ದುಬೈ: ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯವನ್ನು ಗೆದ್ದ ನ್ಯೂಜಿಲ್ಯಾಂಡ್ ತಂಡ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರತ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಭಾನುವಾರ ನಾಲ್ಕನೇ ದಿನ ಇಂಗ್ಲೆಂಡ್ ತಂಡ ನೀಡಿದ 37 ರನ್ಗಳ ಗುರಿಯನ್ನು ಕಿವೀಸ್ ಕೇವಲ 2 ವಿಕೆಟ್ ಕಳೆದುಕೊಂಡು ಬೆನ್ನಟ್ಟುವ ಮೂಲಕ 22 ವರ್ಷಗಳ ಬಳಿಕ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಜಯಿಸಿತ್ತು.
ಈ ಜಯದ ನೆರವಿನಿಂದ 3 ರೇಟಿಂಗ್ ಅಂಕ ಪಡೆದ ನ್ಯೂಜಿಲ್ಯಾಂಡ್(123 ರೇಟಿಂಗ್) ಭಾರತವನ್ನು ಹಿಂದಿಕ್ಕಿದೆ. ಕೊಹ್ಲಿ ಪಡೆ 121 ಅಂಕದೊಡನೆ 2ನೇ ಸ್ಥಾನ ಅಲಂಕರಿಸಿದೆ. ಆಸ್ಟ್ರೇಲಿಯಾ (108), ಇಂಗ್ಲೆಂಡ್(107) ಮತ್ತು ಪಾಕಿಸ್ತಾನ(94) ನಂತರದ ಸ್ಥಾನದಲ್ಲಿದೆ.
-
🇳🇿 The @BLACKCAPS are the new No.1 in the @MRFWorldwide ICC Test Team Rankings, displacing India from the top spot 👏
— ICC (@ICC) June 13, 2021 " class="align-text-top noRightClick twitterSection" data="
Full rankings: https://t.co/79zdXNr0Dv pic.twitter.com/iZuC2gJRrs
">🇳🇿 The @BLACKCAPS are the new No.1 in the @MRFWorldwide ICC Test Team Rankings, displacing India from the top spot 👏
— ICC (@ICC) June 13, 2021
Full rankings: https://t.co/79zdXNr0Dv pic.twitter.com/iZuC2gJRrs🇳🇿 The @BLACKCAPS are the new No.1 in the @MRFWorldwide ICC Test Team Rankings, displacing India from the top spot 👏
— ICC (@ICC) June 13, 2021
Full rankings: https://t.co/79zdXNr0Dv pic.twitter.com/iZuC2gJRrs
ಕಳೆದ ತಿಂಗಳ ವಾರ್ಷಿಕ ರ್ಯಾಂಕಿಂಗ್ನಲ್ಲಿ ಭಾರತ ತಂಡ ಅಗ್ರಸ್ಥಾನಕ್ಕೇರುವ ಮೂಲಕ ಸತತ 2ನೇ ಬಾರಿ ಟೆಸ್ಟ್ ಚಾಂಪಿಯನ್ ಮೇಸ್ ಪಡೆದಿತ್ತು. ಇದೇ ತಿಂಗಳು ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ಟೆಸ್ಟ್ ಚಾಂಪಿಯನ್ಶಿಪ್ ಇರುವುದರಿಂದ ಈ ಶ್ರೇಯಾಂಕ ಮತ್ತೆ ಬದಲಾಗುವ ಸಾಧ್ಯತೆಯಿದೆ.
ನ್ಯೂಜಿಲ್ಯಾಂಡ್ ತಂಡ ಟೆಸ್ಟ್ನಲ್ಲಿ ಮಾತ್ರವಲ್ಲದೇ ಏಕದಿನ ಕ್ರಿಕೆಟ್ನಲ್ಲೂ ನಂಬರ್ 1 ಸ್ಥಾನ ಪಡೆದುಕೊಂಡಿದೆ. ಆಸ್ಟ್ರೇಲಿಯಾ 2 ಮತ್ತು ಭಾರತ 3ನೇ ಸ್ಥಾನದಲ್ಲಿದೆ. ಟಿ-20 ಯಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ದರೆ ಭಾರತ 2ನೇ ಸ್ಥಾನದಲ್ಲಿದೆ. ಕಿವೀಸ್ 3ನೇ ಸ್ಥಾನದಲ್ಲಿದೆ.
ಇದನ್ನು ಓದಿ:ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದು ಬೀಗಿದ ನ್ಯೂಜಿಲೆಂಡ್; ವಿಶ್ವಚಾಂಪಿಯನ್‌ಶಿಪ್ ಫೈನಲ್‌ಗೂ ಮುನ್ನ ಭಾರತಕ್ಕೆ ಸವಾಲು