ಲಾಹೋರ್ (ಪಾಕಿಸ್ತಾನ): ಐಸಿಸಿ ಏಕದಿನ ವಿಶ್ವಕಪ್ 2023ಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಏಷ್ಯಾ ಕಪ್ನಲ್ಲಿ ಗಾಯಕ್ಕೆ ತುತ್ತಾಗಿದ್ದ ಬೌಲರ್ ನಸೀಮ್ ಶಾ ವಿಶ್ವಕಪ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಶಾ ಬದಲಾಗಿ ಹಸನ್ ಅಲಿ ತಂಡಕ್ಕೆ ಸೇರಿಕೊಂಡಿದ್ದಾರೆ. ಹಸನ್ ಅಲಿ ಕೊನೆಯದಾಗಿ 2022ರಲ್ಲಿ ಏಕದಿನ ಪಂದ್ಯವನ್ನಾಡಿದ್ದರು. ಅಲಿ ಜೊತೆ ಪಾಕ್ನ ವೇಗದ ಬೌಲಿಂಗ್ ವಿಭಾಗದಲ್ಲಿ ಶಾಹೀನ್ ಶಾ ಆಫ್ರಿದಿ, ಹ್ಯಾರಿಸ್ ರೌಫ್ ಮತ್ತು ಮೊಹಮ್ಮದ್ ವಾಸಿಂ ಜೂನಿಯರ್ ಕಾಣಿಸಿಕೊಳ್ಳಲಿದ್ದಾರೆ.
-
Pakistan unveil squad for the World Cup campaign 🇵🇰💪
— Pakistan Cricket (@TheRealPCB) September 22, 2023 " class="align-text-top noRightClick twitterSection" data="
More details ➡️ https://t.co/hanhk17ACZ#WeHaveWeWill | #CWC23 pic.twitter.com/HY9cWDGnQn
">Pakistan unveil squad for the World Cup campaign 🇵🇰💪
— Pakistan Cricket (@TheRealPCB) September 22, 2023
More details ➡️ https://t.co/hanhk17ACZ#WeHaveWeWill | #CWC23 pic.twitter.com/HY9cWDGnQnPakistan unveil squad for the World Cup campaign 🇵🇰💪
— Pakistan Cricket (@TheRealPCB) September 22, 2023
More details ➡️ https://t.co/hanhk17ACZ#WeHaveWeWill | #CWC23 pic.twitter.com/HY9cWDGnQn
ಪಾಕ್ ತಂಡದ ಮುಖ್ಯ ಆಯ್ಕೆಗಾರ ಇಂಜಮಾಮ್-ಉಲ್-ಹಕ್ ಇಂದು ತಂಡವನ್ನು ಘೋಷಿಸಿದ್ದಾರೆ. ಏಷ್ಯಾ ಕಪ್ ವೇಳೆ ಭಾರತ ವಿರುದ್ಧದ ಸೂಪರ್ ಫೋರ್ ಪಂದ್ಯದಲ್ಲಿ ಭುಜದ ಗಾಯಕ್ಕೆ ಒಳಗಾದ ನಸೀಮ್ ಈ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಕಾರ, ಸಂಪೂರ್ಣ ವೈದ್ಯಕೀಯ ಪರೀಕ್ಷೆ ಮತ್ತು ಪ್ರಮುಖ ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚಿಸಿ ಮೂರರಿಂದ ನಾಲ್ಕು ತಿಂಗಳ ಚೇತರಿಕೆಯ ಅವಧಿಯೊಂದಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅವರಿಗೆ ಸಲಹೆ ನೀಡಲಾಗಿದೆ.
-
🚨 Our squad for the ICC World Cup 2023 🚨#WeHaveWeWill | #CWC23 pic.twitter.com/pJjOOncm56
— Pakistan Cricket (@TheRealPCB) September 22, 2023 " class="align-text-top noRightClick twitterSection" data="
">🚨 Our squad for the ICC World Cup 2023 🚨#WeHaveWeWill | #CWC23 pic.twitter.com/pJjOOncm56
— Pakistan Cricket (@TheRealPCB) September 22, 2023🚨 Our squad for the ICC World Cup 2023 🚨#WeHaveWeWill | #CWC23 pic.twitter.com/pJjOOncm56
— Pakistan Cricket (@TheRealPCB) September 22, 2023
ಗಾಯಗೊಂಡಿರುವ ನಸೀಮ್ ತಂಡದಿಂದ ಹೊರಗುಳಿಯಬೇಕಾಗಿದೆ. ಇತ್ತೀಚಿನ ಏಷ್ಯಾ ಕಪ್ನಲ್ಲಿ ಕೆಲವರು ಗಾಯಕ್ಕೆ ತುತ್ತಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. ಆದರೆ, ಈಗ ಉಳಿದ ಆಟಗಾರರು ಚೇತರಿಸಿಕೊಂಡಿದ್ದಾರೆ. ಹ್ಯಾರಿಸ್ ರೌಫ್ ಸಹ ಚೇತರಿಸಿಕೊಂಡಿದ್ದಾರೆ. ರೌಫ್ ಬಗ್ಗೆ ನಮ್ಮ ವೈದ್ಯಕೀಯ ಸಮಿತಿಯಿಂದ ನನಗೆ ಸಕಾರಾತ್ಮಕ ವರದಿ ಬಂದಿದೆ. ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬೌಲಿಂಗ್ ಆರಂಭಿಸಿದ್ದು, ಲಭ್ಯರಾಗಲಿದ್ದಾರೆ ಎಂದು ಮುಖ್ಯ ಆಯ್ಕೆಗಾರ ಇಂಜಮಾಮ್ ತಿಳಿಸಿದ್ದಾರೆ.
ಸೆಪ್ಟೆಂಬರ್ 29ರಂದು ನ್ಯೂಜಿಲೆಂಡ್ ವಿರುದ್ಧ ಮತ್ತು ಅಕ್ಟೋಬರ್ 3 ರಂದು ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಅಭ್ಯಾಸ ಪಂದ್ಯಗಳನ್ನು ಆಡಲಿದೆ. ವಿಶ್ವಕಪ್ನಲ್ಲಿ ಪಾಕ್ನ ಮೊದಲ ಪಂದ್ಯ ನೆದರ್ಲೆಂಡ್ಸ್ ವಿರುದ್ಧ ಅಕ್ಟೋಬರ್ 6 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಾಕಿಸ್ತಾನವು 1992ರ ಆವೃತ್ತಿಯಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿ ಟ್ರೋಫಿಯನ್ನು ಗೆದ್ದಿತ್ತು. 1979, 1983, 1987 ಮತ್ತು 2011ರ ಆವೃತ್ತಿಗಳಲ್ಲಿ ಸೆಮಿ-ಫೈನಲ್ ಮತ್ತು 1999ರ ಆವೃತ್ತಿಯಲ್ಲಿ ರನ್ನರ್-ಅಪ್ ಆಗಿತ್ತು.
ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪ ನಾಯಕ), ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಫ್ತಿಕರ್ ಅಹ್ಮದ್, ಇಮಾಮ್-ಉಲ್-ಹಕ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್ ಜೂನಿಯರ್, ಸಲ್ಮಾನ್ ಅಲಿ ಅಗಾ, ಸೌದ್ ಶಕೀಲ್, ಶಾಹೀನ್ ಶಾ ಆಫ್ರಿದಿ ಮತ್ತು ಉಸಾಮಾ ಮಿರ್.
ಮೀಸಲು ಆಟಗಾರರು: ಮೊಹಮ್ಮದ್ ಹ್ಯಾರಿಸ್, ಅಬ್ರಾರ್ ಅಹ್ಮದ್ ಮತ್ತು ಜಮಾನ್ ಖಾನ್.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದ ಭಾರತ ಬೌಲಿಂಗ್; ಅಯ್ಯರ್, ಸೂರ್ಯಗೆ ಪರೀಕ್ಷೆ