ಕಾಬೂಲ್: ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಪಾಕಿಸ್ತಾನದ ಮಾಜಿ ಆಟಗಾರ ಉಮರ್ ಗುಲ್ ಅವರನ್ನು ರಾಷ್ಟ್ರೀಯ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿದೆ ಎಂದು ಬುಧವಾರ ಪ್ರಕಟಿಸಿದೆ. ಜೂನ್ನಲ್ಲಿ ಅಫ್ಘಾನಿಸ್ತಾನವು ಜಿಂಬಾಬ್ವೆ ಪ್ರವಾಸವನ್ನು ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಕೋಚ್ ಆಗಿ ಕಾರ್ಯ ನೀರ್ವಹಿಸಲಿದ್ದಾರೆ.
ಏಪ್ರಿಲ್‌ನಲ್ಲಿ ಅಬುಧಾಬಿಯಲ್ಲಿ ನಡೆದ ತಂಡದ ತರಬೇತಿ ಮತ್ತು ತಯಾರಿ ಶಿಬಿರದ ಸಮಯದಲ್ಲಿ ಗುಲ್ ಅವರನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಬೌಲಿಂಗ್ ಸಲಹೆಗಾರರನ್ನಾಗಿ ನೇಮಿಸಿತ್ತು. ಪಾಕಿಸ್ತಾನ ತಂಡದ ಮಾಜಿ ಸಹ ಆಟಗಾರ ಯೂನಿಸ್ ಖಾನ್ ಶಿಬಿರಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿದ್ದರು.
-
🚨 ANNOUNCEMENT 🚨
— Afghanistan Cricket Board (@ACBofficials) May 25, 2022 " class="align-text-top noRightClick twitterSection" data="
Former Pakistan right-arm fast bowler @mdk_gul has been named as the new bowling coach of our national man’s cricket team. He will step up into the role ahead of the upcoming limited-overs away series against @ZimCricketv.
👉: https://t.co/xEAIsY4rZF pic.twitter.com/FZ1J4at3gx
">🚨 ANNOUNCEMENT 🚨
— Afghanistan Cricket Board (@ACBofficials) May 25, 2022

👉: https://t.co/xEAIsY4rZF pic.twitter.com/FZ1J4at3gx🚨 ANNOUNCEMENT 🚨
— Afghanistan Cricket Board (@ACBofficials) May 25, 2022
Former Pakistan right-arm fast bowler @mdk_gul has been named as the new bowling coach of our national man’s cricket team. He will step up into the role ahead of the upcoming limited-overs away series against @ZimCricketv.
👉: https://t.co/xEAIsY4rZF pic.twitter.com/FZ1J4at3gx
ನೀಳ ಕಾಯದ 39 ವರ್ಷದ ಉಮರ್ ಗುಲ್ ಪಾಕಿಸ್ತಾನ ತಂಡದಲ್ಲಿ ಬಿಳಿ ಚೆಂಡಿನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಅವರು ಪಾಕಿಸ್ತಾನ ತಂಡದಿಂದ ಒಟ್ಟು 237 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 130 ಏಕದಿನ ಪಂದ್ಯಗಳನ್ನಾಡಿರುವ ಅವರು 179 ವಿಕೆಟ್ಗಳನ್ನು ಪಡೆದಿದ್ದಾರೆ. 60 ಟಿ - 20 ಪಂದ್ಯದಲ್ಲಿ 85 ವಿಕೆಟ್ ಗಳಿಸಿದ್ದಾರೆ. ಪಾಕಿಸ್ತಾನದ ಪರ 2007 ಮತ್ತು 2009ರ ಐಸಿಸಿ ಟಿ 20 ವಿಶ್ವ ಕಪ್ನಲ್ಲಿ ಪ್ರಮುಖ ವಿಕೆಟ್ ಟೇಕಿಂಗ್ ಬೌಲರ್ ಆಗಿದ್ದರು.
ಧನ್ಯವಾದ ತಿಳಿಸಿದ ಉಮರ್ ಗುಲ್: ಅಫ್ಘಾನಿಸ್ತಾನ ತಂಡದೊಂದಿಗೆ ಮತ್ತೆ ಆಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ಎಂದು ಗಲ್ ತಮ್ಮ ಟ್ವೀಟ್ ಖಾತೆಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
-
Looking forward to working with this energetic and hardworking group of boys once again, this time for longer inshaAllah. https://t.co/ZAdCvJhA1N
— Umar Gul (@mdk_gul) May 25, 2022 " class="align-text-top noRightClick twitterSection" data="
">Looking forward to working with this energetic and hardworking group of boys once again, this time for longer inshaAllah. https://t.co/ZAdCvJhA1N
— Umar Gul (@mdk_gul) May 25, 2022Looking forward to working with this energetic and hardworking group of boys once again, this time for longer inshaAllah. https://t.co/ZAdCvJhA1N
— Umar Gul (@mdk_gul) May 25, 2022
ಇದನ್ನೂ ಓದಿ: LSG vs RCB: ರಜತ್ ಅಬ್ಬರದ ಶತಕ... ಲಖನೌ ಗೆಲುವಿಗೆ 208 ರನ್ಗಳ ಬೃಹತ್ ಟಾರ್ಗೆಟ್