ಶಾರ್ಜಾ: ಸ್ಕಾಟ್ಲೆಂಡ್ ವಿರುದ್ಧ 72 ರನ್ಗಳಿಂದ ಗೆಲ್ಲುವ ಮೂಲಕ ಪಾಕಿಸ್ತಾನ ತಂಡ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ. ನವೆಂಬರ್ 11ರಂದು ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಭಾನುವಾರ ನಡೆದ ತನ್ನ ಕೊನೆಯ ಸೂಪರ್ 12 ಲೀಗ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 189 ರನ್ಗಳಿಸಿತ್ತು. ಬಾಬರ್ ಅಜಮ್ 66 ರನ್ಗಳಿಸಿದರೆ, ಶೋಯಬ್ ಮಲಿಕ್ 18 ಎಸೆತಗಳಲ್ಲಿ ಅಜೇಯ 54 ಮತ್ತು ಹಫೀಜ್ 19 ಎಸೆತಗಳಲ್ಲಿ 31 ರನ್ಗಳಿಸಿದ್ದರು.
190ರ ನ್ಗಳ ಬೃಹತ್ ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 117 ರನ್ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು.
-
Onto the semis for Pakistan 💪#T20WorldCup | #PAKvSCO | https://t.co/Wbd8jqC0g6 pic.twitter.com/124R2KV60c
— T20 World Cup (@T20WorldCup) November 7, 2021 " class="align-text-top noRightClick twitterSection" data="
">Onto the semis for Pakistan 💪#T20WorldCup | #PAKvSCO | https://t.co/Wbd8jqC0g6 pic.twitter.com/124R2KV60c
— T20 World Cup (@T20WorldCup) November 7, 2021Onto the semis for Pakistan 💪#T20WorldCup | #PAKvSCO | https://t.co/Wbd8jqC0g6 pic.twitter.com/124R2KV60c
— T20 World Cup (@T20WorldCup) November 7, 2021
ರಿಚಿ ಬ್ಯಾರಿಂಗ್ಟನ್ 37 ಎಸೆತಗಳಲ್ಲಿ 54 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇವರನ್ನು ಹೊರೆತುಪಡಿಸಿದರೆ ತಂಡದ ಯಾವೊಬ್ಬ ಬ್ಯಾಟರ್ 20ರ ಗಡಿ ದಾಟಲಿಲ್ಲ.
ಪಾಕಿಸ್ತಾನ ಪರ ಶದಬ್ ಖಾನ್ 4 ಓವರ್ಗಳಲ್ಲಿ 14 ರನ್ ನೀಡಿ 2 ವಿಕೆಟ್ ಪಡೆದರೆ, ಹಸನ್ ಅಲಿ 33ಕ್ಕೆ 1, ರವೂಫ್ 27ಕ್ಕೆ1 ವಿಕೆಟ್ ಪಡೆದು ಸ್ಕಾಟ್ಲೆಂಡ್ ವಿರುದ್ಧ ಬೃಹತ್ ಜಯ ಸಾಧಿಸಲು ನೆರವಾದರು.
ಸೂಪರ್ 12ನಲ್ಲಿ ಪಾಕಿಸ್ತಾನ ಅಗ್ರಸ್ಥಾನ ಪಡೆದರೆ, ನ್ಯೂಜಿಲ್ಯಾಂಡ್ 2ನೇ ಸ್ಥಾನ ಪಡೆದುಕೊಂಡಿದೆ. ಸೆಮಿಫೈನಲ್ನಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ಮೊದಲ ಗುಂಪಿನ ಅಗ್ರಸ್ಥಾನಿ ಇಂಗ್ಲೆಂಡ್ ವಿರುದ್ಧ ಕಾದಾಡಲಿವೆ.