ನವದೆಹಲಿ : ಯುಎಇಯಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ನೀರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿ ಟೀಕೆಗೆ ಗುರಿಯಾಗಿರುವ ಭಾರತ ತಂಡದ ಪರ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಬ್ಯಾಟಿಂಗ್ ಮಾಡಿದ್ದಾರೆ.
ಆಟಗಾರರು ರೋಬೋಟ್ಗಳಲ್ಲ, ಅಭಿಮಾನಿಗಳು ಇಂತಹ ಸಂದರ್ಭದಲ್ಲಷ್ಟೇ ಅಲ್ಲ, ಎಲ್ಲಾ ಸಂದರ್ಭದಲ್ಲೂ ತಂಡವನ್ನು ಬೆಂಬಲಿಸಬೇಕು ಎಂದು ಅಭಿಪ್ರಾಯವ್ಯಕ್ತಪಡಿಸದ್ದಾರೆ.
"ಕ್ರೀಡೆ ಅಂದಮೇಲೆ ಒಬ್ಬರಿಗೆ ಜಯ ಮತ್ತು ಮತ್ತೊಬ್ಬರಿಗೆ ಸೋಲು ಸಾಮಾನ್ಯವಾಗಿರುತ್ತದೆ. ಅದೆಂತಹ ಆಟಗಾರನೇ ಆದರೂ ಸೋಲಿಲ್ಲದೆ ಮೈದಾನದಿಂದ ಹೊರ ಹೋಗಲು ಸಾಧ್ಯವಿಲ್ಲ. ನಿಮ್ಮ ದೇಶವನ್ನು ಪ್ರತಿನಿಧಿಸುವುದು ದೊಡ್ಡ ಗೌರವ.
ಕ್ರೀಡಾಪಟುಗಳು ರೋಬೋಟ್ಗಳಲ್ಲ ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳಿ ಮತ್ತು ಅವರಿಗೆ ಎಲ್ಲಾ ಸಂದರ್ಭದಲ್ಲೂ ನಿಮ್ಮ ಪ್ರೋತ್ಸಾಹ ಅಗತ್ಯವಿದೆ" ಎಂದು ಪೀಟರ್ಸನ್ ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ:T20 ವಿಶ್ವಕಪ್: 2ನೇ ಪಂದ್ಯದಲ್ಲಿ ಕಳಪೆ ಪ್ರದರ್ಶನಕ್ಕೆ ಸೆಹ್ವಾಗ್ ಬೇಸರ.. ಟೀಕಿಸಬೇಡಿ ಎಂದ ಟರ್ಬನೇಟರ್
-
खेल में एक विजेता और एक हारने वाला होता है। कोई भी खिलाड़ी हारने के लिए बाहर नहीं जाता है। अपने देश का प्रतिनिधित्व करना सबसे बड़ा सम्मान है। कृपया महसूस करें कि खेल के लोग रोबोट नहीं हैं और उन्हें हर समय समर्थन की आवश्यकता है।
— Kevin Pietersen🦏 (@KP24) November 1, 2021 " class="align-text-top noRightClick twitterSection" data="
">खेल में एक विजेता और एक हारने वाला होता है। कोई भी खिलाड़ी हारने के लिए बाहर नहीं जाता है। अपने देश का प्रतिनिधित्व करना सबसे बड़ा सम्मान है। कृपया महसूस करें कि खेल के लोग रोबोट नहीं हैं और उन्हें हर समय समर्थन की आवश्यकता है।
— Kevin Pietersen🦏 (@KP24) November 1, 2021खेल में एक विजेता और एक हारने वाला होता है। कोई भी खिलाड़ी हारने के लिए बाहर नहीं जाता है। अपने देश का प्रतिनिधित्व करना सबसे बड़ा सम्मान है। कृपया महसूस करें कि खेल के लोग रोबोट नहीं हैं और उन्हें हर समय समर्थन की आवश्यकता है।
— Kevin Pietersen🦏 (@KP24) November 1, 2021
ಟಿ20 ವಿಶ್ವಕಪ್ನಲ್ಲಿ ನೆಚ್ಚಿನ ತಂಡವಾಗಿದ್ದ ಭಾರತ ಅನಿರೀಕ್ಷಿತ ವೈಫಲ್ಯ ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 10 ವಿಕೆಟ್ಗಳ ಸೋಲು ಕಂಡರೆ, ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 8 ವಿಕೆಟ್ಗಳ ಸೋಲು ಕಂಡು ಸೆಮಿಫೈನಲ್ಸ್ ರೇಸ್ನಿಂದ ಹೊರ ಬಿದ್ದಿದೆ. ಭಾರತ ಪ್ರಸ್ತುತ ಅಂಕಪಟ್ಟಿಯಲ್ಲಿ ಖಾತೆ ತೆರೆಯದೇ 5ನೇ ಸ್ಥಾನದಲ್ಲಿದ್ದು, ಸೆಮಿಫೈನಲ್ಸ್ ಪ್ರವೇಶಿಸಲು ಬೇರೆ ತಂಡಗಳು ಫಲಿತಾಂಶವನ್ನು ಅವಲಂಭಿಸಬೇಕಾಗಿದೆ.
-
Let’s not be harsh on our players.yes we know them for better cricket.Sabse jyada players ko hurt hota hai after such results.but well done to @BLACKCAPS NZ for winning th match.they were fantastic in all departments @BCCI @T20WorldCup @ICC @StarSportsIndia
— Harbhajan Turbanator (@harbhajan_singh) October 31, 2021 " class="align-text-top noRightClick twitterSection" data="
">Let’s not be harsh on our players.yes we know them for better cricket.Sabse jyada players ko hurt hota hai after such results.but well done to @BLACKCAPS NZ for winning th match.they were fantastic in all departments @BCCI @T20WorldCup @ICC @StarSportsIndia
— Harbhajan Turbanator (@harbhajan_singh) October 31, 2021Let’s not be harsh on our players.yes we know them for better cricket.Sabse jyada players ko hurt hota hai after such results.but well done to @BLACKCAPS NZ for winning th match.they were fantastic in all departments @BCCI @T20WorldCup @ICC @StarSportsIndia
— Harbhajan Turbanator (@harbhajan_singh) October 31, 2021
ಭಾರತ ತಂಡದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಟೀಂ ಇಂಡಿಯಾ ಪರ ನಿಂತಿದ್ದು, ಭಾರತೀಯ ತಂಡವನ್ನ ಅಷ್ಟೊಂದು ಕಟುವಾಗಿ ಟೀಕಿಸಬೇಡಿ ಎಂದು ಕ್ರಿಕೆಟ್ ಪ್ರೇಮಿಗಳಲ್ಲಿ ಮನವಿ ಮಾಡಿದ್ದಾರೆ. ನಮ್ಮದು ಉತ್ತಮ ಕ್ರಿಕೆಟ್ ತಂಡ ಎಂದು ನಾವು ತಿಳಿದಿದ್ದೇವೆ. ಇದು ಹಲವು ಬಾರಿ ಸಾಬೀತಾಗಿದೆ.
ಈ ರೀತಿಯ ಫಲಿತಾಂಶದಿಂದಾಗಿ ಆಟಗಾರರಿಗೆ ಅತೀವ ನೋವಾಗಿರುತ್ತದೆ. ಆದರೆ, ನ್ಯೂಜಿಲೆಂಡ್ ತಂಡ ಉತ್ತಮ ಆಟ ಪ್ರದರ್ಶಿಸಿದೆ. ಅವರು ಎಲ್ಲಾ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ:ಹ್ಲಿಯ ಹೇಳಿಕೆಗಳು ದುರ್ಬಲ, ಧೋನಿ-ಶಾಸ್ತ್ರಿ ಆಟಗಾರರ ನೈತಿಕ ಸ್ಥೈರ್ಯ ಹೆಚ್ಚಿಸಬೇಕು : ಕಪಿಲ್ ದೇವ್