ETV Bharat / sports

ಕ್ರಿಕೆಟ್ ಅಭಿಮಾನಿಗಳ ತಲೆಗೆ ಹುಳಬಿಟ್ಟ ರಿಷಭ್ ಪಂತ್ ​ಇನ್ಸ್ಟಾಗ್ರಾಮ್ ಸ್ಟೋರಿ - Instagram Story

ಕ್ರಿಕೆಟಿಗ ರಿಷಭ್​ ಪಂತ್​​ ಪೋಸ್ಟ್‌ ಮಾಡಿರುವ ಇನ್ಸ್ಟಾಗ್ರಾಮ್ ಸ್ಟೋರಿ​ ಕುತೂಹಲ ಕೆರಳಿಸಿದೆ.

Instagram Story
ಇನ್ಸ್ಟಾಗ್ರಾಮ್ ಸ್ಟೋರಿ
author img

By

Published : Mar 8, 2023, 10:01 AM IST

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭೀಕರ ರಸ್ತೆ ಅಪಘಾತಕ್ಕೊಳಗಾದ ಭಾರತ ಪುರುಷರ ಕ್ರಿಕೆಟ್​ ತಂಡದ ಆಟಗಾರ ರಿಷಭ್ ಪಂತ್ ಕ್ರಿಕೆಟ್​ ಲೋಕದಿಂದ ಸದ್ಯ ದೂರ ಉಳಿದಿದ್ದಾರೆ. ಇದೀಗ ಚೇತರಿಕೆಯ ಹಾದಿಯಲ್ಲಿದ್ದಾರೆ. ನಿನ್ನೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ನೋಡಿದ ಪಂತ್ ಅಭಿಮಾನಿಗಳು ತಲೆ ಕೆರೆದುಕೊಳ್ಳುತ್ತಿದ್ದಾರೆ.

ಪಂತ್ ಚೆಸ್ ಆಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಚೆಸ್ ಬೋರ್ಡ್‌ ಮತ್ತು ಎದುರಿಗೊಂದು ಖಾಲಿ ಕುರ್ಚಿ ಕಾಣುತ್ತದೆ. ತಕ್ಷಣಕ್ಕೆ ಪಂತ್‌ ಯಾರೊಂದಿಗೋ ಚೆಸ್ ಆಡುತ್ತಿದ್ದಾರೆ ಎನ್ನಬಹುದು. ಆದ್ರೆ, ಅವರು ಚೆಸ್‌ ಆಡುತ್ತಿರುವುದು ಯಾರ ಜೊತೆ? ಇದನ್ನೇ ಪಂತ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. "ನನ್ನ ಜೊತೆ ಯಾರು ಚೆಸ್‌ ಆಡುತ್ತಿದ್ದಾರೆಂದು ಊಹಿಸಿ ನೋಡೋಣ?" ಎಂದು ಶೀರ್ಷಿಕೆ ಬರೆದಿದ್ದಾರೆ. ನೆಟ್ಟಿಗರು ಮತ್ತು ಅಭಿಮಾನಿಗಳು ತರಹೇವಾರಿ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ. ನಿಮಗೆ ಕುತೂಹಲವಿದ್ದರೆ ನೀವೂ ಟ್ವೀಟ್‌ ಮೂಲಕ ಪಂತ್ ಪ್ರಶ್ನೆಗೆ ಊಹಿಸಿ ಉತ್ತರ ನೀಡಬಹುದು.

ಕ್ರಿಕೆಟ್ ದಿಗ್ಗಜ ಕಪಿಲ್​ ದೇವ್​ ಟ್ವೀಟ್: ಇತ್ತೀಚೆಗೆ ಭಾರತೀಯ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಅವರು ರಿಷಭ್​ ಪಂತ್​ ಬಗ್ಗೆ ವಿಶೇಷ ಕಾಳಜಿಯ ಮಾತುಗಳನ್ನಾಡಿದ್ದರು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪಂತ್‌ ಸಂಪೂರ್ಣವಾಗಿ ಚೇತರಿಸಿಕೊಂಡ ತಕ್ಷಣ ಭೇಟಿ ಮಾಡಿ ಕಪಾಳಮೋಕ್ಷ ಮಾಡಲು ಬಯಸುತ್ತೇನೆ ಎಂದಿದ್ದರು. ಆತ ಅಪಘಾತದಲ್ಲಿ ಗಾಯಗೊಂಡು ಕ್ರಿಕೆಟ್​ ತಂಡದ ಸಮತೋಲನ ಹಾಳು ಮಾಡಿದ್ದಾರೆ. ಮಕ್ಕಳು ತಪ್ಪು ಮಾಡಿದಾಗ ತಿದ್ದುವ ಹಕ್ಕು ಪೋಷಕರಿಗೆ ಇರುವಂತೆಯೇ, ಪಂತ್‌ ಚೇತರಿಸಿಕೊಂಡ ನಂತರ ಅದೇ ರೀತಿ ಮಾಡಲು ನಾನೂ ಬಯಸುತ್ತೇನೆ ಎಂದಿದ್ದರು.

ಭೀಕರ ರಸ್ತೆ ಅಪಘಾತ: ಡಿಸೆಂಬರ್ 30, 2022 ರಂದು ರಿಷಭ್​ ಪಂತ್​ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಕಾರು ಚಾಲನೆ ಮಾಡಿಕೊಂಡು ತೆರಳುತ್ತಿದ್ದರು. ಬೆಳಗಿನ ಜಾವ 5.30 ರ ಸುಮಾರಿಗೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಕಾರಿಗೆ ಬೆಂಕಿ ಹೊತ್ತಿಕೊಂಡು ಧಗಧಗಿಸಿ ಸುಟ್ಟು ಕರಕಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಪಂತ್ ಗಾಜು ಹೊಡೆದು ಹೊರಬಿದ್ದು ಪ್ರಾಣ ಉಳಿಸಿಕೊಂಡಿದ್ದರು. ಅದೇ ಮಾರ್ಗವಾಗಿ ಹೋಗುತ್ತಿದ್ದ ಬಸ್ ಚಾಲಕ ಮತ್ತು ನಿರ್ವಾಹಕ ಪಂತ್ ಅವರನ್ನು ಆಂಬ್ಯುಲೆನ್ಸ್​ ಮೂಲಕ ಡೆಹ್ರಾಡೂನ್​ ಮ್ಯಾಕ್ಸ್​ ಆಸ್ಪತ್ರೆಗೆ ದಾಖಲಿಸಿದ್ದರು. ಈ ಮೂಲಕ ಕ್ರಿಕೆಟಿಗ ಪ್ರಾಣ ಕಾಪಾಡಿದ್ದರು.

ಪಂತ್​ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಕೋಕಿಲಾಬೆನ್​ ಧೀರೂಭಾಯಿ ಅಂಬಾನಿ ಅಸ್ಪತ್ರೆ ಏರ್​ ಲಿಫ್ಟ್​ ಮಾಡಲಾಗಿತ್ತು. ಇಲ್ಲಿ ಮೊಣಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅಪಘಾತದಲ್ಲಿ ಹಣೆ, ಬಲ ಮೊಣಕಾಳು, ಪಾದ ಮತ್ತು ಬೆನ್ನಿನ ಅಸ್ಥಿರಜ್ಜುವಿಗೆ ಪೆಟ್ಟಾಗಿತ್ತು. ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಪಂತ್ ಮತ್ತೆ ಟೀಂ ಇಂಡಿಯಾ ಸೇರಲು ಇನ್ನೆರಡು ವರ್ಷಗಳೇ ಬೇಕಾಗಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರಿಷಭ್​​ ಪಂತ್ ಸ್ಥಾನ ಯಾರೂ ತುಂಬಲಾರರು: ಇಯಾನ್ ಚಾಪೆಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.