ಹೈದರಾಬಾದ್: ಐಪಿಎಲ್ 15 ನೇ ಆವೃತ್ತಿಯ 10 ತಂಡಗಳ ಮಧ್ಯೆ ಭರ್ಜರಿಯಾಗಿಯೇ ಪೈಪೋಟಿ ನಡೆಯುತ್ತಿದೆ. ಹೊಸದಾಗಿ ಸೇರಿಕೊಂಡಿರುವ ಎರಡು ತಂಡಗಳೂ ಕೂಡ ತಮ್ಮ ಸಾಮರ್ಥ್ಯ ಸಾಬೀತು ಮಾಡಿದೆ. ಈ ಸೀಸನ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಆಡಿರುವ 2 ಪಂದ್ಯಗಳಲ್ಲಿ ಎರಡನ್ನೂ ಭರ್ಜರಿಯಾಗಿಯೇ ಗೆದ್ದು, 2.100 ನೆಟ್ರನ್ರೇಟ್ನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 3 ಪಂದ್ಯಗಳಾಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 2 ರಲ್ಲಿ ಗೆಲುವು ಪಡೆದು 2ನೇ ಸ್ಥಾನದಲ್ಲಿದೆ.
ಗುಜರಾತ್ ಟೈಟಾನ್ಸ್ ಮೂರನೇ ಸ್ಥಾನದಲ್ಲಿದ್ದರೆ, ನಿನ್ನೆ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗೆದ್ದು ನಾಲ್ಕನೇ ಸ್ಥಾನಕ್ಕೆ ಏರಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಗ್ರ 5 ರಲ್ಲಿ ಕಾಣಿಸಿಕೊಂಡಿದೆ.
-
A look at the Points Table after Match 1⃣1⃣ of the #TATAIPL 2022 🔽 #CSKvPBKS pic.twitter.com/O0CNlPFrAd
— IndianPremierLeague (@IPL) April 3, 2022 " class="align-text-top noRightClick twitterSection" data="
">A look at the Points Table after Match 1⃣1⃣ of the #TATAIPL 2022 🔽 #CSKvPBKS pic.twitter.com/O0CNlPFrAd
— IndianPremierLeague (@IPL) April 3, 2022A look at the Points Table after Match 1⃣1⃣ of the #TATAIPL 2022 🔽 #CSKvPBKS pic.twitter.com/O0CNlPFrAd
— IndianPremierLeague (@IPL) April 3, 2022
ನಂತರದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ (6), ರಾಯಲ್ ಚಾಲೆಂಜರ್ಸ್ ಬೆಂಗಳೂರು(7) ಮುಂಬೈ ಇಂಡಿಯನ್ಸ್(8), ಹಾಲಿ ಚಾಂಪಿಯನ್ ಆಗಿರುವ ಸಿಎಸ್‌ಕೆ ತಾನಾಡಿರುವ 3 ಪಂದ್ಯಗಳಲ್ಲಿ ಸೋತು 9 ನೇ ಸ್ಥಾನಕ್ಕೆ ಕುಸಿದಿದೆ. ಸನ್‌ರೈಸರ್ಸ್ ಹೈದರಾಬಾದ್ ಆಡಿದ 1 ಪಂದ್ಯದಲ್ಲೇ ಸೋತು ನೆಟ್ರನ್ರೇಟ್ ಆಧಾರದ ಮೇಲೆ ಕೊನೆ ಸ್ಥಾನದಲ್ಲಿದೆ.
ಕಿತ್ತಳೆ ಕ್ಯಾಪ್(ಟಾಪ್ 5)
1. ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್) - 135 ರನ್
2. ಇಶಾನ್ ಕಿಶನ್ (ಮುಂಬೈ ಇಂಡಿಯನ್ಸ್) - 135 ರನ್
3. ಶಿವಂ ದುಬೆ (CSK) - 109 ರನ್
4. ಲಿಯಾಮ್ ಲಿವಿಂಗ್ಸ್ಟೋನ್ (ಪಂಜಾಬ್ ಕಿಂಗ್ಸ್) - 98 ರನ್
5. ಆಂಡ್ರೆ ರಸೆಲ್ (ಕೆಕೆಆರ್) - 95 ರನ್
ನೇರಳೆ ಕ್ಯಾಪ್
1. ಉಮೇಶ್ ಯಾದವ್ (ಕೆಕೆಆರ್) - 8 ವಿಕೆಟ್
2. ರಾಹುಲ್ ಚಹಾರ್ (ಪಂಜಾಬ್ ಕಿಂಗ್ಸ್) - 6 ವಿಕೆಟ್
3. ಯಜುವೇಂದ್ರ ಚಹಲ್ (ರಾಜಸ್ಥಾನ್ ರಾಯಲ್ಸ್) - 5 ವಿಕೆಟ್
4. ಮೊಹಮ್ಮದ್ ಶಮಿ (ಗುಜರಾತ್ ಟೈಟಾನ್ಸ್) - 5 ವಿಕೆಟ್
5. ಟಿಮ್ ಸೌಥಿ (ಕೆಕೆಆರ್) - 5 ವಿಕೆಟ್
ಓದಿ: ಕ್ರಿಕೆಟ್ ಬದುಕಿಗೆ ರಾಸ್ ಟೇಲರ್ ವಿದಾಯ...ನೆದರ್ಲ್ಯಾಂಡ್ ತಂಡದಿಂದ ಗಾರ್ಡ್ ಆಫ್ ಆನರ್ ಗೌರವ