ನವದೆಹಲಿ : ಪ್ರೀಮಿಯಂ ಸ್ಮಾರ್ಟ್‌ಫೋನ್ ಬ್ರಾಂಡ್ ಒನ್‌ಪ್ಲಸ್ ತನ್ನ ಧರಿಸಬಹುದಾದ (wearables ) ವಿಭಾಗದ ಬ್ರಾಂಡ್ ಅಂಬಾಸಿಡರ್ ಆಗಿ ಕ್ರಿಕೆಟಿಗ ಜಸ್ಪ್ರಿತ್ ಬುಮ್ರಾ ಅವರನ್ನು ಆಯ್ಕೆ ಮಾಡಿದೆ ಎಂದು ಶುಕ್ರವಾರ ತಿಳಿಸಿದೆ. ಒನ್‌ಪ್ಲಸ್ ಧರಿಸಬಹುದಾದ ವಿಭಾಗದಲ್ಲಿ ಒನ್‌ಪ್ಲಸ್ ವಾಚ್ ಮತ್ತು ಒನ್‌ಪ್ಲಸ್ ಬ್ಯಾಂಡ್ ಸೇರಿವೆ.
ಅಭಿಮಾನಿಗಳಿಗಾಗಿ ಬುಮ್ರಾ ಇನ್ಮುಂದೆ ಒನ್‌ಪ್ಲಸ್ ವಾಚ್ ಮತ್ತು ಒನ್‌ಪ್ಲಸ್ ಬ್ಯಾಂಡ್ಗಾಗಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರೀಮಿಯಂ, ಹೆಚ್ಚಿನ ಕಾರ್ಯಕ್ಷಮತೆ ಮತ್ತು ಆರಾಮದಾಯಕ, ಒನ್‌ಪ್ಲಸ್‌ನ ಧರಿಸಬಹುದಾದ ಸಾಧನಗಳು ಜೀವನಶೈಲಿಯೊಂದಿಗೆ ಸಂಯೋಜನೆಗೊಳ್ಳುವುದನ್ನು ಖಾತ್ರಿಗೊಳಿಸುತ್ತದೆ ಮತ್ತು ಬಳಕೆದಾರರು ತಮ್ಮ ದೈನಂದಿನ ಅಗತ್ಯತೆಗಳು ಮತ್ತು ಫಿಟ್‌ನೆಸ್ ಗುರಿಗಳನ್ನು ಪೂರೈಸಲು ಒಂದು ಹೆಜ್ಜೆ ಹತ್ತಿರ ತರುತ್ತದೆ ಎಂದು ಅವರು ಹೇಳಿದರು.
"ಬ್ರಾಂಡ್ ಆಗಿ, ಒನ್‌ಪ್ಲಸ್ ಯಾವಾಗಲೂ ತನ್ನನ್ನು ತಾನು ಸವಾಲಿಗೆ ಒಡ್ಡಿಕೊಳ್ಳುವಲ್ಲಿ ನಂಬಿಕೆ ಇಟ್ಟಿದೆ. ನಿರಂತರವಾಗಿ ಮಾನದಂಡಗಳನ್ನು ಮರು ವ್ಯಾಖ್ಯಾನಿಸುತ್ತದೆ ಮತ್ತು 'ನೆವರ್ ಸೆಟಲ್' ಎಂಬ ನಮ್ಮ ಭರವಸೆಯನ್ನು ನೀಡುತ್ತದೆ ಎಂದು ಒನ್‌ಪ್ಲಸ್ ಇಂಡಿಯಾ ವಕ್ತಾರರು ಹೇಳಿದ್ದಾರೆ. ಒನ್‌ಪ್ಲಸ್ ಇಂಡಿಯಾ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಒನ್‌ಪ್ಲಸ್ ಜಸ್ಪ್ರಿತ್ ಬುಮ್ರಾ ಡಿಜಿಟಲ್ ಫಿಲ್ಮ್‌ನಿಂದ ಕಿಕ್‌ಸ್ಟಾರ್ಟ್ ಮಾಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.