ಅಬುಧಾಬಿ: ಸೆಮಿಫೈನಲ್ ಪ್ರವೇಶದ ಹಾದಿಯಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿರುವ ಪಾಕಿಸ್ತಾನ ತಂಡ ಸೂಪರ್ 12ನ ತನ್ನ 4ನೇ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ
ಅಫ್ಘಾನಿಸ್ತಾನ ತಂಡವೊಂದನ್ನು ಹೊರೆತುಪಡಿಸಿದರೆ ಇದೇ ಮೊದಲ ಬಾರಿಗೆ ಟಾಸ್ ಗೆದ್ದ ತಂಡವೊಂದು ಸೂಪರ್ 12ನಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದ ಬ್ಯಾಟಿಂಗ್ ಬಲವನ್ನು ಪರೀಕ್ಷಿಸಲು ನಾವು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದೇವೆ ಎಂದು ಪಾಕ್ ನಾಯಕ ಬಾಬರ್ ಅಜಮ್ ಹೇಳಿದ್ದಾರೆ.
-
Toss news from Abu Dhabi 📰
— T20 World Cup (@T20WorldCup) November 2, 2021 " class="align-text-top noRightClick twitterSection" data="
Pakistan have won the toss and elected to bat. #T20WorldCup | #PAKvNAM | https://t.co/LOepIW15w1 pic.twitter.com/6Q34YJqH8K
">Toss news from Abu Dhabi 📰
— T20 World Cup (@T20WorldCup) November 2, 2021
Pakistan have won the toss and elected to bat. #T20WorldCup | #PAKvNAM | https://t.co/LOepIW15w1 pic.twitter.com/6Q34YJqH8KToss news from Abu Dhabi 📰
— T20 World Cup (@T20WorldCup) November 2, 2021
Pakistan have won the toss and elected to bat. #T20WorldCup | #PAKvNAM | https://t.co/LOepIW15w1 pic.twitter.com/6Q34YJqH8K
ಇನ್ನು ಈ ಪಂದ್ಯದಲ್ಲಿ ಪಾಕಿಸ್ತಾನ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯುತ್ತಿದೆ. ನಮೀಬಿಯಾ ಎರಡು ಬದಲಾವಣೆ ಮಾಡಿಕೊಂಡಿದೆ.
ನಮೀಬಿಯಾ (ಪ್ಲೇಯಿಂಗ್ XI): ಸ್ಟೀಫನ್ ಬಾರ್ಡ್, ಮೈಕೆಲ್ ವ್ಯಾನ್ ಲಿಂಗೆನ್, ಕ್ರೇಗ್ ವಿಲಿಯಮ್ಸ್, ಗೆರ್ಹಾರ್ಡ್ ಎರಾಸ್ಮಸ್(ನಾಯಕ), ಜಾನ್ ನಿಕೋಲ್ ಲೋಫ್ಟಿ-ಈಟನ್, ಝೇನ್ ಗ್ರೀನ್(ವಿಕೀ), ಡೇವಿಡ್ ವೀಸ್, ಜೆಜೆ ಸ್ಮಿತ್, ಜಾನ್ ಫ್ರಿಲಿಂಕ್, ರೂಬೆನ್ ಟ್ರಂಪೆಲ್ಮನ್, ಬೆನ್ ಶಿಕೊಂಗೊ
ಪಾಕಿಸ್ತಾನ (ಪ್ಲೇಯಿಂಗ್ XI): ಮೊಹಮ್ಮದ್ ರಿಜ್ವಾನ್(ವಿಕೀ), ಬಾಬರ್ ಅಜಮ್(ನಾಯಕ), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಶದಾಬ್ ಖಾನ್, ಇಮಾದ್ ವಾಸಿಂ, ಹಸನ್ ಅಲಿ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ
ಇದನ್ನು ಓದಿ:T20 World Cup: ಬಾಂಗ್ಲಾದೇಶ ಬಗ್ಗುಬಡಿದು ಸೆಮಿಫೈನಲ್ಸ್ ಸನಿಹ ತಲುಪಿದ ದಕ್ಷಿಣ ಆಫ್ರಿಕಾ