ಸಿಡ್ನಿ(ಆಸ್ಟ್ರೇಲಿಯಾ): ಟೀಕೆಗಳನ್ನು ಮೆಟ್ಟಿನಿಂತು ಭರ್ಜರಿ ಪ್ರದರ್ಶನ ತೋರಿದ ಪಾಕಿಸ್ತಾನ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್ನಲ್ಲಿ ಮೊದಲ ತಂಡವಾಗಿ ಫೈನಲ್ ತಲುಪಿತು. ಸಿಡ್ನಿ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್ನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು 7 ವಿಕೆಟ್ಗಳಿಂದ ಬಗ್ಗುಬಡಿದು ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯಿತು.
ಗುಂಪು ಹಂತದಲ್ಲಿ ಭಾರತ, ಜಿಂಬಾಬ್ವೆ ವಿರುದ್ಧ ಸೋತಿದ್ದ ಪಾಕಿಸ್ತಾನ ಬಳಿಕ ಪುಟಿದೆದ್ದು ಫೈನಲ್ಗೆ ಅರ್ಹತೆ ಪಡೆದುಕೊಂಡಿತು. ಮೊದಲ ಸೆಮಿಫೈನಲ್ನಲ್ಲಿ ಗ್ರೂಪ್ 1 ರ ಅಗ್ರಸ್ಥಾನಿ ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿ ಪ್ರದರ್ಶನ ತೋರಿತು. ಕಿವೀಸ್ ನೀಡಿದ್ದ 153 ರನ್ಗಳ ಗುರಿಯನ್ನು 19.1 ಓವರ್ನಲ್ಲಿ ಅನಾಯಾಸವಾಗಿ ತಲುಪಿತು.
-
WHAT A WIN, PAKISTAN! 🤯
— ICC (@ICC) November 9, 2022 " class="align-text-top noRightClick twitterSection" data="
Pakistan have reached their third Men's #T20WorldCup final 👏#NZvPAK pic.twitter.com/dumaIcWVeZ
">WHAT A WIN, PAKISTAN! 🤯
— ICC (@ICC) November 9, 2022
Pakistan have reached their third Men's #T20WorldCup final 👏#NZvPAK pic.twitter.com/dumaIcWVeZWHAT A WIN, PAKISTAN! 🤯
— ICC (@ICC) November 9, 2022
Pakistan have reached their third Men's #T20WorldCup final 👏#NZvPAK pic.twitter.com/dumaIcWVeZ
ಬಾಬರ್, ರಿಜ್ವಾನ್ ಶೋ: ವಿಶ್ವಕಪ್ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಮಹತ್ವದ ಪಂದ್ಯದಲ್ಲಿ ಭರ್ಜರಿ ಬ್ಯಾಟ್ ಬೀಸಿದರು. ವಿಕೆಟ್ ಕೀಪರ್ ಮೊಹಮದ್ ರಿಜ್ವಾನ್ ಜೊತೆ ಸೇರಿ ಮೊದಲ ವಿಕೆಟ್ಗೆ 105 ರನ್ಗಳ ಭದ್ರ ಬುನಾದಿ ಹಾಕಿ ಪಂದ್ಯ ಗೆಲ್ಲುವಂತೆ ಮಾಡಿದರು.
ಬಾಬರ್ ಅಜಂ 42 ಎಸೆತಗಳಲ್ಲಿ 7 ಬೌಂಡರಿಗಳ ಸಮೇತ 53 ರನ್ಗಳ ಅರ್ಧಶತಕ ಬಾರಿಸಿದರು. ತಂಡದ ಪ್ರಮುಖ ಬ್ಯಾಟರ್ ಮೊಹಮದ್ ರಿಜ್ವಾನ್ 43 ಎಸೆತಗಳಲ್ಲಿ 5 ಬೌಂಡರಿಗಳಿಂದ 57 ರನ್ ಮಾಡಿದರು. ಇಬ್ಬರೂ ಅರ್ಧಶತಕ ಸಿಡಿಸಿ ನ್ಯೂಜಿಲ್ಯಾಂಡ್ ಫೈನಲ್ ಆಸೆಯನ್ನು ನುಚ್ಚುನೂರು ಮಾಡಿದರು. ಇಬ್ಬರೂ ಔಟಾದ ಬಳಿಕ ಸಿಡಿದ ಮೊಹಮದ್ ಹ್ಯಾರೀಸ್ 30 ರನ್ ಗಳಿಸಿದರು.
-
A sensational performance from Pakistan in the knockout game ⚡#T20WorldCup | #NZvPAK | 📝: https://t.co/LSzHXLy12f pic.twitter.com/fTq6RoaLMu
— ICC (@ICC) November 9, 2022 " class="align-text-top noRightClick twitterSection" data="
">A sensational performance from Pakistan in the knockout game ⚡#T20WorldCup | #NZvPAK | 📝: https://t.co/LSzHXLy12f pic.twitter.com/fTq6RoaLMu
— ICC (@ICC) November 9, 2022A sensational performance from Pakistan in the knockout game ⚡#T20WorldCup | #NZvPAK | 📝: https://t.co/LSzHXLy12f pic.twitter.com/fTq6RoaLMu
— ICC (@ICC) November 9, 2022
ಮೌನವಾದ ಕಿವೀಸ್ ಬೌಲಿಂಗ್: ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ 152 ರನ್ಗಳ ಸಾಧಾರಣ ಗುರಿ ನೀಡಿದಾಗಲೇ ಸೋಲಿನ ಭೀತಿ ಎದುರಾಗಿತ್ತು. ಗಾಯದ ಮೇಲೆ ಬರೆ ಎಳೆದಂತೆ ರಿಜ್ವಾನ್ ಮತ್ತು ಬಾಬರ್ ಅರ್ಧಶತಕ ಸಿಡಿಸಿದಾಗ ತಂಡ ಸೋಲೊಪ್ಪಿಕೊಂಡಿತು.
ವೇಗಿಗಳಾದ ಟ್ರೆಂಟ್ ಬೌಲ್ಟ್ 2 ವಿಕೆಟ್ ಪಡೆದರೆ, ಟಿಮ್ ಸೌಥಿ, ಲೂಕಿ ಫರ್ಗ್ಯೂಸನ್ ಪ್ರಭಾವಿಯಾಗಲೇ ಇಲ್ಲ. ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ 1 ವಿಕೆಟ್ ಪಡೆದರೆ, ಇಶ್ ಸೋಧಿ ಸ್ಪಿನ್ ಅಸ್ತ್ರ ಶಕ್ತಿ ಕಳೆದುಕೊಂಡಿತು.
3 ನೇ ಸಲ ಪಾಕ್ ಫೈನಲ್ಗೆ: 2009 ರ ಟಿ20 ವಿಶ್ವಕಪ್ ವಿಜೇತ ಪಾಕಿಸ್ತಾನ 3 ನೇ ಸಲ ಫೈನಲ್ಗೆ ಲಗ್ಗೆ ಇಟ್ಟಿದೆ. 2007 ರ ಚೊಚ್ಚಲ ವಿಶ್ವಕಪ್ನಲ್ಲಿ ಭಾರತದ ಎದುರು ಸೋಲು ಕಂಡಿತ್ತು. ಈಗ ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದ ಫೈನಲ್ಗೆ ತಲುಪಿದೆ.
ಸೆಮಿಫೈನಲ್ನಲ್ಲಿ ಪಾಕ್ ಎದುರು 4 ನೇ ಸೋಲು: ವಿಶ್ವಕಪ್ಗಳ ಇತಿಹಾಸದಲ್ಲಿ ನ್ಯೂಜಿಲ್ಯಾಂಡ್ ತಂಡಕ್ಕೆ ಪಾಕಿಸ್ತಾನ ಇನ್ನಿಲ್ಲದಂತೆ ಕಾಡಿದೆ. ಏಕದಿನ ಮತ್ತು ಟಿ20 ವಿಶ್ವಕಪ್ಗಳಲ್ಲಿ ನಾಲ್ಕು ಬಾರಿ ನಾಲ್ಕರಘಟ್ಟದಲ್ಲಿ ಕಿವೀಸ್ಗೆ ಪಾಕ್ ತಂಡ ಸೋಲುಣಿಸಿದೆ. 1992 ಮತ್ತು 1999 ರ ಏಕದಿನ, 2007 ಮತ್ತು 2022 ರ ಟಿ20 ವಿಶ್ವಕಪ್ನಲ್ಲಿ ನ್ಯೂಜಿಲ್ಯಾಂಡ್ ಸೋಲು ಕಂಡಿದೆ. ಕಿವೀಸ್ ತಂಡ ಈವರೆಗೂ ಒಂದೇ ಒಂದು ವಿಶ್ವಕಪ್ ಗೆಲುವು ಸಾಧಿಸಿಲ್ಲ.
ವಿಕೆಟ್ಲೆಸ್ ಟಿಮ್ ಸೌಥಿ: 2021 ರ ಟಿ20 ವಿಶ್ವಕಪ್ನಿಂದ ನ್ಯೂಜಿಲ್ಯಾಂಡ್ನ ಟಿಮ್ ಸೌಥಿ ವಿಕೆಟ್ ಇಲ್ಲದೇ ಅಭಿಯಾನ ಮುಗಿಸಿದರು. ಈ ವಿಶ್ವಕ್ಪ್ನಲ್ಲಿ ಗುಂಪು ಹಂತ ಸೇರಿ 6 ಪಂದ್ಯಗಳಾಡಿರುವ ಸೌಥಿ ಒಂದೇ ಒಂದು ವಿಕೆಟ್ ಗಳಿಸಿಲ್ಲ. ಕಳೆದ ಆವೃತ್ತಿಯಲ್ಲೂ ವಿಕೆಟ್ ಪಡೆಯದೇ ವಿಶ್ವಕಪ್ ಮುಗಿಸಿದ್ದರು. ಇದು ಕಿವೀಸ್ ತಂಡಕ್ಕೆ ದುಬಾರಿಯಾಯಿತು.
ನಾಳೆ ಇಂಗ್ಲೆಂಡ್- ಭಾರತ ಸೆಮಿ: ನಾಳೆ ಅಡಿಲೇಡ್ನಲ್ಲಿ ಇಂಗ್ಲೆಂಡ್ ಮತ್ತು ಭಾರತದ ಮಧ್ಯೆ 2ನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಗೆಲ್ಲುವ ತಂಡ ಫೈನಲ್ನಲ್ಲಿ ಪಾಕಿಸ್ತಾನದ ಜೊತೆಗೆ ಸೆಣಸಾಡಲಿದೆ.
ಓದಿ: ಸೆಮಿಫೈನಲ್ನಲ್ಲಿ ಪರದಾಡಿದ ಕಿವೀಸ್.. ಪಾಕ್ಗೆ 153 ರನ್ಗಳ ಸಾಧಾರಣ ಗುರಿ