ವೆಲ್ಲಿಂಗ್ಟನ : ಮುಂದೂಡಲ್ಪಟ್ಟ ಇಂಡಿಯನ್ಸ್ ಪ್ರೀಮಿಯರ್ ಲೀಗ್ನ ಭಾಗವಾಗಿದ್ದ ಕಿವೀಸ್ ಆಟಗಾರರು ಭಾರತ ತಂಡದ ವಿರುದ್ಧ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗಾಗಿ ಈ ವಾರಂತ್ಯಕ್ಕೆ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಕಿವೀಸ್ ಕೋಚ್ ಗ್ಯಾರಿ ಸ್ಟೆಡ್ ತಿಳಿಸಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಆರ್ಸಿಬಿಯ ಕೈಲ್ ಜೆಮೀಸನ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಿಚೆಲ್ ಸ್ಯಾಂಟ್ನರ್ ಹಾಗೂ ಪಿಸಿಯೋ ಟಾಮಿ ಸೆಮ್ಸೆರ್ಕ್ ಪ್ರಸ್ತುತ ಮಾಲ್ಡೀವ್ಸ್ನಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.
ನನಗೆ ಅವರ ಬಗ್ಗೆ ಸಂಪೂರ್ಣ ವಿವಿರ ತಿಳಿದಿಲ್ಲ. ಅವರು (ಮೇ 15,16, 17) ಈ ವಾರದ ಅಂತ್ಯದಲ್ಲಿ ಇಂಗ್ಲೆಂಡ್ಗೆ ತೆರಳಲು ಎದುರು ನೋಡುತ್ತಿದ್ದಾರೆ ಎಂಬುದು ನನಗೆ ತಿಳಿದು ಬಂದಿದೆ. ನನ್ನ ಅನಿಸಿಕೆ ಏನೆಂದರೆ, ನ್ಯೂಜಿಲ್ಯಾಂಡ್ಗೆ ಬದಲಾಗಿ ಮಾಲ್ಡೀವ್ಸ್ನಿಂದ ಬರುವುದರ ಕುರಿತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕಾರ್ಯ ನಿರ್ವಹಿಸುತ್ತಿದೆ ಎಂದು ಸ್ಟೆಡ್ ತಿಳಿಸಿದ್ದಾರೆ.
ಏಕೆಂದರೆ ಮಾಲ್ಡೀವ್ಸ್ ಕೂಡ ಇಂಗ್ಲೆಂಡ್ನ ರೆಡ್ಲಿಸ್ಟ್ನಲ್ಲಿದೆ. ಇದರರ್ಥ ಮಾಲ್ಡೀವ್ಸ್ನಿಂದ ಇಂಗ್ಲೆಂಡ್ಗೆ ನೇರವಾಗಿ ವಿಮಾನಯಾನಕ್ಕೆ ಅನುಮತಿ ಇಲ್ಲ. ಆದರೆ, ಸ್ಥಳೀಯರು ಬಂದರೆ ಸರ್ಕಾರ ಗೊತ್ತು ಮಾಡಿರುವ ಸ್ಥಳದಲ್ಲಿ 10 ದಿನಗಳ ಕಾಲ ಕ್ವಾರಂಟೈನ್ ಮಾಡಬೇಕಿರುತ್ತದೆ.
ಇದೇ ಸಂದರ್ಭದಲ್ಲಿ ಟ್ರೆಂಟ್ ಬೌಲ್ಟ್ ಬಗ್ಗೆ ಮಾತನಾಡಿರುವ ಸ್ಟೆಡ್, ಅವರು ಕೇವಲ ಭಾರತದ ವಿರುದ್ದದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಮಾತ್ರ ಲಭ್ಯರಿರುತ್ತಾರೆ, ಇಂಗ್ಲೆಂಡ್ ವಿರುದ್ಧದ ಸರಣಿ ವೇಳೆ ಅವರು ಕುಟುಂಬದ ಜೊತೆ ಇರಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಧೋನಿ ಭಾಯ್ ಮಾರ್ಗದರ್ಶನ ಮಿಸ್ ಮಾಡ್ಕೊಳ್ತಿದೀನಿ: ಕುಲ್ದೀಪ್ ಯಾದವ್