ಲಾಹೋರ್: ನ್ಯೂಜಿಲ್ಯಾಂಡ್ ಹಾಗೂ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೋಸ್ಕರ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟಗೊಂಡಿದೆ. 15 ಆಟಗಾರರಿಗೆ ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ಮಣೆ ಹಾಕಿದೆ. ಪ್ರಮುಖವಾಗಿ ತಂಡದಲ್ಲಿ ಆಸಿಫ್ ಅಲಿ ಹಾಗೂ ಖುಷ್ದಿಲ್ಗೆ ಅವಕಾಶ ದೊರೆತಿದೆ.
-
Asif and Khushdil return for ICC Men's T20 World Cup 2021
— PCB Media (@TheRealPCBMedia) September 6, 2021 " class="align-text-top noRightClick twitterSection" data="
More details ➡️ https://t.co/vStLml8yKw#PAKvNZ | #PAKvENG | #T20WorldCup pic.twitter.com/9samGbJgDJ
">Asif and Khushdil return for ICC Men's T20 World Cup 2021
— PCB Media (@TheRealPCBMedia) September 6, 2021
More details ➡️ https://t.co/vStLml8yKw#PAKvNZ | #PAKvENG | #T20WorldCup pic.twitter.com/9samGbJgDJAsif and Khushdil return for ICC Men's T20 World Cup 2021
— PCB Media (@TheRealPCBMedia) September 6, 2021
More details ➡️ https://t.co/vStLml8yKw#PAKvNZ | #PAKvENG | #T20WorldCup pic.twitter.com/9samGbJgDJ
ನ್ಯೂಜಿಲ್ಯಾಂಡ್ ವಿರುದ್ಧ ಸೆಪ್ಟೆಂಬರ್ 25ರಿಂದ ಐದು ಪಂದ್ಯಗಳ ಟಿ-20 ಪಂದ್ಯಗಳ ಸರಣಿಯಲ್ಲಿ ಪಾಕ್ ತಂಡ ಭಾಗಿಯಾಗಲಿದೆ. ಇದಾದ ಬಳಿಕ ಇಂಗ್ಲೆಂಡ್ ವಿರುದ್ಧ ಎರಡು ಚುಟುಕು ಪಂದ್ಯಗಳ ಸರಣಿಯಲ್ಲೂ ತಂಡ ಪಾಲ್ಗೊಳ್ಳಲಿದೆ. ಇದಾದ ಬಳಿಕ ವಿಶ್ವಕಪ್ ಸರಣಿಯಲ್ಲಿ ಅಕ್ಟೋಬರ್ 24ರಂದು ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಸೆಣಸಾಟ ನಡೆಸಲಿದೆ.
ಪಾಕ್ ತಂಡ ಇಂತಿದೆ:
ಬಾಬರ್ ಆಜಂ (ಕ್ಯಾಪ್ಟನ್), ಶಬ್ದಾದ್ ಖಾನ್, ಆಸಿಫ್ ಖಾನ್, ಆಜಂ ಖಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಮಾದ್ ವಾಸೀಂ, ಖುಷ್ದಿಲ್ ಶಾ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸೀನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸೀಂ, ಶಾಹೀನ್ ಶಾ ಆಫ್ರಿದಿ, ಶೋಹಿಬ್ ಮಾಸೂದ್
-
Misbah and Waqar step down from coaching roles
— PCB Media (@TheRealPCBMedia) September 6, 2021 " class="align-text-top noRightClick twitterSection" data="
More details ⤵️https://t.co/PHRwRNazCH
">Misbah and Waqar step down from coaching roles
— PCB Media (@TheRealPCBMedia) September 6, 2021
More details ⤵️https://t.co/PHRwRNazCHMisbah and Waqar step down from coaching roles
— PCB Media (@TheRealPCBMedia) September 6, 2021
More details ⤵️https://t.co/PHRwRNazCH
ಕೋಚ್ ಸ್ಥಾನಕ್ಕೆ ಹೊಸ ಆಯ್ಕೆ
ಪಾಕ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿದ್ದ ಮಿಸ್ಬಾ ಉಲ್ ಹಕ್ ಹಾಗೂ ಬೌಲಿಂಗ್ ಕೋಚ್ ವಕಾರ್ ಯೂನಿಸ್ ತಮ್ಮ ಹುದ್ದೆಯಿಂದ ಹಿಂದೆ ಸರಿದಿರುವುದಾಗಿ ಪಾಕ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಹೀಗಾಗಿ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗಾಗಿ ಸಕ್ಲೇನ್ ಮುಷ್ತಾಕ್ ಮತ್ತು ಅಬ್ದುಲ್ ರಜಾಕ್ ಆಯ್ಕೆಯಾಗಿದ್ದಾರೆ. ಟಿ-20 ವಿಶ್ವಕಪ್ನಲ್ಲೂ ತಂಡದ ಕೋಚ್ ಆಗಿಯೂ ಇವರೇ ಮುಂದುವರೆಯುವ ಸಾಧ್ಯತೆ ಇದೆ.
ಯುಎಇನಲ್ಲಿ ಆಯೋಜನೆಗೊಂಡಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗಾಗಿ ಈಗಾಗಲೇ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ತಂಡಗಳು ಪ್ರಕಟಗೊಂಡಿದೆ. ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ಟೀಂ ಇಂಡಿಯಾ ಸಹ ಘೋಷಣೆಯಾಗಲಿದೆ.