ETV Bharat / sports

ಐಪಿಎಲ್​ ಗೀತೆ ಬಿಡುಗಡೆ: ಪಂದ್ಯ ಆರಂಭ ವಿಳಂಬ - ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮಹಿಳಾ ಪ್ರೀಮಿಯರ್ ಲೀಗ್‌ನ ಅಧಿಕೃತ ಗೀತೆ ಬಿಡುಗಡೆ - ಗಾಯಕ ಶಂಕರ್ ಮಹಾದೇವನ್, ನೀತಿ ಮೋಹನ್ ಮತ್ತು ಹರ್ದೀಪ್ ಕೌರ್ ಧ್ವನಿ - ಉದ್ಘಾಟನಾ ಸಮಾರಂಭದ ಹಿನ್ನೆಲೆ ಪಂದ್ಯ ವಿಳಂಬ

official anthem for wpl yeh toh bas shuruat hai launched
ಐಪಿಎಲ್​ ಗೀತೆ ಬಿಡುಗಡೆ: ಪಂದ್ಯಾರಂಭ ವಿಳಂಬ
author img

By

Published : Mar 4, 2023, 5:37 PM IST

ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ ಅಂದರೆ ಡಬ್ಲ್ಯುಪಿಎಲ್‌ನ ಅಧಿಕೃತ ಗೀತೆಯನ್ನು ಬಿಡುಗಡೆ ಮಾಡಲಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಗೀತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಗಾಯಕ ಶಂಕರ್ ಮಹಾದೇವನ್, ನೀತಿ ಮೋಹನ್ ಮತ್ತು ಹರ್ದೀಪ್ ಕೌರ್ ಅವರು 'ಯೇ ತೋ ಬಾಸ್ ಶುರುವಾತಿ ಹೈ' ಗೀತೆಗೆ ಧ್ವನಿ ನೀಡಿದ್ದಾರೆ. ಎರಡು ನಿಮಿಷಗಳ ಈ ವಿಡಿಯೋದಲ್ಲಿ ದೀಪ್ತಿ ಶರ್ಮಾ, ಶೆಫಾಲಿ ವರ್ಮಾ ಸೇರಿದಂತೆ ಹಲವು ಕ್ರಿಕೆಟಿಗರು ಕಾಣಿಸಿಕೊಂಡಿದ್ದಾರೆ. ಮಹಿಳಾ ಕ್ರಿಕೆಟ್ ಬೆಳವಣಿಗೆಯನ್ನು ಗೀತೆಯಲ್ಲಿ ಚಿತ್ರಿಸಲಾಗಿದೆ.

  • 𝗥𝗲𝘀𝗰𝗵𝗲𝗱𝘂𝗹𝗲𝗱 𝘀𝘁𝗮𝗿𝘁 𝗳𝗼𝗿 #TATAWPL 𝗼𝗽𝗲𝗻𝗶𝗻𝗴 𝗳𝗶𝘅𝘁𝘂𝗿𝗲

    ▶️Gates Open: 4 PM IST
    ▶️Opening Ceremony: 6:25 PM IST
    ▶️Match - Gujarat Giants vs Mumbai Indians
    ▶️Toss: 7:30 PM IST
    ▶️ Match Start: 8 PM IST

    Details 🔽https://t.co/7i3bVgItJr

    — Women's Premier League (WPL) (@wplt20) March 4, 2023 " class="align-text-top noRightClick twitterSection" data=" ">

ಬದಲಾದ WPLನ ಉದ್ಘಾಟನಾ ಸಮಯ: ಡಬ್ಲ್ಯುಪಿಎಲ್‌ನ ಮೊದಲ ಆವೃತ್ತಿಯ ಉದ್ಘಾಟನಾ ಪಂದ್ಯಕ್ಕೂ ಮುನ್ನ ಅದ್ಭುತ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಡಬ್ಲ್ಯುಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬಿಸಿಸಿಐ ವಿಶೇಷ ಸಿದ್ಧತೆ ನಡೆಸಿದೆ. ಮೊದಲು ಉದ್ಘಾಟನಾ ಸಮಾರಂಭದ ಸಮಯ 5:30 ಆರಂಭಿಸುವುದು ಎಂದು ನಿರ್ಣಯಿಸಲಾಗಿತ್ತು. ಆದರೆ ಈಗ ಸಮಯ ಬದಲಾವಣೆ ಮಾಡಲಾಗಿದೆ. ಉದ್ಘಾಟನಾ ಸಮಾರಂಭವು 6:25 ರಿಂದ ಪ್ರಾರಂಭವಾಗಲಿದೆ. ಕೃತಿ ಸನೋನ್, ಕಿಯಾರಾ ಅಡ್ವಾಣಿ ಮತ್ತು ಗಾಯಕ ಎಪಿ ಧಿಲ್ಲೋನ್ ಉದ್ಘಾಟನಾ ಸಮಾರಂಭದಲ್ಲಿ ವರ್ಣರಂಜಿತ ಪ್ರದರ್ಶನ ನೀಡಲಿದ್ದಾರೆ. ಸಮಾರಂಭದ ನಂತರ 7:30 ಕ್ಕೆ ಟಾಸ್ ಮಾಡಲಾಗುವುದು ಎಂದು ಟ್ವಿಟರ್​ನಲ್ಲಿ ತಿಳಿಸಲಾಗಿದೆ.

ಮೊದಲ ಪಂದ್ಯ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ: ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯ ಇಂದು ಬೆಳಿಗ್ಗೆ 8:00 ರಿಂದ ನಡೆಯಲಿದೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸಲಾಗಿದೆ. ಮುಂಬೈ ಇಂಡಿಯನ್ಸ್‌ಗೆ ಹರ್‌ಪ್ರೀತ್ ಕೌರ್ ನಾಯಕತ್ವ ವಹಿಸಿದ್ದರೆ, ಗುಜರಾತ್ ಜೈಂಟ್ಸ್ ಆಸ್ಟ್ರೇಲಿಯಾದ ಬೆತ್ ಮೂನಿ ಮುಂದಾಳತ್ವದಲ್ಲಿ ನಡೆಯಲಿದೆ.

ಮಹಿಳಾ ಪ್ರೀಮಿಯರ್ ಲೀಗ್ ಅನ್ನು ಮಾರ್ಚ್ 4 ರಿಂದ ಮಾರ್ಚ್ 26 ರವರೆಗೆ ಆಯೋಜಿಸಲಾಗಿದೆ. WPLನ ಉದ್ಘಾಟನಾ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಸ್​ ತಂಡಗಳು ಭಾಗವಹಿಸಲಿವೆ. ಲೀಗ್​ನ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್‌ ಮತ್ತು ಗುಜರಾತ್ ಜೈಂಟ್ಸ್ ಆಡಿದೆರೆ, ಅಂತಿಮ ಪಂದ್ಯವು ಯುಪಿ ವಾರಿಯರ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮಾರ್ಚ್ 21 ರಂದು ಬ್ರಬೋರ್ನ್ ಸ್ಟೇಡಿಯಂ ಸ್ಪರ್ಧಿಸಲಿವೆ. ಮಾರ್ಚ್ 24 ರಂದು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಮಹಿಳೆಯರ ಪ್ರೀಮಿಯರ್ ಲೀಗ್ 2023 ರ ಫೈನಲ್ ಮಾರ್ಚ್ 26 ರಂದು ಬ್ರಬೋರ್ನ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಮುಂಬೈ ಇಂಡಿಯನ್ಸ್ (ಎಂಐ): ಹರ್ಮನ್‌ಪ್ರೀತ್ ಕೌರ್ (ನಾಯಕಿ), ನ್ಯಾಟ್ ಸಿವರ್-ಬ್ರಂಟ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಯಾಸ್ತಿಕಾ ಭಾಟಿಯಾ, ಹೀದರ್ ಗ್ರಹಾಂ, ಇಸ್ಸಿ ವಾಂಗ್, ಅಮನ್‌ಜೋತ್ ಕೌರ್, ಧಾರಾ ಗುಜ್ಜರ್, ಶೈಕಾ ಇಶಾಕ್, ಹೇಲಿ ಮ್ಯಾಥ್ಯೂಸ್, ಕ್ಲೋಯ್ ಟ್ರಯಾನ್, ಹುಮೈರಾ ಕಝೀ, ಸೋನಂಕಾ ಬಾಲಾ, ಪ್ರಿಯಾಂಕಾ ಬಾಲಾ ಜಿಂತಾಮಣಿ ಕಲಿತಾ, ನೀಲಂ ಬಿಷ್ಟ್ ಇದ್ದಾರೆ.

ಗುಜರಾತ್ ಜೈಂಟ್ಸ್ (ಜಿಟಿ): ಬೆತ್ ಮೂನಿ (ನಾಯಕಿ), ಆಶ್ಲೇ ಗಾರ್ಡ್ನರ್, ಸೋಫಿಯಾ ಡಂಕ್ಲಿ, ಅನ್ನಾಬೆಲ್ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಡಿಯಾಂಡ್ರಾ ಡಾಟಿನ್, ಸ್ನೇಹ ರಾಣಾ, ಎಸ್ ಮೇಘನಾ, ಜಾರ್ಜಿಯಾ ವೇರ್ಹ್ಯಾಮ್, ಮಾನಸಿ ಜೋಶಿ, ಡಿ ಹೇಮಲತಾ, ತನುಜಾ ಕನ್ವರ್, ಮೋನಿಕಾ ಪಟೇಲ್, ಸುಷ್ಮಾ ವರ್ಮಾ, ಅಶ್ವಿನಿ ಕುಮಾರಿ ಗಾಲಾ, ಪರುನಿಕಾ ಸಿಸೋಡಿಯಾ, ಶಬ್ನಮ್ ಇದ್ದಾರೆ.

ಇದನ್ನೂ ಓದಿ: ಜೂನಿಯರ್​ಗಳಿಂದ ಕಲಿಯಲು ಇದೊಂದು ಉತ್ತಮ ವೇದಿಕೆ: ಹರ್ಮನ್​ಪ್ರಿತ್​ ಕೌರ್​

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.