ಲಖನೌ(ಉತ್ತರಪ್ರದೇಶ) : ಮೊದಲ ಪಂದ್ಯದಲ್ಲಿ ಲಂಕಾ ದಹನ ಮಾಡಿದ್ದ ದಕ್ಷಿಣ ಆಫ್ರಿಕಾ, ಎರಡನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಇಂದು 134 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕಾಂಗರೂ ಪಡೆ ವಿಶ್ವಕಪ್‌ನಲ್ಲಿ ಸತತ ಎರಡನೇ ಸೋಲು ಕಂಡಿತು. ಪಾಯಿಂಟ್ ಪಟ್ಟಿಯಲ್ಲಿ ಹರಿಣಗಳು ಟಾಪ್ಗೆ ಬಂದರೆ, ಆಸೀಸ್ ಕೊನೆಯ ಎರಡನೇ ಸ್ಥಾನಕ್ಕೆ ಕುಸಿಯಿತು.
-
All-round excellence helps South Africa continue their victorious run in the #CWC23 💪#AUSvSA 📝: https://t.co/Z70038nwZ3 pic.twitter.com/ICgBe51Lj9
— ICC Cricket World Cup (@cricketworldcup) October 12, 2023 " class="align-text-top noRightClick twitterSection" data="
">All-round excellence helps South Africa continue their victorious run in the #CWC23 💪#AUSvSA 📝: https://t.co/Z70038nwZ3 pic.twitter.com/ICgBe51Lj9
— ICC Cricket World Cup (@cricketworldcup) October 12, 2023All-round excellence helps South Africa continue their victorious run in the #CWC23 💪#AUSvSA 📝: https://t.co/Z70038nwZ3 pic.twitter.com/ICgBe51Lj9
— ICC Cricket World Cup (@cricketworldcup) October 12, 2023
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿಕಾಕ್ ಶತಕ ಐಡನ್ ಮಾರ್ಕ್ರಮ್ ಅರ್ಧಶತಕದ ನೆರವಿನಿಂದ 7 ವಿಕೆಟ್ಗೆ 311 ರನ್ಗಳ ಸವಾಲು ನೀಡಿತು. ಇದನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 177 ರನ್ಗೆ ಆಲೌಟ್ ಆಗಿ 134 ರನ್ಗಳಿಂದ ಮಂಡಿಯೂರಿತು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ 40 ವರ್ಷಗಳ ಬಳಿಕ ದೊಡ್ಡ ಮೊತ್ತದ ಸೋಲು ಅನುಭವಿಸಿತು. 1983 ರಲ್ಲಿ 118 ರನ್ಗಳಿಂದ ಸೋಲು ಕಂಡಿತ್ತು.
ಅರ್ಧಶತಕವೂ ಗಳಿಸದ ಆಸೀಸ್ ಬ್ಯಾಟರ್ಸ್: ವಿಶ್ವಕಪ್ಗೂ ಮುನ್ನ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಸತತ ಸೋಲು ಕಂಡಿದ್ದ ಆಸೀಸ್, ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಆಟ ಮುಂದುವರಿಸಿತು. ಯಾವೊಬ್ಬ ಬ್ಯಾಟರ್ ಕೂಡ ಅರ್ಧಶತಕ ಕೂಡ ದಾಖಲಿಸಲಿಲ್ಲ. ಮಾರ್ನಸ್ ಲಬುಶೇನ್ 46 ರನ್ ಗಳಿಸಿದ್ದೇ ತಂಡದ ಆಟಗಾರನ ಅತ್ಯಧಿಕ ಮೊತ್ತ. 70 ರನ್ಗೆ ಅಗ್ರ ಕ್ರಮಾಂಕದ 6 ಬ್ಯಾಟರ್ಗಳು ಪೆವಿಲಿಯನ್ ಸೇರಿದರು.
ಕಾಂಗರೂ ಪಡೆಯ ವಿರುದ್ಧ ಆರಂಭದಿಂದಲೇ ದಂಡೆತ್ತಿ ಹೋದ ಆಫ್ರಿಕಾದ ಬೌಲರ್ಗಳು ಯಾವ ಹಂತದಲ್ಲೂ ಜೊತೆಯಾಟ ಕಟ್ಟದಂತೆ ನೋಡಿಕೊಂಡರು. ತಂಡದ ಪ್ರಮುಖ ಬ್ಯಾಟರ್ಗಳಾದ ಮಿಚೆಲ್ ಮಾರ್ಸ್ 7, ಡೇವಿಡ್ ವಾರ್ನರ್ 13, ಸ್ಟೀವನ್ ಸ್ಮಿತ್ 19, ಗ್ಲೆನ್ ಮ್ಯಾಕ್ಸ್ವೆಲ್ 3, ಮಾರ್ಕಸ್ ಸ್ಟೊಯಿನೀಸ್ 5 ರನ್ಗೆ ವಿಕೆಟ್ ನೀಡಿದ್ದು, ಕುಸಿತಕ್ಕೆ ಕಾರಣವಾಯಿತು.
ಹರಿಣಗಳ ಅದ್ಭುತ ಪ್ರದರ್ಶನ: ಬ್ಯಾಟಿಂಗ್ನಲ್ಲಿ ಕ್ವಿಂಟನ್ ಡಿಕಾಕ್ ವಿಶ್ವಕಪ್‌ನಲ್ಲಿ ಸತತ 2ನೇ ಶತಕ ದಾಖಲಿಸಿದರು. 106 ಎಸೆತಗಳಲ್ಲಿ 109 ರನ್ ಮಾಡಿದ 8 ಬೌಂಡರಿ, 5 ಸಿಕ್ಸರ್ ಬಾರಿಸಿದರು. ಇನ್ನೊಂದೆಡೆ ಐಡನ್ ಮಾರ್ಕ್ರಮ್ (56) ಅರ್ಧಶತಕ ಗಳಿಸಿದರು. ಉಳಿದ ಬ್ಯಾಟರ್ಗಳ ಅಲ್ಪ ಕಾಣಿಕೆ ನೀಡಿದರು. ಮಾರಕ ದಾಳಿ ಬೌಲಿಂಗ್ನಲ್ಲಿ ನಡೆಸಿದ ಕಗಿಸೋ ರಬಾಡ 3, ಶಂಶಿ, ಕೇಶವ್ ಮಹಾರಾಜ್, ಮಾರ್ಕೋ ಜೆನ್ಸೆನ್ ತಲಾ 2 ವಿಕೆಟ್ ಉರುಳಿಸಿದರು.
-
A second successive #CWC23 ton helps Quinton de Kock win the @aramco #POTM ⚡#AUSvSA pic.twitter.com/EJicL7lRQ7
— ICC Cricket World Cup (@cricketworldcup) October 12, 2023 " class="align-text-top noRightClick twitterSection" data="
">A second successive #CWC23 ton helps Quinton de Kock win the @aramco #POTM ⚡#AUSvSA pic.twitter.com/EJicL7lRQ7
— ICC Cricket World Cup (@cricketworldcup) October 12, 2023A second successive #CWC23 ton helps Quinton de Kock win the @aramco #POTM ⚡#AUSvSA pic.twitter.com/EJicL7lRQ7
— ICC Cricket World Cup (@cricketworldcup) October 12, 2023
ವಿಶ್ವಕಪ್ ಕಳಪೆ ಆಟ: ಐದು ಬಾರಿಯ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ 1992 ರ ಬಳಿಕ ಇದೇ ಮೊದಲ ಬಾರಿಗೆ ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿತು. ಮೊದಲ ಪಂದ್ಯದಲ್ಲಿ 199 ರನ್ಗೆ ಆಲೌಟ್ ಆಗಿದ್ದ ತಂಡ, ಹರಿಣಗಳ ವಿರುದ್ಧ 177 ರನ್ಗೆ ಗಂಟುಮೂಟೆ ಕಟ್ಟಿತು. ಇದು ವಿಶ್ವಕಪ್‌ನಲ್ಲಿ ಮೂರನೇ ಅತಿಕಡಿಮೆ ಮೊತ್ತವಾಗಿದೆ. 134 ರನ್ಗಳಿಂದ ಸೋತ ಕಾಂಗರೂ ಪಡೆ 40 ವರ್ಷಗಳ ಬಳಿಕ ದೊಡ್ಡ ಅಂತರದಿಂದ ಸೋಲು ಕಂಡಿತು. 1983 ರಲ್ಲಿ ಭಾರತ ವಿರುದ್ಧ 118 ರನ್ಗೆ ಆಲೌಟ್ ಆಗಿತ್ತು.
ಆಫ್ರಿಕಾ ವಿರುದ್ಧ ಸತತ ಸೋಲು: ವಿಶ್ವಕಪ್ನ 'ಚೋಕರ್ಸ್' ಖ್ಯಾತಿಯ ದಕ್ಷಿಣ ಆಫ್ರಿಕಾ ಆಸೀಸ್ ವಿರುದ್ಧ ಗೆಲುವಿನ ದಾಖಲೆ ಮುಂದುವರಿಸಿತು. ಕಳೆದ 11 ಏಕದಿನದಲ್ಲಿ 9 ಬಾರಿ ಗೆದ್ದಿದೆ. ಐದು ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಮೊದಲೆರಡು ಸೋತಿದ್ದ ತಂಡ ಉಳಿದ ಮೂರು ಮ್ಯಾಚ್ಗಳಲ್ಲಿ ನೂರಕ್ಕೂ ಅಧಿಕ ರನ್ಗಳ ಅಂತರದಲ್ಲಿ ಗೆದ್ದು ಬೀಗಿತು. ಈ ಪಂದ್ಯದಲ್ಲೂ 134 ರನ್ನಿಂದ ಗೆದ್ದಿತು. ಅಲ್ಲದೇ, ಕಳೆದ 6 ಪಂದ್ಯಗಳಲ್ಲಿ ಸರಾಸರಿ ನೂರು ರನ್ ಅಂತರದಲ್ಲಿ ಗೆಲುವು ಕಂಡಿದ್ದು, ತಂಡದ ಅದ್ಭುತ ಲಯಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಜ್ವರದಿಂದ ಚೇತರಿಸಿಕೊಂಡು ಒಂದು ಗಂಟೆ ನೆಟ್ ಅಭ್ಯಾಸ ಮಾಡಿದ ಕ್ರಿಕೆಟಿಗ ಶುಭ್ಮನ್ಗಿಲ್