ETV Bharat / sports

ಟಿ20 ವಿಶ್ವಕಪ್​: ಕೊನೆಗೂ ಮಂಡಿಯೂರಿದ ಡಿಕಾಕ್​! - ಬ್ಲ್ಯಾಕ್​ ಲೈವ್ಸ್​ ಮ್ಯಾಟರ್​

ನಾನು ಮಂಡಿಯೂರುವುದರಿಂದ ಕಪ್ಪು ವರ್ಣೀಯರಿಗೆ ಒಳ್ಳೆಯದಾಗುತ್ತದೆ ಎಂದರೆ ನಾನು ಖುಷಿಯಿಂದ ಮಾಡುತ್ತಿದ್ದೆ. ಆದರೆ, ನಾನು ಕಪ್ಪು ಜನಾಂಗದವರೊಡನೆ ಬೆಳೆದಿದ್ದೇನೆ, ಅವರ ಜೊತೆಗೆ ಕಲಿತಿದ್ದೇನೆ, ಹೀಗಿರುವಾಗ ಕೇವಲ ಸನ್ನೆಯ ಮೂಲಕ ಹೋರಾಟ ಮಾಡುವುದಕ್ಕೆ ನೀಡಿದ ಆದೇಶವನ್ನು ನಾನು ತಿರಸ್ಕರಿಸಿದ್ದೆ ಎಂದು ಬರೆದುಕೊಂಡಿದ್ದರು..

Quinton de Kock takes the knee
ಕ್ವಿಂಟನ್ ಡಿ ಕಾಕ್​
author img

By

Published : Oct 30, 2021, 9:15 PM IST

ಶಾರ್ಜಾ : ದಕ್ಷಿಣ ಆ್ರಫ್ರಿಕಾದ ವಿಕೆಟ್​ ಕೀಪರ್-ಬ್ಯಾಟರ್​ ಕ್ವಿಂಟನ್​ ಡಿಕಾಕ್​ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮಂಡಿಯೂರುವ ಮೂಲಕ ಬ್ಲ್ಯಾಕ್​ ಲೈವ್ಸ್​​ ಮ್ಯಾಟರ್​ಗೆ ಬೆಂಬಲಿಸಿದ್ದಾರೆ. ಕಳೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅವರು ಮಂಡಿಯೂರಲು ನಿರಾಕರಿಸಿ ಪಂದ್ಯದಿಂದ ಹೊರಗುಳಿದಿದ್ದರು. ಇದು ಕ್ರಿಕೆಟ್​ ಲೋಕದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು.

ವರ್ಣಬೇಧ ನೀತಿಯನ್ನು ಕಂಡಿಸಿ ವಿಶ್ವದಾದ್ಯಂತ ಬ್ಲ್ಯಾಕ್​ ಲೈವ್ಸ್​ ಮ್ಯಾಟರ್​ ಆಂದೋಲನ ನಡೆಯುತ್ತಿದೆ. ಕಳೆದ ಒಂದು ವರ್ಷದಿಂದ ಕ್ರೀಡಾ ಜಗತ್ತು ಕೂಡ ಪಂದ್ಯಾರಂಭಕ್ಕೂ ಮುನ್ನ ಮಂಡಿಯೂರಿ ಕುಳಿತುಕೊಳ್ಳುವ ಮೂಲಕ ಬಿಎಲ್​ಎಸ್​ ಆಂದೋಲನಕ್ಕೆ ಬೆಂಬಲ ಸೂಚಿಸುತ್ತಿವೆ.

ಇದೀಗ ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲೂ ಹಲವು ತಂಡಗಳು ಈ ಚಳವಳಿಗೆ ಬೆಂಬಲ ನೀಡಿದ್ದವು. ಆದರೆ, ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ ಎಲ್ಲಾ ಆಟಗಾರರಿಗೂ ಮಂಡಿಯೂರಲು ನೀಡಿದ್ದ ಆದೇಶವನ್ನು ಡಿಕಾಕ್ ಖಂಡಿಸಿದ್ದರು. ಇವರ ನಿರ್ಧಾರ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ಟೀಕೆಗೆ ಒಳಗಾಗಿತ್ತು.

ನಂತರ ಡಿಕಾಕ್​ ಸಾಮಾಜಿಕ ಜಾಲಾತಾಣದಲ್ಲಿ ಸುದೀರ್ಘ ಪತ್ರದಲ್ಲಿ ತಮ್ಮ ತಂಡದ ಸಹ ಆಟಗಾರರು ಮತ್ತು ಅಭಿಮಾನಿಗಳನ್ನು ಕ್ಷಮೆ ಕೋರಿದ್ದರು. ಅಲ್ಲದೆ ತಾವೂ ಬಾಲ್ಯದಿಂದಲೂ ಕಪ್ಪು ವರ್ಣೀಯರ ಜೊತೆಯೇ ಬೆಳೆದಿದ್ದೇನೆ, ತಮ್ಮ ಮಲತಾಯಿ ಮತ್ತು ಮಲ ಸಹೋದರಿಯರು ಕೂಡ ಕಪ್ಪು ವರ್ಣದವರು.

ನಾನು ಮಂಡಿಯೂರುವುದರಿಂದ ಕಪ್ಪು ವರ್ಣೀಯರಿಗೆ ಒಳ್ಳೆಯದಾಗುತ್ತದೆ ಎಂದರೆ ನಾನು ಖುಷಿಯಿಂದ ಮಾಡುತ್ತಿದ್ದೆ. ಆದರೆ, ನಾನು ಕಪ್ಪು ಜನಾಂಗದವರೊಡನೆ ಬೆಳೆದಿದ್ದೇನೆ, ಅವರ ಜೊತೆಗೆ ಕಲಿತಿದ್ದೇನೆ, ಹೀಗಿರುವಾಗ ಕೇವಲ ಸನ್ನೆಯ ಮೂಲಕ ಹೋರಾಟ ಮಾಡುವುದಕ್ಕೆ ನೀಡಿದ ಆದೇಶವನ್ನು ನಾನು ತಿರಸ್ಕರಿಸಿದ್ದೆ ಎಂದು ಬರೆದುಕೊಂಡಿದ್ದರು.

ಇದೀಗ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮಂಡಿಯೂರಿ ಕುಳಿತು ಬ್ಲ್ಯಾಕ್​ ಲೈವ್ಸ್​​ ಮ್ಯಾಟರ್​ಗೆ ಬೆಂಬಲ ಸೂಚಿಸಿ ವಿವಾದಕ್ಕೆ ಅಂತ್ಯವಾಡಿದ್ದಾರೆ.

ಇದನ್ನೂ ಓದಿ:ಬ್ಲ್ಯಾಕ್ ಲೈವ್ಸ್​ ಮ್ಯಾಟರ್ ವಿವಾದ​: ಅಭಿಮಾನಿಗಳು, ಸಹ ಆಟಗಾರರಿಗೆ ಕ್ಷಮೆಯಾಚಿಸಿದ ಡಿಕಾಕ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.