ETV Bharat / sports

ಕುಸಾಲ್ ಪೆರೆರಾಗೆ ಲಂಕಾ ನಾಯಕನ ಪಟ್ಟ.. ಮ್ಯಾಥ್ಯೂಸ್​, ಕರುಣರತ್ನೆಗೆ ಗೇಟ್ಪಾಸ್​ - ಬಾಂಗ್ಲಾದೇಶಕ್ಕೆ ಶ್ರೀಲಂಕಾ ತಂಡ ಪ್ರವಾಸ

ಲಂಕಾ ಪರ 101 ಏಕದಿನ ಪಂದ್ಯ, 22 ಟೆಸ್ಟ್​ ಮತ್ತು 47 ಟಿ20 ಪಂದ್ಯಗಳನ್ನಾಡಿರುವ ಕುಸಾಲ್ ಪೆರರಾ ಅವರನ್ನು ದಿಮುತ್ ಕರುಣರತ್ನೆ ಬದಲಾಗಿ ಸೀಮಿತ ಓವರ್​ಗಳ ನಾಯಕತ್ವ ನೀಡಿದೆ. ಇನ್ನು, ಕರುಣರತ್ನೆ ಜೊತೆಗೆ ಹಿರಿಯ ಆಲ್​ರೌಂಡರ್​ ಏಂಜೆಯೋ ಮ್ಯಾಥ್ಯೂಸ್​ , ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್ ಲಹಿರು ತಿರಿಮನ್ನೆ ಮತ್ತು ವಿಕೆಟ್​ ಕೀಪರ್ ದಿನೇಶ್ ಚಾಂಡಿಮಾಲ್ ಅವರನ್ನು ಆಯ್ಕೆ ಸಮಿತಿ ಸೀಮಿತ ಓವರ್​ಗಳ ತಂಡದಿಂದ ಕೈಬಿಟ್ಟಿದೆ..

ಕುಸಾಲ್ ಪೆರೆರಾ ಶ್ರೀಲಂಕಾ ನಾಯಕ
ಕುಸಾಲ್ ಪೆರೆರಾ ಶ್ರೀಲಂಕಾ ನಾಯಕ
author img

By

Published : May 12, 2021, 5:59 PM IST

ಕೊಲೊಂಬೊ : ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಕುಸಾಲ್ ಪೆರೆರಾ ಅವರನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ನೂತನ ಏಕದಿನ ತಂಡದ ನಾಯಕನನ್ನಾಗಿ ನೇಮಕ ಮಾಡಿದೆ. ಕುಸಾಲ್ ಮೆಂಡಿಸ್​ಗೆ ಉಪನಾಯಕನ ಸ್ಥಾನವನ್ನು ನೀಡಲಾಗಿದೆ.

ಬಾಂಗ್ಲಾದೇಶದ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಸೀಮಿತ ಓವರ್​ಗಳ ಸರಣಿಗಾಗಿ ತಂಡವನ್ನು ಘೋಷಿಸಿದ್ದು, ನಾಯಕತ್ವದಲ್ಲಿ ಬದಲಾವಣೆ ಮಾಡಿದೆ. ಲಂಕಾ ಪರ 101 ಏಕದಿನ ಪಂದ್ಯ, 22 ಟೆಸ್ಟ್​ ಮತ್ತು 47 ಟಿ20 ಪಂದ್ಯಗಳನ್ನಾಡಿರುವ ಕುಸಾಲ್ ಪೆರರಾ ಅವರನ್ನು ದಿಮುತ್ ಕರುಣರತ್ನೆ ಬದಲಾಗಿ ಸೀಮಿತ ಓವರ್​ಗಳ ನಾಯಕತ್ವ ನೀಡಿದೆ.

ಇನ್ನು, ಕರುಣರತ್ನೆ ಜೊತೆಗೆ ಹಿರಿಯ ಆಲ್​ರೌಂಡರ್​ ಏಂಜೆಯೋ ಮ್ಯಾಥ್ಯೂಸ್​, ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್ ಲಹಿರು ತಿರಿಮನ್ನೆ ಮತ್ತು ವಿಕೆಟ್​ ಕೀಪರ್ ದಿನೇಶ್ ಚಾಂಡಿಮಾಲ್ ಅವರನ್ನು ಆಯ್ಕೆ ಸಮಿತಿ ಸೀಮಿತ ಓವರ್​ಗಳ ತಂಡದಿಂದ ಕೈಬಿಟ್ಟಿದೆ.

ಇವರ ಬದಲಾಗಿ ಕೆಲವು ಹೊಸ ಆಟಗಾರರಿಗೆ ಅವಕಾಶ ನೀಡಿದೆ. ವೇಗಿ ಚಮಿಕ ಕರುಣರತ್ನೆ, ಬ್ಯಾಟ್ಸ್​ಮನ್ ಶಿರನ್ ಫರ್ನಾಂಡೊ ಸೀಮಿತ ಓವರ್​ಗಳ ತಂಡದಲ್ಲಿ ಮೊದಲ ಅವಕಾಶ ಪಡೆದಿದ್ದಾರೆ. ಒಂದೆರಡು ಟಿ20 ಪಂದ್ಯಗಳನ್ನಾಡಿರುವ ಬಿನಿರು ಫರ್ನಾಂಡೊ ಕೂಡ ಅವಕಾಶ ಪಡೆದಿದ್ದಾರೆ.

ಇದನ್ನು ಓದಿ: ರೋಹಿತ್ ಶರ್ಮಾರ ಮೊದಲ ಟಿ-20 ಶತಕಕ್ಕೆ 9ನೇ ವರ್ಷದ ಸಂಭ್ರಮ

ಶ್ರೀಲಂಕಾ ತಂಡ ಮೇ 16ರಂದು ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳಸಲಿದ್ದು, ಮೇ 23, 25 ಮತ್ತು ಮೇ 28ರಂದು ಡಾಕಾದಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.

ಶ್ರೀಲಂಕಾ ತಂಡ

ಕುಸಲ್ ಪೆರೆರಾ (ನಾಯಕ), ಕುಸಾಲ್ ಮೆಂಡಿಸ್ (ಉಪನಾಯಕ), ದನುಷ್ಕಾ ಗುಣತಿಲಕ, ಧನಂಜಯ ಡಿ ಸಿಲ್ವಾ, ಪಾತುಮ್ ನಿಸ್ಸಂಕ, ದಾಸುನ್ ಶನಕಾ, ಆಶೆನ್ ಬಂಡರಾ, ವನಿಂಡು ಹಸರಂಗ, ಇಸುರು ಉದಾನ, ಅಕಿಲಾ ಧನಂಜಯ, ನಿರೋಷನ್ ಡಿಕ್ವೆಲ್ಲಾ,ದುಷ್ಮಂತ ಚಮೀರಾ, ರಮೇಶ್ ಮೆಂಡಿಸ್, ಅಸಿತಾ ಫರ್ನಂಡೊ, ಲಕ್ಷಾನ್ ಸಂದಕನ್, ಚಮಿಕಾ ಕರುಣರತ್ನೆ, ಬಿನುರಾ ಫರ್ನಾಂಡೊ, ಶಿರನ್ ಫರ್ನಾಂಡೊ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.