ಮುಂಬೈ : ಭಾರತ ಕಂಡಂತಹ ಶ್ರೇಷ್ಠ ನಾಯಕರ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಕಂಡು ಬರುವ ಮಹೇಂದ್ರ ಸಿಂಗ್ ಧೋನಿ ಇಂದಿಗೆ 16 ವರ್ಷಗಳ ಹಿಂದೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ನಂಬರ್ 1 ಪಟ್ಟ ಅಲಂಕರಿಸಿದ್ದರು. 2004ರಲ್ಲಿ ಪದಾರ್ಪಣೆ ಮಾಡಿದ್ದ ಧೋನಿ ವೇಗವಾಗಿ ವಿಶ್ವದ ನಂಬರ್ 1 ಬ್ಯಾಟರ್ ಎನಿಸಿದ್ದರು.
2004ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ನೀಳ ಕೂದಲ ಧೋನಿ ಕೇವಲ 38 ಇನ್ನಿಂಗ್ಸ್ಗಳಲ್ಲಿ ಏಕದಿನ ಕ್ರಿಕೆಟ್ನ ನಂಬರ್ 1 ಬ್ಯಾಟರ್ ಸ್ಥಾನವನ್ನು ಅಲಂಕರಿಸಿದ್ದರು. 2006ರ ಏಪ್ರಿಲ್ 20ರ ವೇಳೆ ಧೋನಿ ಭಾರತದ ಪರ 42 ಏಕದಿನ ಪಂದ್ಯವನ್ನಾಡಿ, 38 ಇನ್ನಿಂಗ್ಸ್ಗಳಿಂದ 52.76ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿ 1372 ರನ್ಗಳಿಸಿದ್ದರು. 103ರ ಸ್ಟ್ರೈಕ್ರೇಟ್ನಲ್ಲಿ ಅಬ್ಬರಿಸಿದ್ದ ಧೋನಿ 2 ಶತಕ ಮತ್ತು 8 ಅರ್ಧಶತಕ ಸಿಡಿಸಿ ಏಕದಿನ ಇತಿಹಾಸದಲ್ಲಿ ವೇಗವಾಗಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು.
ಧೋನಿ ಮೊದಲ ಬಾರಿ ಅಗ್ರಸ್ಥಾನಕ್ಕೇರಿ ಇಂದಿಗೆ 16 ವರ್ಷಗಳಾಗಿವೆ. ಇಂದಿಗೂ ವೇಗವಾಗಿ ಅಗ್ರಸ್ಥಾನ ಪಡೆದ ವಿಶ್ವದಾಖಲೆ ಮಿಸ್ಟರ್ ಕೂಲ್ ಹೆಸರಿನಲ್ಲಿದೆ. ಆದರೆ, ಧೋನಿ ಕೇವಲ 3 ದಿನಗಳ ಕಾಲ ಆ ಸ್ಥಾನವನ್ನು ಅಲಂಕರಿಸಿದ್ದರು. ಮತ್ತೆ 2008ರಲ್ಲಿ ಅಗ್ರಸ್ಥಾನಕ್ಕೇರಿದ ಅವರು ಬರೋಬ್ಬರಿ 2 ವರ್ಷಗಳ ಕಾಲ ಏಕದಿನ ಕ್ರಿಕೆಟ್ನ ಸಾಮ್ರಾಟ್ ಆಗಿ ಮೆರೆದಾಡಿದ್ದರು.
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಅಗ್ರಸ್ಥಾನಕ್ಕೇರುವ ಮುನ್ನ ನಂಬರ್ 1 ಶ್ರೇಯಾಂಕದಲ್ಲಿ ಅತಿ ಹೆಚ್ಚು ದಿನ ಕಳೆದ ಭಾರತೀಯ ಬ್ಯಾಟರ್ ಎನಿಸಿದ್ದರು. ವಿರಾಟ್ 2017ರಿಂದ 2021ರವರೆಗೆ ಬರೋಬ್ಬರಿ 1420 ದಿನಗಳ ಕಾಲ ಅಗ್ರಸ್ಥಾನದಲ್ಲಿ ಕಳೆದು ಧೋನಿಯನ್ನು ಹಿಂದಿಕ್ಕಿದ್ದರು.
ಇದನ್ನೂ ಓದಿ: ಕೊಹ್ಲಿ ಇನ್ನೂ ಐದಾರು ವರ್ಷ ಕ್ರಿಕೆಟ್ ಆಡಬೇಕಾದ್ರೆ, ಸದ್ಯಕ್ಕೆ ಒಂದು ಬ್ರೇಕ್ ಅಗತ್ಯ: ರವಿಶಾಸ್ತ್ರಿ