ETV Bharat / sports

ಇಂಗ್ಲೆಂಡ್ ವಿರುದ್ಧದ ಟೆಸ್ಟ್​​ ಸರಣಿಗಾಗಿ ಲಂಡನ್​ಗೆ ತೆರಳಿದ ನ್ಯೂಜಿಲ್ಯಾಂಡ್​ ಟೀಮ್

ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್​ನ ರೋಸ್​ ಬೌಲ್​ನಲ್ಲಿ ಜೂನ್​ 18 ರಿಂದ 22 ರವರೆಗೆ ನಡೆಯಲಿದೆ. ಇದಕ್ಕೂ ಮುನ್ನ ಜೂನ್​ 2 ರಿಂದ 6ರವರೆಗೆ ಲಂಡನ್​ನಲ್ಲಿ ಇಂಗ್ಲೆಂಡ್ ಮತ್ತು ಕಿವೀಸ್ ನಡುವೆ ಮೊದಲ ಮೊದಲ ಟೆಸ್ಟ್​ ಮತ್ತು ಜೂನ್​ 10ರಿಂದ 14ರ ವರೆಗೆ ಬರ್ಮಿಂಗ್​ಹ್ಯಾಮ್​ನಲ್ಲಿ 2ನೇ ಟೆಸ್ಟ್​ ಪಂದ್ಯ ನಡೆಯಲಿದೆ.

ಇಂಗ್ಲೆಂಡ್ vs ನ್ಯೂಜಿಲ್ಯಾಂಡ್
ಇಂಗ್ಲೆಂಡ್ vs ನ್ಯೂಜಿಲ್ಯಾಂಡ್
author img

By

Published : May 29, 2021, 3:18 PM IST

ಸೌತಾಂಪ್ಟನ್​: ವಿಶ್ವಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ನಡೆಯುವ ಸೌತಾಂಪ್ಟನ್​ ಪರಿಸ್ಥಿತಿಗೆ ಹೊಂದಿಕೊಂಡಿದ್ದ ನ್ಯೂಜಿಲ್ಯಾಂಡ್ ತಂಡ, ಇದೀಗ ಆತಿಥೇಯ ಇಂಗ್ಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್​ ಸರಣಿಗಾಗಿ ಲಂಡನ್​ಗೆ ತೆರಳಿದೆ.

ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್​ನ ರೋಸ್​ ಬೌಲ್​ನಲ್ಲಿ ಜೂನ್​ 18 ರಿಂದ 22 ರವರೆಗೆ ನಡೆಯಲಿದೆ. ಇದಕ್ಕೂ ಮುನ್ನ ಜೂನ್​ 2 ರಿಂದ 6ರವರೆಗೆ ಲಂಡನ್​ನಲ್ಲಿ ಇಂಗ್ಲೆಂಡ್ ಮತ್ತು ಕಿವೀಸ್ ನಡುವೆ ಮೊದಲ ಮೊದಲ ಟೆಸ್ಟ್​ ಮತ್ತು ಜೂನ್​ 10ರಿಂದ 14ರ ವರೆಗೆ ಬರ್ಮಿಂಗ್​ಹ್ಯಾಮ್​ನಲ್ಲಿ 2ನೇ ಟೆಸ್ಟ್​ ಪಂದ್ಯ ನಡೆಯಲಿದೆ.

ನ್ಯೂಜಿಲ್ಯಾಂಡ್​ ತಂಡ ಇಂದು ಲಂಡನ್​ಗೆ ಪ್ರಯಾಣಿಸಲಿದೆ ಎಂದು ನ್ಯೂಜಿಲ್ಯಾಂಡ್​ ಕ್ರಿಕೆಟ್​ ಬೋರ್ಡ್​ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಶನಿವಾರ ಪೋಸ್ಟ್​ ಮಾಡಿದ್ದಾರೆ. ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೂ ಮುನ್ನ ಕಿವೀಸ್ ಇಂಟ್ರಾ ಸ್ಕ್ವಾಡ್​ ಅಭ್ಯಾಸ ಪಂದ್ಯ ನಡೆಯಲಿದೆ.

ಇನ್ನು WTC​ ಫೈನಲ್ ಪಂದ್ಯ ಡ್ರಾ ಅಥವಾ ಟೈನಲ್ಲಿ ಅಂತ್ಯವಾದರೆ ಜಂಟಿ ವಿಜೇತರು ಎಂದು ಘೋಷಿಸುವುದಾಗಿ ಐಸಿಸಿ ಶುಕ್ರವಾರ ಘೋಷಿಸಿದೆ. ಇನ್ನು ಈ 5 ದಿನಗಳಲ್ಲಿ ಏನಾದರು ಮಳೆ ಅಥವಾ ಮಂದಬೆಳಕಿನ ಕಾರಣ ಒಂದು ದಿನ ಆಟ ನಡೆಯದಿದ್ದರೆ ಜೂನ್ 23ರ ಮೀಸಲು ದಿನವಾಗಿ ಐಸಿಸಿ ತನ್ನ ನಿಯಮಗಳಲ್ಲಿ ತಿಳಿಸಿದೆ.

ಇದನ್ನು ಓದಿ:ಕ್ರಿಕೆಟ್​ ಪ್ರಿಯರಿಗೆ ಗುಡ್​ನ್ಯೂಸ್.. IPL ಪುನಾರಂಭಿಸಲು BCCI ನಿರ್ಧಾರ.. ಎಲ್ಲಿ ನಡೆಯತ್ತೆ ಮ್ಯಾಚ್?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.