ETV Bharat / sports

ಚೊಚ್ಚಲ ದಿ ಹಂಡ್ರೆಡ್​ ಲೀಗ್​ ಗೆದ್ದ ಓವಲ್ ಇನ್​ವಿನ್ಸಿಬಲ್ಸ್ ವುಮೆನ್ಸ್​​ - ಸದರ್ನ್​ ಬ್ರೇವ್​ ಮಣಿಸಿ ಚಾಂಪಿಯನ್ ಆದ ಓವಲ್

122 ರನ್​ಗಳ ಗುರಿ ಬೆನ್ನಟ್ಟಿದ ಸದರ್ನ್​ ಬ್ರೇವ್ ತಂಡ ಓವಲ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 73 ರನ್​ಗಳಿಗೆ ಆಲೌಟ್​ ಆಗುವ ಮೂಲಕ 48 ರನ್​ಗಳ ಸೋಲು ಕಂಡು ಚೊಚ್ಚಲ ಆವೃತ್ತಿಯಲ್ಲಿ ರನ್ನರ್ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ದಿ ಹಂಡ್ರೆಡ್​ ಲೀಗ್​
ದಿ ಹಂಡ್ರೆಡ್​ ಲೀಗ್​
author img

By

Published : Aug 21, 2021, 10:55 PM IST

ಲಾರ್ಡ್ಸ್​: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆಯೋಜಿಸಿದ್ದ ಕ್ರಿಕೆಟ್​ನ ಹೊಸ ಮಾದರಿ ದಿ ಹಂಡ್ರೆಡ್​ ಲೀಗ್​​ನ ಮಹಿಳಾ ವಿಭಾಗದಲ್ಲಿ ಓವಲ್ ಇನ್​ವಿನ್ಸಿಬಲ್ಸ್ ವುಮೆನ್ ತಂಡ​ ಚಾಂಪಿಯನ್​ ಆಗಿ ಹೊರಹೊಮ್ಮಿದೆ

ದಕ್ಷಿಣ ಆಫ್ರಿಕಾದ ನಾಯಕಿ ಡ್ಯಾನ್​ ವಾನ್ ನೀಕೆರ್ಕ್​ ನಾಯಕತ್ವದ ಓವಲ್ ತಂಡ ಫೈನಲ್​ನಲ್ಲಿ ಸದರ್ನ್​ ಬ್ರೇವ್​ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ 100 ಎಸೆತಗಳಲ್ಲಿ 6 ವಿಕೆಟ್​ ಕಳೆದುಕೊಂಡು 121 ರನ್​ಗಳಿಸಿತ್ತು. ನೀಕೆರ್ಕ್​ 26 , ಫ್ರಾನ್ ವಿಲ್ಸನ್​ 25, ಮರಿಜಾನ್​ ಕಾಪ್​ 26 ರನ್​ಗಳಿಸಿದ್ದರು.

ಸದರ್ನ್​ ಪರ ಶ್ರೂಬ್ಸೋಲ್ 3, ಲಾರೆನ್ ಬೆಲ್ 2 , ವೆಲ್ಲಿಂಗ್ಟನ್ ಮತ್ತು ಫಿ ಮೋರಿಸ್​ ತಲಾ​ ಒಂದು ವಿಕೆಟ್ ಪಡೆದಿದ್ದರು.

122 ರನ್​ಗಳ ಗುರಿ ಬೆನ್ನಟ್ಟಿದ ಸದರ್ನ್​ ಬ್ರೇವ್ ತಂಡ ಓವಲ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 73 ರನ್​ಗಳಿಗೆ ಆಲೌಟ್​ ಆಗುವ ಮೂಲಕ 48 ರನ್​ಗಳ ಸೋಲು ಕಂಡು ಚೊಚ್ಚಲ ಆವೃತ್ತಿಯಲ್ಲಿ ರನ್ನರ್ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಫಿ ಮೋರಿಸ್​ 23 ರನ್​ಗಳಿಸಿದ್ದೇ ತಂಡದ ಗರಿಷ್ಠ ಮೊತ್ತವಾಯಿತು. ಇವರನ್ನು ಹೊರೆತುಪಡಿಸಿದರೆ ಸ್ಟೆಫನೀ ಟೇಲರ್(18) ಮತ್ತು ಟಾರಾ ನಾರಿಸ್​(11) ಮಾತ್ರ ಎರಡಂಕಿ ಮೊತ್ತ ಗಳಿಸಿದರು.

ಓವಲ್​ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಮರಿಜಾನ್ ಕಾಪ್​ ಕೇವಲ 9 ರನ್​ಗಳಿಸಿ 4 ವಿಕೆಟ್​ ಪಡೆದರು. ಅಲಿಸ್​ ಕ್ಯಾಪ್ಸೆ 2, ನೀಕೆರ್ಕ್​ ಮತ್ತು ಇಸ್ಮೈಲ್ ತಲಾ ಒಂದು ವಿಕೆಟ್ ಪಡೆದರು.

ಭಾರತದ ಸ್ಟಾರ್ ಓಪನರ್​ ಸ್ಮೃತಿ ಮಂದಾನ ರಾಷ್ಟ್ರೀಯ ತಂಡಕ್ಕೆ ಮರಳಿದ್ದರಿಂದ ಸದರ್ನ್​ ತಂಡಕ್ಕೆ ಫೈನಲ್​ನಲ್ಲಿ ಬಹುದೊಡ್ಡ ಹಿನ್ನಡೆಯಾಯಿತು. ಈ ತಂಡ ಲೀಗ್​ನಲ್ಲಿ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ ಪಡೆದಿತ್ತು.

ಇದನ್ನು ಓದಿ:ಆರ್​ಸಿಬಿಗೆ ಆನೆಬಲ.. ಹಸರಂಗ ಸೇರಿದಂತೆ ಬೆಂಗಳೂರು ತಂಡಕ್ಕೆ ಮೂವರ ಸೇರ್ಪಡೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.