ನವದೆಹಲಿ: ಪಾಕಿಸ್ತಾನ ಕ್ರಿಕೆಟಿಗ ಶಾಹೀನ್ ಅಫ್ರಿದಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪಾಕಿಸ್ತಾನದ ಕರಾಚಿಯಲ್ಲಿ ಮಾಜಿ ಹಿರಿಯ ಕ್ರಿಕೆಟಿಗ ಶಾಹಿದ್ ಅಫ್ರಿದಿ ಪುತ್ರಿ ಅನ್ಶಾ ಜೊತೆ ವಿವಾಹವಾಗಿದ್ದಾರೆ. ಶಾಹೀನ್ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದೆ. ಅವರ ಅಭಿಮಾನಿಗಳು ಕಮೆಂಟ್ ಮೂಲಕ ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ.
ಶಾಹೀನ್ ಕುಟುಂಬ ಮದುವೆಗಾಗಿ ಎರಡು ದಿನಗಳ ಮುಂಚಿತವಾಗಿ ಕರಾಚಿಗೆ ತಲುಪಿದ್ದರು. ಈ ಜೋಡಿಯ ಮೆಹಂದಿ ಕಾರ್ಯಕ್ರಮವು ಗುರುವಾರ ರಾತ್ರಿ ನಡೆಯಿತು. ನಿನ್ನೆ ವಿವಾಹ ನೆರವೇರಿದ್ದು, ಬಳಿಕ ಆರತಕ್ಷತೆ ಕಾರ್ಯಕ್ರಮ ಜರುಗಿತು. ಸಮಾರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್, ಸರ್ಫರಾಜ್ ಅಹ್ಮದ್, ನಜೀಮ್ ಶಾ, ಶದಾಬ್ ಖಾನ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
-
Some images of Shaheen Afridi's Nikah reception today. pic.twitter.com/x7gXVeZIBn
— Faizan Lakhani (@faizanlakhani) February 3, 2023 " class="align-text-top noRightClick twitterSection" data="
">Some images of Shaheen Afridi's Nikah reception today. pic.twitter.com/x7gXVeZIBn
— Faizan Lakhani (@faizanlakhani) February 3, 2023Some images of Shaheen Afridi's Nikah reception today. pic.twitter.com/x7gXVeZIBn
— Faizan Lakhani (@faizanlakhani) February 3, 2023
ದಾಂಪತ್ಯಕ್ಕೆ ಕಾಲಿರಿಸಿದ ಶಾಹೀನ್- ಅನ್ಶಾ ಜೋಡಿ: ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ ಶಾಹೀನ್ ಅಫ್ರಿದಿ ವೇಗದ ಬೌಲಿಂಗ್ನಿಂದಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಆದರೆ ಕೆಲವು ದಿನಗಳಿಂದ ಅವರ ಮದುವೆ ವಿಷಯವೇ ಹೆಚ್ಚು ಟ್ರೆಂಡಿಯಾಗಿದೆ. ಕೊನೆಗೂ ಶಾಹೀನ್ ಮತ್ತು ಅನ್ಶಾ ಫೆಬ್ರವರಿ 3, ಶುಕ್ರವಾರದಂದು ಕರಾಚಿಯಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದು, ಈ ಚರ್ಚೆಗಳಿಗೆ ಅಂತ್ಯ ಹಾಡಿದ್ದಾರೆ. ಇಬ್ಬರೂ ಮುಸ್ಲಿಂ ಅಚರಣೆಗಳನ್ನು ಪರಸ್ಪರ ಒಪ್ಪಿ ಅವರ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಜೋಡಿ ಕಳೆದ 2 ವರ್ಷಗಳ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇದೀಗ ಅವರ ನಿಕ್ಕಾಹ್(ಮದುವೆ) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ಕಂಡ ನೆಟ್ಟಿಗರಂತು ಫುಲ್ ಖುಷ್ ಆಗಿದ್ದಾರೆ.
-
Babar Azam at shaheen nikkah ❤️#ShaheenAfridi pic.twitter.com/C3BNQ8ZMGe
— Fahad Fayyaz (@FahadFayyaz476) February 3, 2023 " class="align-text-top noRightClick twitterSection" data="
">Babar Azam at shaheen nikkah ❤️#ShaheenAfridi pic.twitter.com/C3BNQ8ZMGe
— Fahad Fayyaz (@FahadFayyaz476) February 3, 2023Babar Azam at shaheen nikkah ❤️#ShaheenAfridi pic.twitter.com/C3BNQ8ZMGe
— Fahad Fayyaz (@FahadFayyaz476) February 3, 2023
ಇದನ್ನೂ ಓದಿ: ಅಂಡರ್ 19 ವನಿತೆಯರ ವಿಶ್ವಕಪ್: ಇಂಡಿಯಾ ಟೀಂನ ಸೌಮ್ಯಾ ತಿವಾರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ
ಕ್ರಿಕೆಟ್ ಆಟಗಾರರಿಂದ ದಂಪತಿಗೆ ಶುಭಾಶಯ: ನವಜೋಡಿಗೆ ಕ್ರಿಕೆಟ್ ತಾರೆಯರು ಟ್ವಿಟರ್, ಇನ್ಸ್ಟಾಗ್ರಾಮ್ನಲ್ಲಿ ಫೋಟೋವನ್ನು ಹಂಚಿಕೊಂಡು ಶುಭಾಶ ಕೋರಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್) ಟೂರ್ನಿಯ ಲಾಹೋರ್ ಖಲಂದರ್ ಫ್ರಾಂಚೈಸಿಯು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶಾಹೀನ್ ಅಫ್ರಿದಿ ಅವರ ವಿವಾಹದ ಫೋಟೋಗಳನ್ನು ಹಂಚಿಕೊಂಡು ವಿಶ್ ಮಾಡಿದೆ. ಅಲ್ಲದೇ ಲಾಹೋರ್ ಖಲಂದರ್ಸ್‌ನ ಇತರ ಆಟಗಾರರು ಅಭಿನಂದನೆ ಸಲ್ಲಿಸಿದ್ದಾರೆ.
ಅಥಿಯಾ ಕೈ ಹಿಡಿದ ಕ್ರಿಕೆಟಿಗ ಕೆ.ಎಲ್ ರಾಹುಲ್: ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಟೀಂ ಇಂಡಿಯಾ ಆಟಗಾರ ಕೆ.ಎಲ್ ರಾಹುಲ್ ಜನವರಿ 26ರಂದು ಹಸೆಮಣೆ ಏರಿ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಮಹಾರಾಷ್ಟ್ರದ ಖಂಡಾಲಾದಲ್ಲಿರುವ ಬಾಲಿವುಡ್ ಹಿರಿಯ ನಟ, ಅಥಿಯಾ ಶೆಟ್ಟಿ ಅವರ ತಂದೆ ಸುನಿಲ್ ಶೆಟ್ಟಿ ಅವರ ಐಶಾರಾಮಿ ಫಾರ್ಮ್ ಹೌಸ್‌ನಲ್ಲಿ ಕುಟುಂಬ ಮತ್ತು ಸ್ನೇಹಿತರು ಸೇರಿ ಕೆಲವೇ ಕೆಲವು ಮಂದಿಯ ಸಮ್ಮುಖದಲ್ಲಿ ನಾಲ್ಕು ವರ್ಷದ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು.
ಇದನ್ನೂ ಓದಿ: ರಣಜಿ: ಉತ್ತರಾಖಂಡ ಮಣಿಸಿ ಸೆಮಿಫೈನಲ್‌ಗೇರಿದ ಕರ್ನಾಟಕ; ಗೋಪಾಲ್ 'ಪಂದ್ಯಶ್ರೇಷ್ಠ' ಪ್ರದರ್ಶನ