ಭಾರತ ಕ್ರಿಕೆಟ್ ತಂಡ ಕೊನೆಯ ಬಾರಿಗೆ ಐಸಿಸಿ ಟ್ರೋಫಿ ಗೆದ್ದು ಇಂದಿಗೆ ಸರಿಯಾಗಿ 10 ವರ್ಷಗಳಾಗಿವೆ. 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿ ಫೈನಲ್ ಗೆದ್ದುಕೊಂಡಿತ್ತು. ಈ ಫೈನಲ್ ಪಂದ್ಯವು ಇತ್ತೀಚೆಗೆ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯ ನಡೆದ ಎಡ್ಜ್‌ಬಾಸ್ಟನ್‌ನಲ್ಲೇ ನಡೆದಿತ್ತು. ಇಂಗ್ಲೆಂಡ್ ತಂಡವನ್ನು ಅವರ ನೆಲದಲ್ಲಿ ಸೋಲಿಸಿ ಭಾರತ ವಿಜಯೋತ್ಸವ ಆಚರಿಸಿತ್ತು.
-
#OnThisDay in 2013, India won the ICC Champions Trophy! Watch the top moments of their triumph in the final against England! #CT13 pic.twitter.com/cTxIU5oqv8
— ICC (@ICC) June 23, 2017 " class="align-text-top noRightClick twitterSection" data="
">#OnThisDay in 2013, India won the ICC Champions Trophy! Watch the top moments of their triumph in the final against England! #CT13 pic.twitter.com/cTxIU5oqv8
— ICC (@ICC) June 23, 2017#OnThisDay in 2013, India won the ICC Champions Trophy! Watch the top moments of their triumph in the final against England! #CT13 pic.twitter.com/cTxIU5oqv8
— ICC (@ICC) June 23, 2017
3 ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ ಧೋನಿ: ಈ ಗೆಲುವಿನಿಂದ ಧೋನಿ ಹೊಸ ದಾಖಲೆಯನ್ನೂ ಬರೆದಿದ್ದರು. ಐಸಿಸಿ ನಡೆಸುವ ಎಲ್ಲ ಪ್ರತಿಷ್ಠಿತ ಕಪ್ಗಳನ್ನು ಜಯಿಸಿದ ಮೊದಲ ನಾಯಕರಾಗಿ ಹೊರ ಹೊಮ್ಮಿದ್ದರು. 2007ರಲ್ಲಿ ಧೋನಿ ಅವರ ಮೊದಲ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಅನ್ನು ಗೆದ್ದುಕೊಂಡಿತ್ತು. 2011ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಅನ್ನು ಎಂಎಸ್ಡಿ ಮುಂದಾಳತ್ವದಲ್ಲೇ ಭಾರತ ಗೆದ್ದುಕೊಂಡಿತ್ತು. 2013ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು.
5 ರನ್ಗಳಿಂದ ಅಮೋಘ ಗೆಲುವು: ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯ ಅತ್ಯಂತ ರೋಚಕವಾಗಿತ್ತು. ಮಳೆಯಿಂದಾಗಿ 50 ಓವರ್ಗಳ ಏಕದಿನ ಮಾದರಿಯ ಪಂದ್ಯ ಟಿ20 ರೂಪ ಪಡೆದುಕೊಂಡಿತ್ತು. 30 ಓವರ್ಗಳನ್ನು ಕಡಿತಗೊಳಿಸಿ 20 ಓವರ್ಗಳ ಪಂದ್ಯ ಆಡಿಸಲಾಗಿತ್ತು.
-
#OnThisDay in 2️⃣0️⃣1️⃣3️⃣
— BCCI (@BCCI) June 23, 2023 " class="align-text-top noRightClick twitterSection" data="
The @msdhoni-led #TeamIndia, beat England to lift the ICC Champions Trophy. 🏆
MS Dhoni became the first Captain (in Men's cricket) to win all three ICC trophies in limited-overs cricket 👏🏻👏🏻 pic.twitter.com/x4le09coFM
">#OnThisDay in 2️⃣0️⃣1️⃣3️⃣
— BCCI (@BCCI) June 23, 2023
The @msdhoni-led #TeamIndia, beat England to lift the ICC Champions Trophy. 🏆
MS Dhoni became the first Captain (in Men's cricket) to win all three ICC trophies in limited-overs cricket 👏🏻👏🏻 pic.twitter.com/x4le09coFM#OnThisDay in 2️⃣0️⃣1️⃣3️⃣
— BCCI (@BCCI) June 23, 2023
The @msdhoni-led #TeamIndia, beat England to lift the ICC Champions Trophy. 🏆
MS Dhoni became the first Captain (in Men's cricket) to win all three ICC trophies in limited-overs cricket 👏🏻👏🏻 pic.twitter.com/x4le09coFM
ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಎಸೆತದವರೆಗೂ ಸೆಣಸಾಡಿ ಭಾರತ ಜಯಭೇರಿ ಬಾರಿಸಿತ್ತು. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 129/7 ಮಾತ್ರ ಗಳಿಸಿತ್ತು. ವಿರಾಟ್ ಕೊಹ್ಲಿ (43), ರವೀಂದ್ರ ಜಡೇಜಾ (33) ಮತ್ತು ಶಿಖರ್ ಧವನ್ (31) ಮಿಂಚಿದ್ದರು. ಪಂದ್ಯದಲ್ಲಿ ನಾಯಕ ಎಂ.ಎಸ್. ಧೋನಿ ಡಕೌಟ್ ಆಗಿ ಪೆವಿಲಿಯನ್ ಸೇರಿದ್ದರು. ವಿರಾಟ್- ಜಡ್ಡು ಆರನೇ ವಿಕೆಟ್‌ಗೆ 47 ರನ್ ಸೇರಿಸಿದ್ದು ತಂಡಕ್ಕೆ ಸಹಕಾರಿಯಾಗಿತ್ತು.
ಭಾರತ ನೀಡಿದ್ದ 130 ರನ್‌ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ಗೆ ಉಮೇಶ್ ಮೊದಲ ಶಾಕ್ ನೀಡಿದ್ದರು. ಎರಡನೇ ಓವರ್ನಲ್ಲೇ ಕುಕ್ ಅವರ ವಿಕೆಟ್ ಕಬಳಿಸಿದ್ದರು. ನಂತರ ಬೆಲ್, ಟ್ರಾಟ್ ಮತ್ತು ರೂಟ್ ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಶ್ವಿನ್, ಜಡೇಜಾ ಹಾಗೂ ಇಶಾಂತ್ ಶರ್ಮಾ ವಿಕೆಟ್ ಕಿತ್ತರು. ಮಾರ್ಗನ್ ಮತ್ತು ರವಿ ಬೊಪಾರಾ ಭಾರತಕ್ಕೆ ಮಧ್ಯಮ ಕ್ರಮಾಂಕದಲ್ಲಿ ಕಾಡಿದರು. ಆದರೆ ಈ ಎರಡೂ ವಿಕೆಟ್ ಗೆಲುವಿನ ಸನಿಹದಲ್ಲಿ ಇಂಗ್ಲೆಂಡ್ ಕಳೆದುಕೊಂಡಿತು. ಇಶಾಂತ್ ಶರ್ಮಾ ಈ ಇಬ್ಬರು ಸೆಟಲ್ಡ್ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಕಳಿಸುವಲ್ಲಿ ಯಶಸ್ವಿಯಾಗಿದ್ದರು.
ರವಿ ವಿಕೆಟ್ ಬೀಳುವ ವೇಳೆಗೆ ಆಂಗ್ಲರ ಸ್ಕೋರ್ 110 ಆಗಿತ್ತು. ಇನ್ನು ಎರಡು ಓವರ್ನಲ್ಲಿ ಇಂಗ್ಲೆಂಡ್ಗೆ ಕೇವಲ 20 ರನ್ ಅವಶ್ಯಕತೆ ಇತ್ತು. ಆದರೆ ಬಟ್ಲರ್ ಅವರನ್ನು ಜಡೇಜ ಶೂನ್ಯಕ್ಕೆ ಔಟ್ ಮಾಡಿ ಪಂದ್ಯವನ್ನು ಭಾರತದತ್ತ ತಿರುಗಿಸಿದರು. ಆದರೆ ಬ್ರಾಡ್ ಮುಳುವಾಗುವ ರೀತಿ ಕಂಡಿದ್ದರು. ಆದರೆ ಧೋನಿ ಟಿ20ಯಲ್ಲೂ ಕೊನೆಯ ಓವರ್ ಅನ್ನು ಸ್ಪಿನ್ನರ್ ಕೈಯಿಂದ ಮಾಡಿಸಿ ಇಂಗ್ಲೆಂಡ್ ಬ್ಯಾಟರ್ ಲೆಕ್ಕಾಚಾರವನ್ನು ಬುಡಮೇಲು ಮಾಡಿ ಐದು ರನ್ನಿಂದ ಪಂದ್ಯ ಗೆಲ್ಲಿಸಿದರು. ಧೋನಿಯ ಚಾಣಾಕ್ಷ ನೀತಿ ಗೆಲುವಿಗೆ ಕಾರಣವಾಗಿತ್ತು.
-
Shikhar Dhawan in CT 2013:
— Johns. (@CricCrazyJohns) June 23, 2023 " class="align-text-top noRightClick twitterSection" data="
- Golden bat.
- Player of the tournament.
- Most runs.
- POTM vs South Africa.
Ravindra Jadeja in CT 2013:
- Golden ball.
- POTM in final.
- Most wickets.
- POTM vs West Indies.
Two heroes in the last ICC Trophy win of Team India. pic.twitter.com/aNkmL42eFT
">Shikhar Dhawan in CT 2013:
— Johns. (@CricCrazyJohns) June 23, 2023
- Golden bat.
- Player of the tournament.
- Most runs.
- POTM vs South Africa.
Ravindra Jadeja in CT 2013:
- Golden ball.
- POTM in final.
- Most wickets.
- POTM vs West Indies.
Two heroes in the last ICC Trophy win of Team India. pic.twitter.com/aNkmL42eFTShikhar Dhawan in CT 2013:
— Johns. (@CricCrazyJohns) June 23, 2023
- Golden bat.
- Player of the tournament.
- Most runs.
- POTM vs South Africa.
Ravindra Jadeja in CT 2013:
- Golden ball.
- POTM in final.
- Most wickets.
- POTM vs West Indies.
Two heroes in the last ICC Trophy win of Team India. pic.twitter.com/aNkmL42eFT
ಭಾರತಕ್ಕೆ ಇದೇ ಕೊನೆಯ ಐಸಿಸಿ ಕಿರೀಟವಾಯಿತು. ಇದಾದ ನಂತರ ಎಂಟು ಐಸಿಸಿ ಟ್ರೋಫಿಗಳಲ್ಲಿ ಭಾರತ ಪ್ರಮುಖ ಘಟ್ಟಗಳಲ್ಲಿ ಎಡವಿದೆ. ಸೆಮಿಫೈನಲ್ ಮತ್ತು ಫೈನಲ್ನಲ್ಲೇ ಸೋಲು ಕಂಡಿದೆ. ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ನಲ್ಲಿ ಈ ಟ್ರೋಫಿ ಬರ ನೀಗಲಿದೆಯೇ? ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಮಹಿಳಾ ಜೂನಿಯರ್ ಹಾಕಿ ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಮೊದಲ ಎದುರಾಳಿ ಈ ತಂಡ