ ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ಕೊಟ್ಟಿದ್ದ ಹೇಳಿಕೆ. ಆ ಸಂದರ್ಭದಲ್ಲಿ ಈ ನಟಿ, 2011 ವಿಶ್ವಕಪ್ ಗೆದ್ದರೆ ಸಾರ್ವಜನಿಕವಾಗಿ ಬೆತ್ತಲಾಗುತ್ತೇನೆ ಎಂದಿದ್ದಳು. ಆದ್ರೆ ಆಕೆ ತನ್ನ ಮಾತು ಉಳಿಸಿಕೊಂಡಿರುವ ಬಗ್ಗೆ ದಾಖಲೆಗಳು ಸಿಗುತ್ತಿಲ್ಲ.
ಈಗ ಭಾರತ ತಂಡ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿರುವ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಟೆಸ್ಟ್ ವಿಶ್ವಚಾಂಪಿಯನ್‌ಶಿಪ್ (WTC) ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪೈಪೋಟಿ ನಡೆಸುತ್ತಿದೆ. ಈ ಬಗ್ಗೆ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಪೂನಂ, ಫೈನಲ್‌ನಲ್ಲಿ ಗೆದ್ದು ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಪಡೆದರೆ ನಾನು ಬೆತ್ತಲಾಗುತ್ತೇನೆ ಎಂದಿದ್ದಾಳೆ.