ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಮೊದಲ ಟಿ-20 ಹಾಗೂ ಐಪಿಎಲ್ನ ಏಕೈಕ ಶತಕ ಸಿಡಿಸಿ ಇಂದಿಗೆ 9 ವರ್ಷ ಕಳೆದಿದೆ.
ಐಪಿಎಲ್ನಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದಿರುವ ನಾಯಕನಾಗಿರುವ ರೋಹಿತ್ ಶರ್ಮಾ 2012, ಮೇ 12ರಂದು ತಮ್ಮ ಮೊದಲ ಟಿ-20 ಮತ್ತು ಐಪಿಎಲ್ನ ಏಕೈಕ ಶತಕ ಸಿಡಿಸಿದ್ದರು. ಅವರು 5ನೇ ಆವೃತ್ತಿಯ 58ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಶತಕ ಸಿಡಿಸಿದ್ದರು.
ಅಂದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತ್ತು ಹರ್ಶಲ್ ಗಿಬ್ಸ್ ಅಜೇಯ 66 ರನ್ ಗಳಿಸಿದರೆ, ರೋಹಿತ್ ಅಜೇಯ ಶತಕ ಸಿಡಿಸಿದ್ದರು. ಅವರು ಒಟ್ಟಾರೆ 60 ಎಸೆತಗಳಲ್ಲಿ 12 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ಗಳ ನೆರವಿನಿಂದ 109 ರನ್ ಗಳಿಸಿದ್ದರು. ಈ ಪಂದ್ಯವನ್ನು ಮುಂಬೈ ಇಂಡಿಯನ್ಸ್ 27 ರನ್ಗಳಿಂದ ಗೆಲುವು ಸಾಧಿಸಿತ್ತು.
-
109* (60) 💙#OnThisDay in 2012, Hitman scored his first-ever century in #MI colours 🤩
— Mumbai Indians (@mipaltan) May 12, 2021 " class="align-text-top noRightClick twitterSection" data="
Paltan, do you remember which stadium? 🏟️#OneFamily #MumbaiIndians #RohitSharma @ImRo45 pic.twitter.com/EqvBUJ2QFy
">109* (60) 💙#OnThisDay in 2012, Hitman scored his first-ever century in #MI colours 🤩
— Mumbai Indians (@mipaltan) May 12, 2021
Paltan, do you remember which stadium? 🏟️#OneFamily #MumbaiIndians #RohitSharma @ImRo45 pic.twitter.com/EqvBUJ2QFy109* (60) 💙#OnThisDay in 2012, Hitman scored his first-ever century in #MI colours 🤩
— Mumbai Indians (@mipaltan) May 12, 2021
Paltan, do you remember which stadium? 🏟️#OneFamily #MumbaiIndians #RohitSharma @ImRo45 pic.twitter.com/EqvBUJ2QFy
ರೋಹಿತ್ ಶರ್ಮಾ ಆನಂತರ ಐಪಿಎಲ್ನಲ್ಲಿ ಶತಕ ಸಿಡಿಸಿಲ್ಲವಾದರೂ ಭಾರತ ತಂಡದ ಪರ 4 ಶತಕ ಸಿಡಿಸಿದ್ದಾರೆ. ಹಿಟ್ಮ್ಯಾನ್ ಅಂತಾರಾಷ್ಟ್ರೀಯ ಟಿ-20ಯಲ್ಲಿ ಹೆಚ್ಚು ಶತಕ ಸಿಡಿಸಿರುವ ದಾಖಲೆಯನ್ನು ಹೊಂದಿದ್ದಾರೆ.
ರೋಹಿತ್ 2015ರಲ್ಲಿ ಧರ್ಮಾಶಾಲಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 106, 2017ರಲ್ಲಿ ಶ್ರೀಲಂಕಾ ವಿರುದ್ಧ 118, 2018ರಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 100 ಮತ್ತು ವೆಸ್ಟ್ ಇಂಡೀಸ್ ವಿರುದ್ಧ 2018ರಲ್ಲಿ ಅಜೇಯ 111 ರನ್ ಗಳಿಸಿದ್ದಾರೆ.
ಇದನ್ನು ಓದಿ: 34ನೇ ವಸಂತಕ್ಕೆ ಕಾಲಿಟ್ಟ ಕೀರನ್ ಪೊಲಾರ್ಡ್.. ವಿಶೇಷ ವಿಡಿಯೋ ಮೂಲಕ ಮುಂಬೈ ತಂಡದಿಂದ ಶುಭಾಶಯ