ETV Bharat / sports

ಐಪಿಎಲ್​ಗೆ ಸ್ಪರ್ಧೆಯೊಡ್ಡಲು ಪಿಎಸ್ಎಲ್​​​ನಲ್ಲಿ ಹೊಸ ಬದಲಾವಣೆ ತರಲು ಬಯಸಿದ್ದೇನೆ : ರಮೀಜ್ ರಾಜಾ

ನಾವು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಹೊಸ ಆಸ್ತಿಯನ್ನು ಸೃಷ್ಟಿಸಬೇಕಿದೆ. ಸದ್ಯಕ್ಕೆ ನಮ್ಮ ಹಣಕಾಸಿನ ಮೂಲವೆಂದರೆ ಪಿಎಸ್‌ಎಲ್‌ ಮತ್ತು ಐಸಿಸಿ ಫಂಡ್​ ಮಾತ್ರ. ಪಿಎಲ್‌ಎಲ್‌ ಮುಂದಿನ ಆವೃತ್ತಿಯ ಮಾದರಿಯ ಬಗ್ಗೆ ಕೆಲವು ಚರ್ಚೆಗಳನ್ನು ಮಾಡಲಾಗುತ್ತಿದೆ. ಮುಂದಿನ ವರ್ಷದಿಂದ ಆಟಗಾರರ ಹರಾಜು ಪ್ರಕ್ರಿಯೆ ಶುರುಮಾಡಬೇಕೆಂದು ಬಯಸಿದ್ದೇನೆ. ಇದಕ್ಕೆ ಮಾರುಕಟ್ಟೆ ಕೂಡ ಅನುಕೂಲಕರವಾಗಿದೆ. ಫ್ರಾಂಚೈಸಿ ಮಾಲೀಕರ ಜೊತೆ ಕುಳಿತು ಈ ಬಗ್ಗೆ ಚರ್ಚೆ ಮಾಡಲಿದ್ದೇವೆ..

PCB chairman Ramiz Raja
ರಮೀಜ್ ರಾಜಾ ಐಪಿಎಲ್
author img

By

Published : Mar 15, 2022, 5:27 PM IST

ನವದೆಹಲಿ : ಪ್ರಸ್ತುತ ಇರುವ ಡ್ರಾಫ್ಟ್​ ವ್ಯವಸ್ಥೆಯ ಬದಲ ಹರಾಜು ಪದ್ದತಿಯನ್ನು ಅನುಸರಿಸಿದರೆ ನಮ್ಮ ಆರ್ಥಿಕತೆಯು ಬೆಳೆಯುತ್ತದೆ. ವಿದೇಶಿ ಆಟಗಾರರನ್ನು ಸೆಳೆಯಬಹುದು. ಅಲ್ಲದೆ ಐಪಿಎಲ್​ಗೆ ಪ್ರಬಲ ಪೈಪೋಟಿ ನೀಡಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ ತಿಳಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್​ ಲೀಗ್​ ಕ್ರಿಕೆಟ್​ ಜಗತ್ತಿನಲ್ಲಿ ಹೊಸ ಕ್ರಾಂತಿಗೆ ನಾಂದಿಯಾಡಿದ ಟೂರ್ನಮೆಂಟ್​. ಫುಟ್​ಬಾಲ್​ನಂತೆ ಮೊದಲ ಬಾರಿಗೆ ಫ್ರಾಂಚೈಸಿ ಲೀಗ್ ಆರಂಭಿಸಿದ ಬಿಸಿಸಿಐ ಅಮೋಘ ಯಶಸ್ಸು ಸಾಧಿಸಿ ವಿಶ್ವದಾದ್ಯಂತ ಮನೆಮಾತಾಗಿದೆ.

ಅಲ್ಲದೆ ಐಪಿಎಲ್ ವಿಶ್ವದಾದ್ಯಂತ ಹಲವಾರು ಟಿ20 ಲೀಗ್​ ಆರಂಭಕ್ಕೂ ಕಾರಣವಾಯಿತು. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಬಿಗ್​ ಬ್ಯಾಶ್​, ಇಂಗ್ಲೆಂಡ್‌ನಲ್ಲಿ ದಿ ಹಂಡ್ರೆಡ್, ವೆಸ್ಟ್ ಇಂಡೀಸ್​ನಲ್ಲಿ ಕೆರಿಬಿಯನ್ ಲೀಗ್, ಪಾಕಿಸ್ತಾನದಲ್ಲಿ ಪಾಕಿಸ್ತಾನ್ ಸೂಪರ್ ಲೀಗ್​ ಯಶಸ್ವಿ ಲೀಗ್​ ಆಗಿ ನಡೆಯುತ್ತಿವೆ.

ವಿಶ್ವದಾದ್ಯಂತ ಹಲವು ಟಿ20 ಲೀಗ್​ಗಳು ಬಂದರೂ ಐಪಿಎಲ್ ಮಾತ್ರ ತನ್ನ ಹೊಳಪನ್ನು ಉಳಿಸಿಕೊಂಡಿದೆ ಮತ್ತು ಈಗಲೂ ವಿಶ್ವದ ಅತ್ಯಂತ ದೊಡ್ಡ ಟಿ20 ಲೀಗ್​ ಆಗಿದೆ. ಭಾರತೀಯ ಲೀಗ್​ನಲ್ಲಿ ವಿಶ್ವದ ಅತ್ಯಂತ ದೊಡ್ಡ ಆಟಗಾರರನ್ನು ಕಾಣಬಹುದು ಮತ್ತು ಅತ್ಯುನ್ನತ ಗುಣಮಟ್ಟದ ಕ್ರಿಕೆಟ್​ ಆಗಿ ಗುರುತಿಸಿಕೊಂಡಿದೆ.

ವಿಶ್ವದ ಅಗ್ರಗಣ್ಯ ಕ್ರಿಕೆಟ್ ಲೀಗ್​ ಆಗಿರುವ ಐಪಿಎಲ್​ನಂತೆ ಯಶಸ್ವಿಯಾಗಲು ಇತರೆ ಲೀಗ್​ಗಳು ಪ್ರಯತ್ನಿಸುತ್ತಿವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಮೀಜ್ ರಾಜಾ ಇದರ ಬಗ್ಗೆ ಮಾತನಾಡಿದ್ದು, ಐಪಿಎಲ್​ಗೆ ಸ್ಪರ್ಧೆಯೊಡ್ಡುವುದಕ್ಕೆ ಪಿಎಸ್​ಎಲ್​ನಲ್ಲಿ ಕೆಲವು ಬದಲಾವಣೆಗಳು ಅವಶ್ಯಕವಾಗಿವೆ. ಹಾಗಾಗಿ, ಮುಂಬರುವ ಆವೃತ್ತಿಗೆ ವಿಶ್ವದ ಟಾಪ್ ಕ್ರಿಕೆಟಿಗರನ್ನು ಆಕರ್ಷಿಸಲು ಡ್ರಾಫ್ಟ್​ ಪದ್ದತಿಯ ಬದಲು ಹರಾಜು ಪದ್ದತಿಯನ್ನು ಹೊರತರಬೇಕು ಎಂದಿದ್ದಾರೆ.

"ನಾವು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಹೊಸ ಆಸ್ತಿಯನ್ನು ಸೃಷ್ಟಿಸಬೇಕಿದೆ. ಸದ್ಯಕ್ಕೆ ನಮ್ಮ ಹಣಕಾಸಿನ ಮೂಲವೆಂದರೆ ಪಿಎಸ್‌ಎಲ್‌ ಮತ್ತು ಐಸಿಸಿ ಫಂಡ್​ ಮಾತ್ರ. ಪಿಎಲ್‌ಎಲ್‌ ಮುಂದಿನ ಆವೃತ್ತಿಯ ಮಾದರಿಯ ಬಗ್ಗೆ ಕೆಲವು ಚರ್ಚೆಗಳನ್ನು ಮಾಡಲಾಗುತ್ತಿದೆ.

ಮುಂದಿನ ವರ್ಷದಿಂದ ಆಟಗಾರರ ಹರಾಜು ಪ್ರಕ್ರಿಯೆ ಶುರುಮಾಡಬೇಕೆಂದು ಬಯಸಿದ್ದೇನೆ. ಇದಕ್ಕೆ ಮಾರುಕಟ್ಟೆ ಕೂಡ ಅನುಕೂಲಕರವಾಗಿದೆ. ಫ್ರಾಂಚೈಸಿ ಮಾಲೀಕರ ಜೊತೆ ಕುಳಿತು ಈ ಬಗ್ಗೆ ಚರ್ಚೆ ಮಾಡಲಿದ್ದೇವೆ" ಎಂದು ರಮೀಜ್ ರಾಜಾ ಕ್ರಿಕ್‌ಇನ್ಫೋಗೆ ಹೇಳಿದ್ದಾರೆ.

"ಇದು ಹಣದ ಆಟವಾಗಿದೆ. ಪಾಕಿಸ್ತಾನದಲ್ಲಿ ಕ್ರಿಕೆಟ್​ನ ಆರ್ಥಿಕತೆ ಬೆಳೆದರೆ, ನಮ್ಮ ಗೌರವ ಹೆಚ್ಚಾಗುತ್ತದೆ. ಆ ಆರ್ಥಿಕತೆಯ ಪ್ರಗತಿಗೆ ಪಿಎಸ್ಎಲ್ ಪ್ರಮುಖ ಅಸ್ತ್ರವಾಗಿದೆ. ನಾವು ಪಿಎಸ್ಎಲ್​ನಲ್ಲಿ ಡ್ರಾಪ್​ ಪದ್ದತಿ ಬದಲು ಹರಾಜು ಪ್ರಕ್ರಿಯೆಯನ್ನು ಜಾರಿಗೆ ತಂದು, ಪರ್ಸ್ ಮೊತ್ತವನ್ನು ಹೆಚ್ಚಿಸಿದದಾಗ ಐಪಿಎಲ್ ಅನ್ನು ಬದಿಗೊತ್ತಬಹುದು. ನಂತರ ಪಿಎಸ್‌ಎಲ್ ಬಿಟ್ಟು ಯಾರೂ ಐಪಿಎಲ್​ನತ್ತ ಹೋಗುತ್ತಾರೆ ನೋಡೋಣ" ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್ ಕೋಚಿಂಗ್ ತಂಡಕ್ಕೆ 2 ಬಾರಿಯ ಐಪಿಎಲ್ ಚಾಂಪಿಯನ್​ ಎಂಟ್ರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.