ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ಸಹ ಮಾಲೀಕ ಪ್ರೀತಿ ಜಿಂಟಾ ಅವರೊಂದಿಗೆ ಪಾಕಿಸ್ತಾನದ ಮಾಜಿ ಬೌಲರ್ ಮೊಹಮ್ಮದ್ ಅಮೀರ್ ಫೋಟೋ ತೆಗೆದುಕೊಂಡಿದ್ದು, ಅದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಬಾಲಿವುಡ್ನಿಂದ ಮೈ ಆಲ್ ಟೈಮ್ ಫೇವರಿಟ್ ಎಂದು ಅವರು ಬರೆದುಕೊಂಡಿದ್ದಾರೆ.
-
my all time favourite from bollywood @realpreityzinta pic.twitter.com/vwLG0Ga4gE
— Mohammad Amir (@iamamirofficial) September 8, 2022 " class="align-text-top noRightClick twitterSection" data="
">my all time favourite from bollywood @realpreityzinta pic.twitter.com/vwLG0Ga4gE
— Mohammad Amir (@iamamirofficial) September 8, 2022my all time favourite from bollywood @realpreityzinta pic.twitter.com/vwLG0Ga4gE
— Mohammad Amir (@iamamirofficial) September 8, 2022
ಮೊಹಮ್ಮದ್ ಅಮೀರ್ ಪ್ರಸ್ತುತ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಜಮೈಕಾ ತಲೈವಾಸ್ ಪ್ರತಿನಿಧಿಸುತ್ತಿದ್ದಾರೆ. ಪ್ರೀತಿ ಜಿಂಟಾ ಸೇಂಟ್ ಲೂಸಿಯಾ ಕಿಂಗ್ಸ್ನ ಸಹ ಮಾಲೀಕರೂ ಹೌದು. ನಿನ್ನೆ ಸೈಂಟ್ ಲೂಸಿಯಾದ ಗ್ರೋಸ್ ಐಲೆಟ್ನಲ್ಲಿ ಜಮೈಕಾ ತಲೈವಾಸ್ ಹಾಗೂ ಸೇಂಟ್ ಲೂಸಿಯಾ ಕಿಂಗ್ಸ್ ನಡುವೆ ಪಂದ್ಯ ನಡೆದಿತ್ತು. ಪ್ರೀತಿ ಜಿಂಟಾ ಪಂದ್ಯಕ್ಕೆ ಸಾಕ್ಷಿಯಾಗಿದ್ದರು. ಪಂದ್ಯ ಮುಕ್ತಾಯಗೊಂಡ ಬಳಿಕ ಮೊಹಮ್ಮದ್ ಅಮೀರ್ ಬಾಲಿವುಡ್ ನಟಿ ಪ್ರೀತಿ ಜೊತೆ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಜಮೈಕಾ ತಲೈವಾಸ್ ನೀಡಿದ್ದ 164 ರನ್ ಗುರಿ ಬೆನ್ನತ್ತಿದ್ದ ಸೇಂಟ್ ಲೂಸಿಯಾ ಕಿಂಗ್ಸ್ ಎರಡು ವಿಕೆಟ್ಗಳ ಅಂತರದಿಂದ ಗೆದ್ದಿದೆ. ತಂಡದ ಪರ ಮೊಹಮ್ಮದ್ ಅಮೀರ್ ನಾಲ್ಕು ಓವರ್ಗಳಲ್ಲಿ ಕೇವಲ 25 ರನ್ ನೀಡಿ, 3 ವಿಕೆಟ್ ಪಡೆದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ್ದ ತಲೈವಾಸ್ ತಂಡ 20 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 163 ರನ್ಗಳಿಕೆ ಮಾಡಿತ್ತು.
ಮೊಹಮ್ಮದ್ ಅಮೀರ್ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದು, ತದನಂತರ ವಿವಿಧ ವಿದೇಶಿ ಲೀಗ್ಗಳಲ್ಲಿ ಆಡುತ್ತಿದ್ದಾರೆ. ಪಾಕ್ ಪರ 36 ಟೆಸ್ಟ್, 61 ಏಕದಿನ ಹಾಗೂ 50 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಒಟ್ಟು 259 ವಿಕೆಟ್ ಕಿತ್ತಿದ್ದಾರೆ.