ETV Bharat / sports

ಬಿಸಿಸಿಐನ ಮಾಜಿ ಸಂಖ್ಯಾಶಾಸ್ತ್ರಜ್ಞ ದಿನಾರ್​ ಗುಪ್ಟೆ ಕೊರೊನಾಗೆ ಬಲಿ

author img

By

Published : May 6, 2021, 3:55 PM IST

ಬಿಸಿಸಿಐನ ಮಾಜಿ ಸಂಖ್ಯಾಶಾಸ್ತ್ರಜ್ಞ ದಿನಾರ್​ ಗುಪ್ಟೆ ಕೊರೊನಾಗೆ ಬಲಿಯಾಗಿದ್ದಾರೆ. ಅವರು ತಮ್ಮ 76ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. ಅವರು 1999ರ ಏಕದಿನ ವಿಶ್ವಕಪ್​ನಲ್ಲಿ ಟೀಂ​ ಇಂಡಿಯಾದ ಅಧಿಕೃತ ಸ್ಕೋರರ್​ ಆಗಿ ಕಾರ್ಯ ನಿರ್ವಹಿಸಿದ್ದರು.

ಬಿಸಿಸಿಐನ ಮಾಜಿ ಸಂಖ್ಯಾಶಾಸ್ತ್ರಜ್ಞ ದಿನಾರ್​ ಗುಪ್ಟೆ ನಿಧನ

ವಡೋದರ: ಬಿಸಿಸಿಐ ಸೇರಿದಂತೆ ಕ್ರಿಕೆಟ್​ ಸಂಖ್ಯಾಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದ ದಿನಾರ್​ ಗುಪ್ಟೆ ಇಂದು ಕೋವಿಡ್​ 19ಗೆ ಬಲಿಯಾಗಿದ್ದಾರೆ ಎಂದು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ ತಿಳಿಸಿದೆ.

ಗುಪ್ಟೆ ತಮ್ಮ 76ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. ಅವರು 1999ರ ಏಕದಿನ ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಅಧಿಕೃತ ಸ್ಕೋರರ್​ ಆಗಿ ಕಾರ್ಯ ನಿರ್ವಹಿಸಿದ್ದರು.

"ದಿನಾರ್​ ಅವರು ವಡೋದರಾ ಮೂಲದವರು. ಕೋವಿಡ್​ 19 ವಿರುದ್ಧ ಹೋರಾಡುತ್ತಿದ್ದ ಅವರು ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು 1970ರಿಂದ ಬಿಸಿಸಿಐನಲ್ಲಿ ಅಂಕಿಅಂಶ ತಜ್ಞರಾಗಿ 15 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು.

ಇದಲ್ಲದೆ ಸೌರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್, ಆಲ್​ ಇಂಡಿಯಾ ರೇಡಿಯೋ ಮತ್ತು ಇನ್ನೂ ಕೆಲವು ಕ್ರಿಕೆಟ್​ ಅಸೋಸಿಯೇಷನ್​ಗಳಲ್ಲೂ ಸಂಖ್ಯಾಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸಿದ್ದರು ಎಂದು ಎಸ್​ಸಿಎ ತಿಳಿಸಿದೆ.

ಗುಪ್ಟೆ ಅವರು ಸದಾ ಕ್ರಿಕೆಟ್​ ಬಗ್ಗೆ ಅಪ್​ಡೇಟ್​ ಆಗಿರುತ್ತಿದ್ದರು ಮತ್ತು ಇತ್ತೀಚಿನ ಅಂಕಿಅಂಶಗಳೊಂದಿಗೆ ಉತ್ತಮವಾಗಿ ಸಂಘಟಿತರಾಗಿದ್ದರು. ಕ್ರಿಕೆಟ್ ಜಗತ್ತಿಗೆ ಅವರು ನೀಡಿದ ಕೊಡುಗೆಗಳನ್ನು ಶಾಶ್ವತವಾಗಿ ನೆನಪಿಸಿಕೊಳ್ಳಲಾಗುವುದು" ಎಂದು ಎಸ್​ಎಸಿ ಹೇಳಿದೆ.

ಇದನ್ನು ಓದಿ:ಕೆಟ್ಟ ಆಲೋಚನೆಗಳಿಂದ ದೂರವಿರಲು ಯೋಗ, ಧ್ಯಾನ ಮಾಡುತ್ತೇನೆ: ಪೂಜಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.